Advertisement

ಜಮಖಂಡಿ: ತುತ್ತೂರಿ ಊದುತ್ತಾ ಗ್ರಾಮ ಪಂಚಾಯತ್ ಅಭ್ಯರ್ಥಿಯ ಮತಬೇಟೆ

01:18 PM Dec 20, 2020 | sudhir |

ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರದಲ್ಲಿ ಮತ್ತೆ ತುತ್ತೂರಿ ಸದ್ದು ಕೇಳಿಸುತ್ತಿದೆ. ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಕುಲಕಸುಬಿನ ಪ್ರಮುಖ ಸಲಕರಣೆ ತುತ್ತೂರಿ ಊದುವ ಮೂಲಕ ಮತದಾರರನ್ನು ಸೆಳೆದು 3ನೇ ವಾರ್ಡದಿಂದ ಸದಸ್ಯನಾಗಿ ಆಯ್ಕೆಯಾಗಿದ್ದ ಶೇಖರ ಭಜಂತ್ರಿ, ಮತ್ತೆ ಗ್ರಾಪಂ ಚುನಾವಣೆಯಲ್ಲೂ
ಪುನರಾಯ್ಕೆ ಬಯಸಿ ಒಂದನೇ ವಾರ್ಡ್‌ಗೆ ಸ್ಪರ್ದಿಸಿದ್ದಾರೆ.

Advertisement

ಕಳೆದ ಚುನಾವಣೆಯಲ್ಲಿ ತಾವು ಆಯ್ಕೆ ಮಾಡಿಕೊಂಡಿದ್ದ ತುತ್ತೂರಿಯನ್ನೇ ಈ ಬಾರಿಯೂ ಚಿಹ್ನೆಯಾಗಿ ಪಡೆದು ಪ್ರಚಾರದ ಆರಂಭದ ದಿನದಿಂದಲೇ ವಾರ್ಡ್‌ನಲ್ಲಿ ವಾದ್ಯದ ನಿನಾದ ಮೊಳಗುವಂತೆ ಮಾಡಿದ್ದಾರೆ. ಹುನ್ನೂರು ಗ್ರಾಮ ಪಂಚಾಯತಗೆ
ಸತತ ನಾಲ್ಕು ಬಾರಿ ಸದಸ್ಯನಾಗಿ ಸೇವೆ ಸಲ್ಲಿಸಿರುವ ಶೇಖರ ಭಜಂತ್ರಿ ಒಂದು ಬಾರಿ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಒಂದನೇ ವಾರ್ಡ್‌ ಸೇರಿ ಬೇರೆ ಬೇರೆ ವಾರ್ಡಗಳಿಂದ ಆಯ್ಕೆಯಾಗಿದ್ದ ಅವರು, ಈ ಚುನಾವಣೆಯಲ್ಲಿ ಮತ್ತೆ ಒಂದನೇ ವಾರ್ಡದಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ.

ಇದನ್ನೂಓದಿ:ತುಕ್ಕು ಹಿಡಿಯುತ್ತಿವೆ ನಿರುಪಯುಕ್ತ ಸರಕಾರಿ ಆ್ಯಂಬುಲೆನ್ಸ್‌ಗಳು !

Advertisement

Udayavani is now on Telegram. Click here to join our channel and stay updated with the latest news.

Next