ಆಳಂದ: ಡಿ.22ರಂದು ನಡೆಯಲಿರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸರ್ಧೆ ಬಯಸಿ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ, ವಾಪಸ್ಸು, ತಿರಸ್ಕೃತ ಮತ್ತು ಕ್ರಮಬದ್ಧ ಪ್ರಕ್ರಿಯೆ ಸೋಮವಾರ ಪೂರ್ಣವಾಗಿ 560 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯಬೇಕಿರುವ 36 ಗ್ರಾಪಂಗಳಲ್ಲಿ 600 ಸ್ಥಾನಗಳಿವೆ. ಈ ಪೈಕಿ 1973 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 88 ನಾಮಪತ್ರ ತಿರಸ್ಕೃತವಾಗಿವೆ. 381 ಮಂದಿ ನಾಮಪತ್ರ ವಾಪಸ್ಸು ಪಡೆದು ಕಣದಿಂದ ಹಿಂದಕ್ಕೆ ಸರಿದಿದ್ದಾರೆ. 40 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಬಾಕಿ ಉಳಿದ 560 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1462 ಮಂದಿಕಣದಲ್ಲಿದ್ದಾರೆ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲ ಹಂತದ ