Advertisement

ಐಡಿಹಳ್ಳಿಗೆ 80 ಕೋಟಿಗೂ ಹೆಚ್ಚು ಅನುದಾನ

10:23 AM Feb 20, 2022 | Team Udayavani |

ಮಧುಗಿರಿ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಈ ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ ಸಾಕಷ್ಟುಅನುದಾನ ನೀಡಿದ್ದು, ಐಡಿಹಳ್ಳಿ ಹೋಬಳಿ ಒಂದಕ್ಕೆ80 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

Advertisement

ತಾಲೂಕಿನ ಗರಣಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿಅವಧಿಯಲ್ಲಿ ಮಧುಗಿರಿಗೆ ಸಮಗ್ರ ಅನುದಾನ ನೀಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರಮಲತಾಯಿ ಧೋರಣೆ ತಾಳಿತ್ತು. ಆದರೂ, ಐಡಿಹಳ್ಳಿಹೋಬಳಿಗೆ ಕುರಿಹಳ್ಳಿ-ಮುದ್ದೇನಹಳ್ಳಿ 42 ಕಿ.ಮೀ.ರಸ್ತೆಅಭಿವೃದ್ಧಿಗೆ 46 ಕೋಟಿ ಅನುದಾನ ತಂದಿದ್ದೇನೆ. ಮುದ್ದಮಲ್ಲೇನಹಳ್ಳಿಯ ಸೇತುವೆಗೆ 3 ಕೋಟಿ,ಕಲ್ಲುವೀರನಹಳ್ಳಿಯ 50 ವರ್ಷದ ಹಳೆಯ ರಸ್ತೆಅಭಿವೃದ್ಧಿ, 9.5 ಕೋಟಿಯಲ್ಲಿ ಸಾದರಹಳ್ಳಿ-ಗೂಲಹಳ್ಳಿರಸ್ತೆ ಅಭಿವೃದ್ಧಿ, ಸಾಕಷ್ಟು ಆರ್‌ಒ ಘಟಕಗಳ ಆರಂಭವಾಗಿದೆ ಎಂದರು.

ಬಸ್‌ ನಿಲ್ದಾಣ ಅಭಿವೃದ್ಧಿ: ಮಾದೇನಹಳ್ಳಿ ಗ್ರಾಮಾಭಿ ವೃದ್ಧಿಗೆ 40 ಲಕ್ಷ ರೂ.ಅನುದಾನ ನೀಡಿದ್ದು, ಮುಖ್ಯ ಮಂತ್ರಿಗಳ ಗ್ರಾಮವಿಕಾಸ ಯೋಜನೆಯಲ್ಲಿ ಕಾಂತಾನಹಳ್ಳಿ ಯಲ್ಕೂರಿಗೆ 1 ಕೋಟಿ ರೂ. ಅನುದಾನನೀಡಲಾಗಿದೆ. 18 ಕೋಟಿ ವೆಚ್ಚದಲ್ಲಿ ಪುರವರ-ಐಡಿಹಳ್ಳಿ ರಸ್ತೆ ನಿರ್ಮಾಣವಾಗಿದೆ. ಪಿಎಂಜಿಎಸ್‌ವೈಯೋಜನೆಯಡಿ 5 ಕೋಟಿ ರೂ.ವೆಚ್ಚದ ಬ್ರಹ್ಮಸಮುದ್ರ ರಸ್ತೆ ಅಭಿವೃದ್ಧಿಯಾಗಿದೆ. ಐಡಿಹಳ್ಳಿಯಲ್ಲಿಶಾಲೆ, ರಂಗಮಂದಿರ, ಕಾಂಪೌಂಡ್‌ ಹಾಗೂ ಬಸ್‌ನಿಲ್ದಾಣ ಅಭಿವೃದ್ಧಿ ಮಾಡಲಾಗಿದೆ. ದಲಿತ ಕಾಲೋನಿಗಳಲ್ಲಿ ಸಮಗ್ರ ರಸ್ತೆ-ಚರಂಡಿ ನಿರ್ಮಾಣ ಮಾಡಲಾಗಿದೆ. ಜನಕಲೋಟಿ ರಸ್ತೆ ಅಭಿವೃದ್ಧಿಗೆ 11 ಕೋಟಿ ರೂ. ವ್ಯಯಿಸಲಾಗಿದೆ ಎಂದರು.

