Advertisement

ಲಿಂಗ ತಾರತಮ್ಯ: ಫಿಡೆ ಮಹಿಳಾ ಚೆಸ್‌ನಲ್ಲಿ ವೀಕ್ಷಕ ವಿವರಣೆಕಾರಗೆ ಕೊಕ್‌

10:05 PM Sep 29, 2022 | Team Udayavani |

ಆಸ್ತಾನ (ಕಝಕಸ್ತಾನ): ವಿಶ್ವ ಚೆಸ್‌ ಸಂಸ್ಥೆ (ಫಿಡೆ) ಆಯೋಜಿಸಿರುವ ಮೊದಲನೆಯ ಮಹಿಳಾ ಫಿಡೆ ಗ್ರ್ಯಾನ್‌ಪ್ರೀ ಕೂಟವೇ ವಿವಾದಕ್ಕೆ ಸಿಲುಕಿದೆ. ಕೂಟದ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ಚೆಸ್‌ ಗ್ರ್ಯಾನ್‌ಮಾಸ್ಟರ್‌ ಇಲ್ಯಾ ಸ್ಮಿರಿನ್‌, ಲಿಂಗ ತಾರತಮ್ಯವೆನಿಸುವ ಮಾತುಗಳನ್ನಾಡಿದ್ದರು. ಇದನ್ನು ಆರಂಭದಲ್ಲಿ ಫಿಡೆ ಲಘುವಾಗಿ ಪರಿಗಣಿಸಿದ್ದರೂ, ಕೆಲವು ಆಟಗಾರರು ಗಂಭೀರವಾಗಿ ಪರಿಗಣಿಸಿದ್ದರಿಂದ ಅವರನ್ನು ವೀಕ್ಷಕ ವಿವರಣೆಕಾರ ಸ್ಥಾನದಿಂದ ಹೊರಹಾಕಲಾಗಿದೆ.

Advertisement

ಆಗಿದ್ದೇನು?: ಆಸ್ತಾನದಲ್ಲಿ ಇಬ್ಬರು ಆಟಗಾರ್ತಿಯರ ನಡುವೆ 9ನೇ ಸುತ್ತಿನ ಪಂದ್ಯವೊಂದು ನಡೆಯುತ್ತಿತ್ತು. ಇಲ್ಲಿ ಬೆಲಾರಸ್‌ ಗ್ರ್ಯಾನ್‌ಮಾಸ್ಟರ್‌ ಸ್ಮಿರಿನ್‌, ಮಹಿಳೆ ವಿಮ್‌ ಫಿಯೋನಾ ಸ್ಟೀಲ್‌ ಆ್ಯಂಟೋನಿ ವೀಕ್ಷಕ ವಿವರಣೆ ಮಾಡುತ್ತಿದ್ದರು. ಆಗ ಪ್ರೇಕ್ಷಕರೊಬ್ಬರು, ಇಲ್ಲಿ ಮಹಿಳೆಯರೇ ಆಡುತ್ತಿದ್ದಾರೆ. ಈ ಕೂಟದ ಮೂಲಕವೂ ಗ್ರ್ಯಾನ್‌ಮಾಸ್ಟರ್‌ ಅರ್ಹತೆ ಪಡೆದುಕೊಳ್ಳಲು ಸಾಧ್ಯವೇ ಎಂದು ಕೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸ್ಮಿರಿನ್‌, “ಚೆಸ್‌ ಮಹಿಳೆಯರಿಗಲ್ಲ, ಮಹಿಳೆಯರೇಕೆ ಪುರುಷರೆದುರು ಆಡಬೇಕು? ಪುರುಷರೇಕೆ ಮಹಿಳೆಯರೆದುರು ಆಡಬಾರದು? ಮಹಿಳೆಯೇಕೆ ಪುರುಷರ ಜಿಎಂ ಪಟ್ಟ ಪಡೆಯಲು ಯತ್ನಿಸಬೇಕು? ಈಗಂತೂ ಎಲ್ಲವನ್ನೂ ಸಮಾನತೆ ಹೆಸರಿನಲ್ಲೇ ನೋಡಲಾಗುತ್ತಿದೆ’ ಎಂದಿದ್ದರು. ಇದು ಹಲವರನ್ನು ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next