Advertisement

ಮುಂಬಯಿ ನಗರಕ್ಕಾಗಮಿಸಿದ ಒಡಿಯೂರು ಶ್ರೀಗಳಿಗೆ ಭವ್ಯ ಸ್ವಾಗತ

03:57 PM Dec 08, 2018 | Team Udayavani |

ಮುಂಬಯಿ: ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವ ಸಂಭ್ರಮ ಡಿ. 8 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮ ತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನಪೂರ್ತಿ ನಡೆಯಲಿದ್ದು, ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಲು ಶುಕ್ರವಾರ ಬೆಳಗ್ಗೆ ನಗರಕ್ಕಾಗಮಿಸಿದ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು.

Advertisement

ಸಾಂತಾಕ್ರೂಜ್‌ ವಿಮಾನ ನಿಲ್ದಾಣಕ್ಕಾಗಮಿಸಿದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಕನ್ನಡ ವೆಲ್ಫೆàರ್‌ ಸೊಸೈ ಟಿ ಘಾಟ್‌ಕೋಪರ್‌ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಹಾರಾರ್ಪಣೆಗೈದು, ಪುಷ್ಪಗುಚ್ಚವನ್ನಿತ್ತು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಸಂಸ್ಥೆಯ ಸದಸ್ಯರುಗಳಾದ  ನಾರಾಯಣ ಶೆಟ್ಟಿ ನಂದಳಿಕೆ, ರಾಧಾ ಕೃಷ್ಣ ಶೆಟ್ಟಿ, ಶ್ರೀ ಗುರುದೇವಾ ಸೇವಾ ಬಳಗ ಮುಂಬಯಿ ಇದರ ಅಧ್ಯಕ್ಷ ಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷ ವಾಮನ್‌ ಶೆಟ್ಟಿ, ಶ್ರೀ ವಜ್ರಾಮಾತ ಮಹಿಳಾ ವಿಕಾಸ ಕೇಂದ್ರದ ರೇವತಿ ವಾಮನ್‌ ಶೆಟ್ಟಿ, ಗುರುಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next