ವಿಶೇಷ ಪ್ಯಾಕೇಜ್‌: ಕೆಇಬಿ ಸಬ್‌ಸ್ಟೇಷನ್‌ ಮಂಜೂರಾಗಿದ್ದು, ಭೂಮಿಯಿಲ್ಲದೆ ಯೋಜನೆ ನಿಂತಿದೆ. ಈಗ ಗ್ರಾಪಂ ಅಧ್ಯಕ್ಷರೇ ಭೂಮಿ ನೀಡಲು ಮುಂದೆ ಬಂದಿದ್ದು, ಶೀಘ್ರ ಸಬ್‌ಸ್ಟೇಷನ್‌ ಸ್ಥಾಪನೆ ಯಾಗಲಿದೆ.ಈ ಭಾಗದ ರೈತರಿಗೆ ಗುಣಮಟ್ಟದ ವಿದ್ಯುತ್‌ ಸಿಗಲಿದೆ.15 ಗ್ರಾಮದ ಇತರೆ ಸಮು ದಾಯದ ವಸತಿಬೀದಿಗಳ ಅಭಿವೃದ್ಧಿಗೆ 18.43 ಕೋಟಿ ರೂ. ವಿಶೇಷ ಪ್ಯಾಕೇಜ್‌ ತಂದಿದ್ದೇನೆ ಎಂದರು.

ಐಡಿಹಳ್ಳಿ ಹೋಬಳಿಗೆ 1.70 ಕೋಟಿ ಅನುದಾನ ಬರಲಿದೆ. ಪೋಲೆನಹಳ್ಳಿಯಲ್ಲಿ 18 ಕೋಟಿ ರೂ.ವೆಚ್ಚದಲ್ಲಿ ವಸತಿ ಸಮುತ್ಛಯ ನಿರ್ಮಾಣ ಮಾಡಿದ್ದೇವೆ. ಹಲವಾರು ಗ್ರಾಮಗಳಲ್ಲಿ ಶಾಲೆಅಭಿವೃದ್ಧಿ, ಇತರೆ ಸಮುದಾಯದ ಅಭಿವೃದ್ಧಿಕಾರ್ಯಗಳನ್ನು ಮಾಡಲಾಗಿದೆ ಎಂದು ರವಿ. ಆರ್‌ಗರಣಿ ಅವರ ಮಾತಿಗೆ ಉತ್ತರಿಸಿದರು.

Advertisement

ವಾರ್ಷಿಕ 500 ಹಸು ಮೃತ: ತುಮುಲ್‌ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ, ಬೇಸಾಯಕೈಕೊಟ್ಟ ರೈತರಿಗೆ ಹೈನುಗಾರಿಕೆ ಬೆನ್ನೆಲುಬಾಗಿದೆ.ಇದಕ್ಕಾಗಿ ಡೇರಿ ಕಟ್ಟಡಗಳ ನಿರ್ಮಾಣಕ್ಕೆ ತುಮುಲ್‌ಮುಂದಾಗಿದ್ದು, 4.5 ಲಕ್ಷ ರೂ. ಅನುದಾನ ನೀಡಿದೆ.ಇದಲ್ಲದೆ ಶಾಸಕರು ಕೂಡ ಕ್ಷೇತ್ರದಲ್ಲಿ ಎಲ್ಲೇ ಡೇರಿಕಟ್ಟಡ ನಿರ್ಮಾಣವಾದರೂ ಮುಕ್ತ ಮನಸ್ಸಿನಿಂದತಲಾ 3 ಲಕ್ಷ ರೂ. ಅನುದಾನವನ್ನು ನೀಡುತ್ತಿದ್ದು, ಹೆಚ್ಚಿನ ಸಹಕಾರ ನೀಡಿದ್ದಾರೆ. ಒಕ್ಕೂಟವು ಹಾಲುಉತ್ಪಾದಕರ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಗುಣಮಟ್ಟದ ಹಾಲು ಪೂರೈಸಿದರೆ ಸಂಘ ಹಾಗೂ ನೀವು ಆರ್ಥಿಕವಾಗಿ ಸಧೃಡರಾಗಬಹುದು.

ವಾರ್ಷಿಕ 500 ಹಸು ಮೃತ ಪಡುತ್ತಿದ್ದು, ಹಸುಗಳ ಆರೋಗ್ಯ ಹಾಗೂ ವಿಮೆ ಕಡೆ ಗಮನ ಹರಿಸಬೇಕು. ಉಳಿದಂತೆ ಎತ್ತಿನಹೊಳೆಗೆ ಹೆಚ್ಚಿನ ಅನುದಾನ ಹಾಗೂ ಮಧುಗಿರಿ ಜಿಲ್ಲೆಯಾಗಲು ಶಾಸಕರು ಹೆಚ್ಚಿನ ಒತ್ತು ನೀಡಬೇಕು ಎಂದರು.

