ಮಳೆ ಕಡಿಮೆಯಾಗಿದೆ. ಇನ್ನು ಮದುವೆ, ರಿಸೆಪ್ಷನ್, ಉಪನಯನ ಮುಂತಾದ ಸಮಾರಂಭಗಳು ಶುರುವಾಗುತ್ತವೆ. ಮದುವೆ ಮುಂತಾದ ಫಂಕ್ಷನ್‌ಗಳಿಗೆ ಒಟ್ಟಾರೆ ಹೋಗುವಂತಿಲ್ಲ. ಕೊಂಚ ಗ್ರ್ಯಾಂಡ್ ಆಗಿ ಡ್ರೆಸ್ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ನಮ್ಮದೇ ಫ್ಯಾಮಿಲಿಯ ಮದುವೆಯಾದರೆ ಇನ್ನೂ ಸ್ವಲ್ಪ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ. ಈಗಿನ ಯುವತಿಯರು ಮಾಡರ್ನ್ ಲುಕ್ ನೀಡುವ ಲೆಹೆಂಗಾ, ಗೌನ್, ಗಾಗ್ರ ಹಾಗೂ ರೆಡಿಮೇಡ್ ಸೀರೆ ಧರಿಸಲು ಇಷ್ಟಪಡುತ್ತಾರೆ. ಅಲ್ಲದೆ ಹೆಚ್ಚು ಆಕರ್ಷಣೀಯವಾಗಿ ಕಾಣಿಸಲು ಗ್ರ್ಯಾಂಡ್ ಲುಕ್ ಇರುವಂಥ ಸೀರೆಗಳನ್ನು ಉಡಲು ಇಷ್ಟಪಡುತ್ತಾರೆ. ಇಂತಹ ಗ್ರ್ಯಾಂಡ್ ಲುಕ್ ಇರುವ ಸೀರೆಗಳಿಗೆ ಅದಕ್ಕೆ ಒಪ್ಪುವಂತಹ ಬ್ಲೌಸ್‌ಗಳನ್ನು ಧರಿಸಿದರೆ, ಸೀರೆ ಧರಿಸಿದವರು ಹಾಗೂ ಸೀರೆಯ ಅಂದ ಇನ್ನೂ ಹೆಚ್ಚುತ್ತದೆ. ಅದಕ್ಕಾಗಿ ಸೀರೆಯ ಬ್ಲೌಸ್‌ಗಳನ್ನು ಈ ರೀತಿಯ ವಿನ್ಯಾಸಗಳಲ್ಲಿ ಸ್ಟಿಚ್ ಮಾಡಿಕೊಳ್ಳಬಹುದು.
. ಫುಲ್ ಸ್ಲಿವ್ ಬ್ಲೌಸ್‌ಗಳು, ಹಾಫ್ ಸ್ಲಿವ್ ಬ್ಲೌಸ್‌ಗಳು, ಸ್ಲಿವ್‌ಲೆಸ್ ಬ್ಲೌಸ್‌ಗಳನ್ನು ಹೇಗೆ ಬೇಕೋ ಹಾಗೆ ಅವರವರಿಗೆ ಒಪ್ಪುವಂತೆ ಸ್ಟಿಚ್ ಮಾಡಿಕೊಳ್ಳಬಹುದು.
.ಬ್ಲೌಸ್‌ನ ನೆಕ್‌ಸ್ಟೈಲ್ಗಳನ್ನು ವೈವಿಧ್ಯಮಯವಾಗಿ ಸ್ಟಿಚ್ ಮಾಡಿಕೊಳ್ಳಬಹುದು. ಯು-ನೆಕ್, ವಿ-ನೆಕ್, ಹೈನೆಕ್, ನೆಕ್‌ಲೆಸ್ ಬ್ಲೌಸ್ ಹೀಗೆ.
.ಡೀಪ್‌ನೆಕ್ ಬ್ಲೌಸ್‌ಗಳನ್ನು ಸ್ಟಿಚ್ ಮಾಡಿ, ಅದರ ಅಂಚಿಗೆ ಅಂದರೆ ನೆಕ್‌ನ ಅಂಚಿಗೆ, ತೋಳಿನ ಅಂಚಿನ ಭಾಗದಲ್ಲಿ ಟಿಕ್ಲಿಗಳನ್ನು , ಮಣಿಗಳನ್ನು , ಎಂಬ್ರಾಯಡರಿ ವರ್ಕ್‌ಗಳನ್ನು ಹೊಲಿದು ಅದಕ್ಕೆ ಮ್ಯಾಚ್ ಮಾಡಬಹುದು.
.ಬಾರ್ಡರ್ ಸೀರೆಯ ಬಾರ್ಡರ್‌ಗಳನ್ನು ನೆಕ್‌ನ ಭಾಗದಲ್ಲಿ ಹಾಗೂ ತೋಳಿನ ಅರ್ಧ ಭಾಗದಲ್ಲಿ ಜೋಡಿಸಿ ಸ್ಟಿಚ್ ಮಾಡಿಕೊಳ್ಳಬಹುದು. ಇದು ಬಾರ್ಡರ್ ಸೀರೆಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.
.ಫುಲ್ ಸ್ಲಿವ್ ಬ್ಲೌಸ್‌ಗಳನ್ನು ಸ್ಟಿಚ್ ಮಾಡುವಾಗ ಬ್ಲೌಸ್‌ನ ತೋಳಿಗೆ ಕೇವಲ ನೆಟ್ಟೆಡ್ ಬಟ್ಟೆಯನ್ನು ಮಾತ್ರ ಇಟ್ಟು ಸ್ಟಿಚ್ ಮಾಡಿದರೆ ತುಂಬಾ ಚೆನ್ನಾಗಿ ಕಾಣುತ್ತದೆ.
.ಬ್ಲೌಸ್‌ನ ಬೆನ್ನಿಗೆ ಸೀರೆಯದೇ ಬಣ್ಣದ ಟ್ಯಾಗ್‌ನ್ನು ಹೊಲಿದು ಅದರ ತುದಿಗೆ ಬೇರೆ ಬೇರೆ ನಮೂನೆಯ, ಬೇರೆ ಬೇರೆ ಕಲರಿನ ಗೊಂಡೆಗಳನ್ನು ಜೋಡಿಸಿದರೆ ಬ್ಲೌಸ್‌ಗೆ ಒಳ್ಳೆಯ ಲುಕ್ಕು ನೀಡುತ್ತದೆ.
.ಬಾರ್ಡ್‌ರ್ ಸೀರೆಯ ಬಾರ್ಡರ್‌ಗಳು ತುಂಬಾ ದೊಡ್ಡದಾಗಿದ್ದರೆ ಬಾರ್ಡರಿನ ತುದಿ ಭಾಗವನ್ನು ಮಾತ್ರ ಕತ್ತರಿಸಿ ಬ್ಲೌಸ್‌ಗೆ ಅಳವಡಿಸಬಹುದು.