Advertisement
ಶ್ರೀ ಗ್ರಾಮದೇವಿಯರನ್ನು ಸಂಭ್ರಮ ಸಡಗರ, ಸಕಲ ಮಂಗಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಜೋಳದ ಓಣಿ, ಮಾರ್ಕೆಟ್ ರೋಡ ಮುಖಾಂತರ ಅಕ್ಕಿ ಓಣಿಯಲ್ಲಿರುವ ಜಾತ್ರಾ ಮಂಟಪಕ್ಕೆ ಭಕ್ತ ಸಮೂಹದ ಜೈಕಾರದೊಂದಿಗೆ ಸಹಸ್ರಾರು ಭಕ್ತರು ಹೊತ್ತುಕೊಂಡು ಬಂದು ಪುನೀತರಾದರು.
ಎಂಬ ಜಯಘೋಷ ಹಾಕಿದರು. ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರೊಂದಿಗೆ ಅಲ್ಲಲ್ಲಿ ತಾತ್ಕಾಲಿಕ ನಲ್ಲಿಗಳ ಜೋಡಣೆ ಮಾಡಿ ಕುಡಿಯುವ ನೀರು, ಸಂಚಾರಿ ಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಮಾಡಿದ್ದರು. ಸ್ವತ್ಛತೆ ಹಾಗೂ ಬೀದಿದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ತಯಾರಿ ಮಾಡಲಾಗಿತ್ತು. ಸರಕಾರಿ ನೌಕರರ ಮುಷ್ಕರ ಇದ್ದರೂ ಪಟ್ಟಣದ ಜಾತ್ರಾ ವ್ಯವಸ್ಥೆಗೆ ಯಾವುದೇ ಅನಾನುಕೂಲ ಉಂಟಾಗದಿರಲು ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿ ಸೇವಾ ನಿರತರಾಗಿ ಜನ ಮೆಚ್ಚುಗೆಗೆ ಪಾತ್ರರಾದರು.
Related Articles
Advertisement
ಮಾ.2ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ದಿನ ರಾತ್ರಿ 10 ಗಂಟೆಗೆ ಮಹಾ ಮಂಗಳಾರತಿ, ನಂತರ ಭಕ್ತಿ ಗೀತೆ, ಜಾನಪದ ಗೀತೆ, ಡೊಳ್ಳಿನ ಪದ, ಸೋಬಾನ ಪದ ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆಲ್ಲ ಬೆಳಿಗ್ಗೆ 11ರಿಂದ ರಾತ್ರಿಯವರೆಗೂ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಟ್ರಸ್ಟ್ ಕಮೀಟಿ, ಶ್ರೀ ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಜತೆಗೆ ಪಟ್ಟಣದ ಯುವಕರು, ವಿವಿಧ ಸಂಘ-ಸಂಸ್ಥೆಗಳವರು, ಕಲಘಟಗಿ ಸುತ್ತಲಿನ ಗ್ರಾಮಗಳ ಭಕ್ತ ಜನರು ಜಾತ್ರಾ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.