Advertisement

ಅಜ್ಜಿಯ ಬಿಟ್ಟು ಡ್ರಗ್ಸ್‌ ತಂದರು

01:24 AM Oct 23, 2019 | Hari Prasad |

ನ್ಯೂಯಾರ್ಕ್‌: ಸ್ಟ್ಯುಬೆನ್‌ ಕಂಟ್ರಿ ಎಂಬಲ್ಲಿನ ಮನೆಗೆ ಇತ್ತೀಚೆಗೆ ಬೆಂಕಿ ಅಪಘಾತದಲ್ಲಿ ಮೃತಪಟ್ಟಿದ್ದ ಗ್ಲಾಡಿಸ್‌ ಆ್ಯನ್‌ ವಿಲ್ಲೊ ಎಂಬ ಅಜ್ಜಿಯ ಸಾವಿನ ಪ್ರಕರಣದಲ್ಲಿ ಆಕೆಯ ಮೊಮ್ಮಕ್ಕಳಾದ ಜ್ಯಾರೆಟ್‌ ಗಾಸ್‌ ಮತ್ತು ಜಸ್ಟಿನ್‌ ಗಾಸ್‌ ಅವರನ್ನು ಆರೋಪಿಗಳೆಂದು ಅಲ್ಲಿನ ನ್ಯಾಯಾಲಯ ಘೋಷಿಸಿದೆ.

Advertisement

ಇತ್ತೀಚೆಗೆ, ಆ ಅಜ್ಜಿ ಮತ್ತು ಮೊಮ್ಮಕ್ಕಳು ಇದ್ದ ಮನೆಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ಕೂಡಲೇ ತಮ್ಮ ರಕ್ಷಣೆಗಾಗಿ ಹೊರಗಡೆ ಓಡಿ ಬಂದ ಮೊಮ್ಮಕ್ಕಳು, ಹೊರಗೆ ಓಡಿ ಬರುವಾಗ ತಮ್ಮ ಸಿಗರೇಟು ಪ್ಯಾಕುಗಳನ್ನು, ಡ್ರಗ್ಸ್‌ ಪ್ಯಾಕೇಟ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಆದರೆ, ಅಜ್ಜಿಯನ್ನು ಮರತೇಬಿಟ್ಟಿದ್ದಾರೆ!

ಹೊರಗೆ ಬಂದು ಎಷ್ಟೋ ಹೊತ್ತಿನ ಅನಂತರ ಅಜ್ಜಿಯ ನೆನಪು ಅವರಿಗಾಗಿದೆ. ಆದರೆ, ಅಷ್ಟರಲ್ಲಿ ಅಜ್ಜಿ ಸುಟ್ಟಗಾಯಗಳಿಂದ ಜರ್ಝರಿತರಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣ ಪೊಲೀಸರ ತನಿಖೆಗೊಳಪಟ್ಟಿದ್ದು ಘಟನೆ ನಡೆದಾಗ ಇಬ್ಬರೂ ಮನೆಯಲ್ಲಿ ಇದ್ದಿದ್ದು ಸಾಬೀತಾಗಿದೆ. ಆದರೆ, ತನಿಖೆಯ ದಿಕ್ಕು ತಪ್ಪಿಸಲು ಅವರಿಬ್ಬರೂ ಯತ್ನಿಸಿದ್ದರಿಂದ ಅವರ ವಿರುದ್ಧ “ನಿರ್ಲಕ್ಷ ಹಾಗೂ ಸಾಕ್ಷಿ ನಾಶ ಪ್ರಯತ್ನ’ ದಾಖಲಿಸಲಾಗಿತ್ತು.

ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಮುಕ್ತಾಯಾಗಿದ್ದು, ಜಿಲ್ಲಾ ನ್ಯಾಯಾಧೀಶರು ಈ ಇಬ್ಬರೂ ಮೊಮ್ಮಕ್ಕಳನ್ನು ದೋಷಿಗಳೆಂದು ಘೋಷಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next