Advertisement

ಎಂಡೋ ಸಂತ್ರಸ್ತರಿಗೆ ಧನಸಹಾಯ ವಿತರಣೆ

02:11 PM Mar 31, 2017 | |

ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರಿಗಿರುವ 3ನೇ ಕಂತಿನ ಧನಸಹಾಯ ವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿತರಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಡೋಸಲ್ಫಾನ್‌ ಪೀಡಿತ ಪಂ.ಗಳ 110 ಮಂದಿಗೆ ಧನಸಹಾಯ ವಿತರಿಸ ಲಾಯಿತು. ಅಭಿನವ್‌ (ಅಜಾನೂರು), ಸುಹರಾ (ಬದಿಯಡ್ಕ), ಗಾಯತ್ರಿ (ಬೆಳ್ಳೂರು), ಕೀರ್ತಿ (ಎಣ್ಮಕಜೆ),  ಸಂದೀಪ್‌ (ಕಳ್ಳಾರ್‌),  ನಿಧೀಶ್‌ (ಕಾರಡ್ಕ), ಕೆ.ವಿ. ಸಜಿತ  (ಕಯ್ನಾರು-ಚೀಮೇನಿ), ಅಹಮ್ಮದ್‌ ಕುಂಞಿ (ಕುಂಬಾxಜೆ), ಉಸ್ಮಾನ್‌(ಮುಳಿಯಾರು) ಟೋನಿ (ಪನತ್ತಡಿ), ಆದರ್ಶ್‌ (ಪುಲ್ಲೂರು-ಪೆರಿಯ) ಅವರಿಗೆ ಮುಖ್ಯಮಂತ್ರಿ ಗಳಿಂದ ಧನಸಹಾಯವನ್ನು ಸ್ವೀಕರಿಸಿದರು. ಬಾಕಿ 99 ಮಂದಿಗೆ ಜಿಲ್ಲಾಧಿಕಾರಿ  ಕಚೇರಿಯಲ್ಲಿ ಆಯಾಯ ಪಂಚಾಯತ್‌ಗಾಗಿ ಆಯೋಜಿಸಿದ ಕೌಂಟರ್‌ಗಳಲ್ಲಿ ಧನಸಹಾಯ ನೀಡಲಾಯಿತು.

3,550 ಮಂದಿ ಎಂಡೋ ಸಂತ್ರಸ್ತರಿಗೆ ಮೂರನೇ ಕಂತಿನಲ್ಲಿ 56.76 ಕೋಟಿ ರೂ. ಮಂಜೂರು ಮಾಡಲಾಗಿದೆ. ಎಂಡೋ ಸಂತ್ರಸ್ತ ಯಾದಿಯಲ್ಲಿ ಸೇರ್ಪಡೆಗೊಂಡ ಹಾಸಿಗೆ ಹಿಡಿದ, ಮಂದ ಬುದ್ಧಿ ಸಂಭವಿಸಿದವರಿಗೆ, ಸಾವಿಗೀಡಾದ ಕುಟುಂಬಕ್ಕೆ ಐದು ಲಕ್ಷ ರೂ.ಯಂತೆಯೂ, ದೈಹಿಕ ಅಂಗವೈಕಲ್ಯವುಳ್ಳವರಿಗೆ, ಕ್ಯಾನ್ಸರ್‌ ರೋಗಿಗಳಿಗೆ ಮೂರು ಲಕ್ಷ  ರೂ. ಯಂತೆಯೂ ನೀಡಲು ಸರಕಾರ ತೀರ್ಮಾನಿಸಿದೆ. ಈಗಾಗಲೇ ಎರಡು ಕಂತು ವಿತರಿಸಲಾಗಿದ್ದು, ಗುರುವಾರ ಮೂರನೇ ಕಂತಿನಲ್ಲಿ 110 ಮಂದಿಗೆ 1.32 ಕೋಟಿ ರೂ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿತರಿಸಿದರು. 

ಪೂರ್ಣವಾಗಿ ಹಾಸಿಗೆ ಹಿಡಿದವರಿಗೆ, ಮಂದ ಬುದ್ಧಿಯವರಿಗೆ, ಸಾವಿಗೀಡಾದ ಸಂತ್ರಸ್ತರ ಕುಟುಂಬಕ್ಕೆ ಎರಡು ಲಕ್ಷ ರೂ., ದೈಹಿಕ ಅಂಗವೈಕಲ್ಯ ಸಂಭವಿಸಿದವರಿಗೆ, ಕ್ಯಾನ್ಸರ್‌ ರೋಗಿಗಳಿಗೆ ಒಂದು ಲಕ್ಷ ರೂ.ಯಂತೆ ಮೂರನೇ ಕಂತಿನಲ್ಲಿ ನೀಡಲಾಯಿತು.

