Advertisement

ಅಜ್ಜಿ,ನೀನೂ ಗ್ರೂಪ್‌ ಸೇರ್‌ಕೋ…

09:05 AM May 22, 2019 | Team Udayavani |

ನಮ್ಮದು ದೊಡ್ಡ ಕುಟುಂಬ. ನಮ್ಮ ತಂದೆಯ ಕಾಲದಲ್ಲಿ 30ರಿಂದ 35 ಮನೆಯ ಸದಸ್ಯರ ಸಂಖ್ಯೆ ಈಗ 55 ದಾಟಿದೆ. ಆದರೆ, ಇದರಲ್ಲಿ ಬಹುತೇಕರು ಉದ್ಯೋಗ ಮತ್ತು ಬದುಕಿನ ಇತರೆ ಉದ್ದೇಶ ನಿಮಿತ್ತ ಒಂದೊಂದು ದಿಕ್ಕಿಗೆ ಚದುರಿ ಹೋಗಿದ್ದಾರೆ. ಮದುವೆ- ಮುಂಜಿ, ಹಬ್ಬ-ಹರಿದಿನ ಇದ್ದರಷ್ಟೇ, ಮೂಲ ಮನೆಗೆ ಬರೋದು ಅನ್ನೋ ಪರಿಪಾಠ ರೂಢಿಯಾಗಿದೆ. ಕಂಪನಿಯಲ್ಲಿ ರಜೆ ಸಿಕ್ತಿಲ್ಲ, ಎಕ್ಸಾಮು, ಹಾಗೇ- ಹೀಗೆ ಅನ್ನೋ ನೆಪ ಹೇಳಿ ತಪ್ಪಿಸಿಕೊಳ್ಳುವವರೂ ಇದ್ದಾರೆ. ಇದಕ್ಕೆಲ್ಲ ಪರಿಹಾರವಾಗಿ, ಯಾವುದೇ ಕಮ್ಯುನಿಕೇಶನ್‌ ಗ್ಯಾಪ್‌ ಇರಬಾರದು ಎಂಬ ಕಾರಣಕ್ಕಾಗಿ ಹುಟ್ಟಿಕೊಂಡಿದ್ದೇ, “ಹನಗೋಡು ಮೊಮ್ಮಕ್ಕಳು’ ಎನ್ನುವ ಗ್ರೂಪು.

Advertisement

ನಮ್ಮ ಗುಂಪಿನಲ್ಲಿ 16ರಿಂದ 30 ವರ್ಷ ವರೆಗಿನ ಮೊಮ್ಮಕ್ಕಳೂ ಇದ್ದಾರೆ. ವಿದೇಶದಲ್ಲೂ ಕೆಲವರು ಸೆಟ್ಲ ಆಗಿದ್ದಾರೆ. ಇಲ್ಲಿ ಕಿರಿಯರಿಗೆ ಹಿರಿಯರೇ ಮಾರ್ಗದರ್ಶಕರು. ನಿತ್ಯವೂ ಹತ್ತಾರು ಪ್ರಶ್ನೆಗಳು… “ಅಣ್ಣಾ ಯಾವ ಲ್ಯಾಪ್‌ಟಾಪ್‌ ಚೆನ್ನಾಗಿದೆ?’, “ಯಾವ ಮೊಬೈಲ್‌ ಓಕೆ?’, “ಯಾವ ಕಾಂಬಿನೇಷನ್‌ ಬೆಸ್ಟ್‌?’-  ಹೀಗೆ ಪ್ರಶ್ನೆಗಳ ಸುರಿಮಳೆ ಇಲ್ಲಿರುತ್ತೆ. ಊರ ಹಬ್ಬ, ಜಾತ್ರೆ ದಿನವಂತೂ ಅರ್ಧ ಜಿ.ಬಿ. ಇಂಟರ್ನೆಟ್‌ ಖಾಲಿ! ಆದರೆ, ಈ ಗುಂಪಿನಲ್ಲಿ ಪಾಲಿಟಿಕ್ಸ್‌ಗೆ ನೋ ಎಂಟ್ರಿ. “ವರ್ಷಕ್ಕೆ ಒಂದು ಸಲನಾದ್ರೂ ಊರ್‌ ಕಡೆ ಬರೊ’ ಅಂತ ಅಜ್ಜಿ ಗೋಳಾಡಿದ್ರೆ, “ಅಜ್ಜಿ ನೀನು ಗ್ರೂಪ್‌ ಸೇರ್‌ಕೋ… ಅಲ್ಲಿ ಎಲ್ಲ ಸಿಗ್ತಾರೆ’ ಅಂತ ನಗೆಚಟಾಕಿ ಹಾರಿಸೋರೂ ಇದ್ದಾರೆ.

– ಶಾಮ ಪ್ರಸಾದ್‌ ಹನಗೋಡು

Advertisement

Udayavani is now on Telegram. Click here to join our channel and stay updated with the latest news.

Next