Advertisement

ಗ್ರಾಪಂ ಸದಸ್ಯರು ಜನ ಸೇವಕರಾಗಿ ಕೆಲಸ ಮಾಡಲಿ : ರಾಜ್ಯದಲ್ಲಿ ಗೆದ್ದಿದ್ದಾರೆ 5,246 ಬೆಂಬಲಿತರು

03:36 PM Jan 14, 2021 | Team Udayavani |

ಕೊಪ್ಪಳ: ಗ್ರಾಪಂನಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜನರ ಸೇವಕರಾಗಿ ಕೆಲಸ ಮಾಡಿ. ಪ್ರಾಮಾಣಿಕತೆಯಿಂದ
ಗ್ರಾಮಾಭಿವೃದ್ಧಿಗೆ ಒತ್ತು ನೀಡಿ. ಜನರ ಮನಸ್ಸು ಗೆದ್ದು ನೊಂದವರಿಗೆ ಆಸರೆಯಾಗಿ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶಿವಶಾಂತ ಮಂಗಲ ಭವನದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜಕೀಯ ಇತಿಹಾಸದಲ್ಲಿ ಗ್ರಾಪಂನಲ್ಲಿ ಬಿಜೆಪಿ ದಾಖಲೆಯ ಫಲಿತಾಂಶ ಬಂದಿದೆ. ಪಕ್ಷ ಸಂಘಟನೆಯಿಂದಲೇ ಇಷ್ಟೆಲ್ಲ ಸಾಧ್ಯವಾಗಿದೆ. ರಾಜ್ಯದಲ್ಲಿ 5,670 ಗ್ರಾಪಂನಲ್ಲಿ 86,183 ಜನ ಗೆದ್ದವರಲ್ಲಿ, ಬಿಜೆಪಿಯಿಂದ 45,246 ಜನರು ಹೆಚ್ಚು ಗೆದ್ದಿದ್ದಾರೆ. 3,142 ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತ ಇದೆ ಎಂದರಲ್ಲದೇ, ಕೈನಡಿ ಎಷ್ಟು ಜನರು ಗೆದ್ದಿದ್ದಾರೆ ಎನ್ನುವುದನ್ನು ತಿಳಿಸಲಿ. ಬಿಜೆಪಿ ಆಕಾಶದೆತ್ತರಕ್ಕೆ ಬೆಳೆದರೆ, ಕಾಂಗ್ರೆಸ್‌ ಪಾತಾಳಕ್ಕೆ ಹೋಗುತ್ತಿದೆ. ಕೈನಲ್ಲಿ ಚಮಚಾಗಿರಿ ಹೆಚ್ಚಾಗಿದೆ. ಬೂತ್‌ ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್‌ಗೆ ಯಾವ ಕಾರ್ಯಕರ್ತರೂ ಇಲ್ಲ ಎಂದರು.

ಡಿಕೆಶಿ ಈಗ ವಿಭಾಗೀಯ ಸಮಾವೇಶ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸಂಕಲ್ಪ ಯಾತ್ರೆ ನಡೆಸಿದೆ. ಅದು ಸಂಕಲ್ಪ ಯಾತ್ರೆಯಲ್ಲ.
ಅವರ ಅಂತಿಮ ಯಾತ್ರೆಯಾಗಿದೆ. ಕೈನಲ್ಲಿ ಯಾರಿಗೂ ಕಿಮ್ಮತ್ತೇ ಇಲ್ಲ. ಕಾಂಗ್ರೆಸ್‌ ಒಡೆದು ಹೋದ ಮನೆಯಾಗಿದೆ. ಭವಿಷ್ಯದ ಪಕ್ಷ ಅಂದರೆ ಬಿಜೆಪಿ. ಜಗತ್ತಿನಲ್ಲಿ ಪ್ರಬಲ ನಾಯಕ ಮೋದಿಯಾಗಿದ್ದಾರೆ.

ಇದನ್ನೂ ಓದಿ:ಏಳು ಜನ್ಮ ಎತ್ತಿದರೂ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗದು: ಡಿ ಕೆ ಶಿವಕುಮಾರ್ ಗುಡುಗು

ಗ್ರಾಪಂನಲ್ಲಿ ಗೆದ್ದ ಸದಸ್ಯರು ಪ್ರಾಮಾಣಿಕವಾಗಿ ಕೆಲಸಮಾಡಿ, ಜನರ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಪಂಗೆ ಅತಿ ಹೆಚ್ಚು
ಅನುದಾನ ಬರುತ್ತದೆ. ಆ ಅನುದಾನ ಸದುಪಯೋಗ ಮಾಡಿಕೊಳ್ಳಿ. ಯೋಜನೆ ರೂಪಿಸಿ ಗ್ರಾಮ ಸ್ವರಾಜ್ಯ ಎಂದು ಮಾಡಿ. ಮನೆ ಹಂಚಿಕೆಯಲ್ಲಿ ಸದಸ್ಯರು ಸಂಬಂಧಿಕರು, ಮನೆ ಇದ್ದವರು, ಶ್ರೀಮಂತರಿಗೆ ಹಂಚಬೇಡಿ. ಮನೆ ಇಲ್ಲದವರಿಗೆ ಹಂಚಿಕೆ ಮಾಡಬೇಕು ಎಂದರು.

