Advertisement

ಅನುದಾನವನ್ನು ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿ: ಸಂಸದ ನಳಿನ್‌

12:20 AM Jun 08, 2019 | mahesh |

ಪುತ್ತೂರು: ಕೇಂದ್ರ ಸರಕಾರದಿಂದ ಪುತ್ತೂರು ನಗರಸಭೆಗೆ ಮಂಜೂರಾಗಿರುವ 14ನೇ ಹಣಕಾಸು ಆಯೋಗದ ಅನುದಾನವನ್ನು ಎಲ್ಲ 31 ವಾರ್ಡ್‌ಗಳ ಸದಸ್ಯರೊಂದಿಗೆ ಚರ್ಚಿಸಿ ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತಂತೆ ಅನುದಾನವನ್ನು ವಿಂಗಡಣೆ ಮಾಡಿ. ಯಾವುದೇ ತಾರತಮ್ಯವನ್ನು ಮಾಡಬೇಡಿ. ಈ ಕುರಿತು ದೂರು ಬಂದರೆ ನಗರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪುತ್ತೂರು ನಗರಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಶುಕ್ರವಾರ ಪುತ್ತೂರು ನಗರಸಭಾ ಸಭಾಂಗಣದಲ್ಲಿ ನೆರೆ ಮುಂಜಾಗ್ರತ ಕಾಮ ಗಾರಿಗಳ ಕುರಿತು ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಸಂಸದರು ಮಾತನಾಡಿದರು.

ಮಳೆಗಾಲದ ಪರಿಸ್ಥಿತಿ ಯನ್ನು ಸಮರ್ಥವಾಗಿ ಎದುರಿಸಲು 24 ಗಂಟೆಗಳ ಕಾಲ ಕಾರ್ಯನಿರ್ವ ಹಿಸುವ ವ್ಯವಸ್ಥೆಯನ್ನು ಸಿದ್ಧ ಮಾಡಿಕೊಳ್ಳಬೇಕು. ಕಳೆದ ವರ್ಷ ಕೃತಕ ನರೆಯಿಂದ ಆದ ಹಾನಿ ಮತ್ತು ಗೊಂದಲಗಳನ್ನು ಗಮನದಲ್ಲಿಟ್ಟು ಕಾರ್ಯಾಚರಣೆಯನ್ನು ನಡೆಸಬೇಕು ಎಂದರು.

ಸಿಸಿ ಕೆಮರಾ ಅಳವಡಿಸಿ
ನಗರದಲ್ಲಿ ಕಡ್ಡಾಯ ವಾಗಿ ಸಿಸಿ ಕೆಮರಾಗಳನ್ನು ನಗರಸಭೆಯ ವತಿಯಿಂದ ಅಳವಡಿಸಬೇಕು. ಮಳೆ ಗಾಲದಲ್ಲಿ ಕಳ್ಳರ ಹಾವಳಿ ವಿಪರೀತ ಇರುತ್ತದೆ. ಅಲ್ಲದೇ, ರಸ್ತೆ ಬದಿ ತ್ಯಾಜ್ಯವನ್ನು ತಂದು ಹಾಕುವವರನ್ನು ಪತ್ತೆ ಹಚ್ಚಲೂ ಕಾಡಾ ಇದು ಸಹಕಾರಿ. ಈ ಕುರಿತು ವಿಳಂಬ ಮಾಡದೆ ಘಟನೋತ್ತರ ಮಂಜೂರಾತಿಯೊಂದಿಗೆ 15 ದಿನಗಳೊಳಗೆ ಸಿಸಿ ಕೆಮರಾಗಳನ್ನು ಅಳವಡಿಸುವ ಕೆಲಸ ನಡೆಯಬೇಕು. ಮುಂಗಾರುಪೂರ್ವ ಕಾಮಗಾರಿಗಳು ವಾರದೊಳಗೆ ಪೂರ್ತಿಯಾಗಬೇಕು. ನಗರಸಭೆಯಲ್ಲಿ ಸದಸ್ಯರ ಆಡಳಿತ ಇಲ್ಲದಿದ್ದರೂ ಶಾಸಕರು ನಗರಸಭೆಯ ಆಡಳಿತ ಕುರಿತಂತೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದಾರೆ ಎಂದರು.