ಸರಕಾರ ಎಂಡೋ ಸಂತ್ರಸ್ತರ 
ಪರ: ಪಿಣರಾಯಿ ವಿಜಯನ್‌

ಎಲ್ಲ ಕಾಲದಲ್ಲೂ ರಾಜ್ಯ ಸರಕಾರ ಎಂಡೋ ಸಂತ್ರಸ್ತರ ಪರವಾಗಿದೆ ಎಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು.ಅವರು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಎಂಡೋ ಸಂತ್ರಸ್ತರಿಗೆ ಮೂರನೇ ಕಂತಿನ ಧನ ಸಹಾಯವನ್ನು ವಿತರಿಸಿ ಮಾತನಾಡಿದರು.

Advertisement

ಸರಕಾರವೂ, ಸಾರ್ವಜನಿಕರೂ ಎಂಡೋ ಸಂತ್ರಸ್ತರ ಹಿತಾಸಕ್ತಿಯನ್ನು ರಕ್ಷಿಸಲು ಶ್ರಮಿಸುತ್ತಿರುವಾಗ ಕೆಲವು ಮಂದಿ ಎಂಡೋಸ ಲ್ಫಾನ್‌ ಕೀಟನಾಶಿನಿ ಕಂಪೆನಿ ಹಿತಾಸಕ್ತಿಯನ್ನು ಸಂರಕ್ಷಿಸಲು ಶ್ರಮಿಸುತ್ತಿದ್ದಾರೆ ಎಂದು ಆರೋ ಪಿಸಿದರು. ಮನುಷ್ಯತ್ವವುಳ್ಳರಿಗೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು. ಎಂಡೋ ಸಂತ್ರಸ್ತ ಯಾದಿಯಲ್ಲಿಲ್ಲದ 127 ಮಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈ ಸರಕಾರ ಒಂದು ಲಕ್ಷ ರೂ. ಯಂತೆ ಮಂಜೂರು ಮಾಡಿತ್ತು. ಓಣಂ ಸಂದರ್ಭದಲ್ಲಿ ಸಂತ್ರಸ್ತರಿಗೆ 1000 ರೂ. ಧನಸಹಾಯ ಮಾಡಲಾಗಿತ್ತು ಎಂದು ಅವರು ಹೇಳಿದರು. 

ಎಂಡೋ ಸಂತ್ರಸ್ತರಿಗೆ 10 ತಿಂಗಳ ಬಾಕಿ ಪಿಂಚಣಿಯನ್ನು ಮಂಜೂರು ಮಾಡಲಾಯಿತು. ಸಾಂತ್ವನ ಯೋಜನೆ ಮತ್ತು ಚಿಕಿತ್ಸಾ ಸಹಾಯ ವನ್ನು ಮುಂದುವರಿಸುತ್ತಿದೆ. ಕಂದಾಯ ಸಚಿವ ಇ. ಚಂದ್ರಶೇಖರನ್‌ ಅಧ್ಯಕ್ಷರಾಗಿರುವ ಎಂಡೋಸಲ್ಫಾನ್‌ ಪೀಡಿತರ ಪುನರ್ವಸತಿಗಾಗಿ ಸೆಲ್‌ನ್ನು ನವೀಕರಿಸಲಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಖಾತೆ ವಿ.ಎಸ್‌. ಸುನಿಲ್‌ ಕುಮಾರ್‌, ಸಂಸದ ಪಿ. ಕರುಣಾಕರನ್‌ ಅತಿಥಿಗಳಾಗಿ ಭಾಗವಹಿಸಿದರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ವರದಿ ಮಂಡಿಸಿದರು. 

ಶಾಸಕರಾದ ಕೆ. ಕುಂಞಿರಾಮನ್‌, ಎಂ. ರಾಜಗೋಪಾಲನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಕಾಸರಗೋಡು ನಗರಸಭಾ ಅಧ್ಯಕ್ಷೆ ಫಾತಿಮಾ ಇಬ್ರಾಹಿಂ, ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಮುಹಮ್ಮದ್‌ ಕುಂಞಿ ಚಾಯಿಂಡಟಿ. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಮಾಜಿ ಶಾಸಕರಾದ ಸಿ.ಎಚ್‌. ಕುಂಞಂಬು, ಕೆ.ಪಿ. ಸತೀಶ್ಚಂದ್ರನ್‌, ಕೆ. ಕುಂಞಿರಾಮನ್‌,  ಎಂಡೋಸಲ್ಫಾನ್‌ ಸೆಲ್‌ ಡೆಪ್ಯೂಟಿ ಕಲೆಕ್ಟರ್‌ ಸಿ. ಬಿಜು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಭಾಗವಹಿಸಿದರು.ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಸ್ವಾಗತಿಸಿದರು. ಎ.ಡಿ.ಎಂ. ಕೆ. ಅಂಬುಜಾಕ್ಷನ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next