Advertisement

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗಾಂಧೀಜಿ ಕನಸಿನಂತೆ ಗ್ರಾಮ ಸ್ವರಾಜ್ಯ ಮಾಡಬೇಕು. ಚುನಾವಣೆಯಲ್ಲಿ ಗೆದ್ದ ನೂತನ
ಸದಸ್ಯರು ಜನ ಸೇವೆ ಮಾಡಬೇಕು. ಮೋದಿ ಅವರು ಜನರ ಸೇವೆಗಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಜನರು 5 ವರ್ಷ ನಿಮಗೆ ಅವಕಾಶ ಕೊಟ್ಟಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ
ತಲುಪಿಸುವ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ:ರಸ್ತೆ ದುರಸ್ತಿ ಮಾಡಿದ್ದರೆ ದಾಖಲೆ ಕೊಡಿ : ಸಭೆಯಲ್ಲಿ ಅಧಿಕಾರಿಗಳಿಗೆ ತಾಪಂ ಸದಸ್ಯರ ಒತ್ತಾಯ

ಸಚಿವ ಪ್ರಭು ಚವ್ಹಾಣ್‌ ಮಾತನಾಡಿ, ಜನತೆಗೆ ಕುಡಿಯಲು ನೀರು, ಉತ್ತಮ ರಸ್ತೆ ಹಾಗೂ ಸ್ವತ್ಛ ಗ್ರಾಮ ಬೇಕು. ಆ ಕೆಲಸವವನ್ನು ನೂತನ ಸದಸ್ಯರು ಮಾಡಬೇಕು. ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಂತೆ ನೀವು ಕೆಲಸ ಮಾಡಬೇಕು. ನಾನು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ತಂದಿದ್ದು, ಗೋವುಗಳ ರಕ್ಷಣೆ ಆಗಬೇಕು ಎಂದರು. ಸಂಸದ ಸಂಗಣ್ಣ ಕರಡಿ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು 2 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. 1.4 ಲಕ್ಷ ಕೋಟಿ ಸ್ವತ್ಛ ಭಾರತ ಮಿಷನ್‌ನಡಿ ಬಳಕೆಗೆ ಮೀಸಲಿಟ್ಟಿದೆ. ಪ್ರತಿ ಗ್ರಾಪಂಗೆ ನರೇಗಾದಡಿ 5 ಕೋಟಿ ರೂ. ಅನುದಾನ ಬರುತ್ತಿದೆ. ಆ ಅನುದಾನ ಸದ್ಭಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರಲ್ಲದೇ, ರಾಮಕೃಷ್ಣ ಹೆಗಡೆ ಅವರ ಪಂಚಾಯತ್‌ ವ್ಯವಸ್ಥೆಯನ್ನ ಮೋದಿ ಅವರು ಮುಂದುವತೆಸಿಕೊಂಡು ಬಂದಿದೆ. ಗ್ರಾಪಂ ನೂತನ ಸದಸ್ಯರು ಕೇಂದ್ರ ಹಾಗೂ ರಾಜ್ಯಯದ ಯೋಜನೆಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸಲಿ. ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲಿ ಎಂದರು.

ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಹಳ್ಳಿಯಲ್ಲಿ ನೀರು, ಸ್ವತ್ಛತಾ ಹಾಗೂ ಬೆಳಕು ನೀಡಿದರೆ ಸಾಕು. ಇದಕ್ಕಿಂತ ಮತ್ತೇನೂ ಬೇಕಿಲ್ಲ. ನೂತನ ಗ್ರಾಪಂ ಸದಸ್ಯರು ಒಳ್ಳೆಯ ಕೆಲಸ ಮಾಡಿ ಜನರ ಮನಸ್ಸು ಗೆದ್ದು ಜನ ಸೇವಕರಾಗಬೇಕು. ಅವರ ಪ್ರೀತಿಗೆ ಪಾತ್ರರಾದರೆ ಮಾತ್ರ ಜನಪ್ರತಿನಿಧಿಯಾಗಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಬಸವರಾಜ ದಡೆಸೂಗೂರು, ಕಾಡಾ ಅಧ್ಯಕ್ಷ
ತಿಪ್ಪೇರುದ್ರಸ್ವಾಮಿ, ಮುಖಂಡರಾದ ಮಾಲಿಕಯ್ಯ ಗುತ್ತೆದಾರ, ಗಿರಿಗೌಡ, ಕೆ. ಶರಣಪ್ಪ, ನೇಮಿರಾಜ ನಾಯಕ್‌, ಶರಣು ತಳ್ಳಿಕೇರಿ, ಸಿದ್ದೇಶ ಯಾದವ್‌, ಅಮರೇಶ ಕರಡಿ, ಸಿ.ವಿ. ಚಂದ್ರಶೇಖರ, ಚಂದ್ರಶೇಖರ ಪಾಟೀಲ್‌ ಹಲಗೇರಿ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next