ಅಧಿಕಾರಿಗಳಲ್ಲಿ ಮಾಹಿತಿಯೇ ಇಲ್ಲ!
ಮುಂಗಾರು ಪೂರ್ವ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ನಗರಸಭೆಯ ಕಿರಿಯ ಇಂಜಿನಿಯರ್‌ ಮತ್ತು ಆರೋಗ್ಯ ನಿರೀಕ್ಷಕರಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಇದರಿಂದ ಕೋಪ ಗೊಂಡ ಶಾಸಕ ಸಂಜೀವ ಮಠಂದೂರು ಅವರು, ಕಾಮಗಾರಿಯ ಕುರಿತು ಯಾಕೆ ಮಾಹಿತಿ ಇಲ್ಲ? ಅಪಾಯಕಾರಿ ಮರಗಳು, ವಿದ್ಯುತ್‌ ಕಂಬಗಳು, ಮಣ್ಣಿನ ರಾಶಿ, ಅಪಾಯಕಾರಿ ಗುಡ್ಡಗಳ ಕುರಿತು ಯಾವುದೇ ಮಾಹಿತಿ ನಿಮ್ಮ ಬಳಿ ಇಲ್ಲ. ಕಳೆದ ಬಾರಿ ಪ್ರಾಕೃತಿಕ ವಿಕೋಪದ ಕಾರಣದಿಂದ 2 ಜೀವಗಳು ಬಲಿಯಾಗಿವೆ. ನಗರಸಭೆಯಲ್ಲಿ ನೀವು ಏನು ಕೆಲಸ ಮಾಡುತ್ತೀರಿ? ಎಂದು ಪ್ರಶ್ನಿಸಿದರು.

Advertisement

ಅಂಗನವಾಡಿ ಕಟ್ಟಡಗಳ ದುರಸ್ತಿ ಸಹಿತ ತ್ವರಿತ ಕಾಮಗಾರಿ ಕೂಡಲೇ ಮಾಡಿ ಮುಗಿಸಬೇಕು. ಒಂದು ವಾರದಲ್ಲಿ ಇನ್ನೊಮ್ಮೆ ಈ ಕುರಿತು ಪ್ರಗತಿ ಪರಿಶೀಲನ ಸಭೆ ನಡೆಸು ತ್ತೇನೆ. ಆಗಲೂ ನೀವು ಎಚ್ಚರದಲ್ಲಿ ರದಿದ್ದರೆ ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಶಾಸಕರು ಅಧಿಕಾರಿಗಳಿಗೆ ನೀಡಿದರು.

ರಾಜ ಕಾಲುವೆ ಕಾಮಗಾರಿ, ಚರಂಡಿ ಕಾಮಗಾರಿ, ಮೋರಿಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು 3 ತಿಂಗಳ ಅವಧಿ ನೀಡಲಾಗಿದೆ ಎಂದು ಹೇಳಿ ನೀವು ಸುಮ್ಮನೆ ಕೂತರೆ ನಾನು ಸಹಿಸುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.ನಗರಸಭಾ ಸದಸ್ಯರಾದ ಪಿ.ಜಿ. ಜಗನ್ನಿವಾಸ್‌ ರಾವ್‌, ಪ್ರೇಮಲತಾ ನಂದಿಲ, ವಿದ್ಯಾಗೌರಿ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಶಶಿಕಲಾ ಸಿ.ಎಚ್., ಪೂರ್ಣಿಮಾ, ಮಮತಾ ರಂಜನ್‌, ಶಿವರಾಮ ಸಪಲ್ಯ, ನವೀನ್‌, ರಾಬಿನ್‌ ತಾವ್ರೋ, ಫೌಝಿಯಾ, ಶಿವರಾಮ ಸಪಲ್ಯ, ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯಕ್‌, ಮನೋಹರ ಕಲ್ಲಾರೆ, ಶೀನಪ್ಪ ನಾಯ್ಕ, ದೀಕ್ಷಾ ಪೈ, ಬಾಲಚಂದ್ರ ಮರೀಲ್, ಪ್ರೇಮ್‌ ಕುಮಾರ್‌, ಭಾಮಿ ಅಶೋಕ್‌ ಶೆಣೈ ಉಪಸ್ಥಿತರಿದ್ದರು.

ಅಧಿಕಾರಿಗೆ ತರಾಟೆ
ಯಾವುದೇ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದ ಆರೋಗ್ಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಸಂಜೀವ ಮಠಂದೂರು, ನೀವು ಕ್ರಿಯಾಶೀಲರಾಗಿಲ್ಲ. ನಿಮಗೆ ಯಾವುದೇ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದರು.

ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ವರದಿ: ಎಚ್ಚರಿಕೆ
ಅಂಗನವಾಡಿ ಕಟ್ಟಡಗಳ ದುರಸ್ತಿ ಸಹಿತ ತ್ವರಿತ ಕಾಮಗಾರಿ ಕೂಡಲೇ ಮಾಡಿ ಮುಗಿಸಬೇಕು. ಒಂದು ವಾರದಲ್ಲಿ ಇನ್ನೊಮ್ಮೆ ಈ ಕುರಿತು ಪ್ರಗತಿ ಪರಿಶೀಲನ ಸಭೆ ನಡೆಸು ತ್ತೇನೆ. ಆಗಲೂ ನೀವು ಎಚ್ಚರದಲ್ಲಿ ರದಿದ್ದರೆ ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಶಾಸಕರು ಅಧಿಕಾರಿಗಳಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next