ಹೈನುಗಾರಿಕೆ ಶ್ರದ್ಧೆಯಿಂದ ನಡೆಸಿ: ಚಲನಚಿತ್ರನಿರ್ಮಾಪಕ ರವಿ. ಆರ್‌. ಗರಣಿ ಮಾತನಾಡಿ, ನನ್ನಹುಟ್ಟೂರಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲುಸಂತೋಷವಾಗಿದ್ದು, ಹಿಂದೆ ಹಾಲಿಗೆ ಮಾರುಕಟ್ಟೆಇರಲಿಲ್ಲ. ಆದರೆ, ಈಗ ಸಾಕಷ್ಟು ಅಭಿವೃದ್ಧಿ ಕಂಡಿದೆ. ರೈತರು ಸಹ ಹೈನುಗಾರಿಕೆಯನ್ನು ಶ್ರದ್ಧೆಯಿಂದ ನಡೆಸಬೇಕು. ಇದು ನಿಮ್ಮ ಆರ್ಥಿಕ ಮಟ್ಟವನ್ನುಮತ್ತಷ್ಟೂ ಸುಧಾರಿಸಲಿದೆ. ಈಗ ನೂತನ ಡೇರಿಕಟ್ಟಡವಾಗಿರುವುದು ಸಂತೋಷವಾಗಿದ್ದು, ಗರಣಿಮತ್ತಷ್ಟೂ ಅಭಿವೃದ್ಧಿಪಡಿಸಲು ಶಾಸಕರು ಮನಸ್ಸು ಮಾಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಇಂದು ಲಕ್ಷ್ಮೀನಾರಾಯಣ ರೆಡ್ಡಿ,ಉಪಾಧ್ಯಕ್ಷೆ ಸಿದ್ದಗಂಗಮ್ಮ, ಡೇರಿ ಅಧ್ಯಕ್ಷ ಗೋಪಾಲಪ್ಪ, ತಾ.ಪಂ. ಮಾಜಿ ಸದಸ್ಯ ಕೆ.ರಾಜು, ತುಮುಲ್‌ ವಿಸ್ತರಣಾಧಿಕಾರಿ ಗಿರೀಶ್‌, ವೈದ್ಯ ಡಾ. ದಿಕ್ಷೀತ್‌, ಹಾಗೂ ಗ್ರಾಪಂ ಸದಸ್ಯರು ಹಾಗೂ ಡೇರಿ ನಿರ್ದೇಶಕರು, ಸ್ಥಳೀಯ ಮುಖಂಡರು ಗ್ರಾಮಸ್ಥರು ಇದ್ದರು.

ಐಡಿಹಳ್ಳಿಗೆ ಪೊಲೀಸ್‌ ಠಾಣೆ: ಶಾಸಕ ಭರವಸೆ :

ಈ ಭಾಗಕ್ಕೆ ನೂತನ ಪೊಲೀಸ್‌ ಠಾಣೆಗೆ ಮನವಿ ಮಾಡಿದ್ದು, ಯಾವುದೇ ಹೆಚ್ಚಿನ ಕ್ರಿಮಿನಲ್‌ಪ್ರಕರಣ ದಾಖಲಾಗದ ಕಾರಣ ಸಚಿವರು ಮಂಜೂರಿಗೆ ಅವಕಶವಿಲ್ಲ ಎಂದಿದ್ದು, ಮಧುಗಿರಿಯಲ್ಲಿ ಅಪರಾಧ ಪ್ರಕರಣ ಸುಸ್ಥಿತಿಯಲ್ಲಿದೆ. ಇದಕ್ಕಾಗಿ ಮಧುಗಿರಿ ಜನತೆಯನ್ನು ಸದನದಲ್ಲಿ ಕೊಂಡಾಡಿದ್ದು, ಇದೇ ಪರಿಸ್ಥಿತಿ ಮುಂದುವರಿಯಲಿ ಎಂದು ಆಶಿಸಿದ್ದಾರೆ. ಆದರೂ, ಪೊಲೀಸ್‌ಠಾಣೆಯನ್ನು ಮಂಜೂರು ಮಾಡಿಸಲು ಅಗತ್ಯಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ವೀರಭದ್ರಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next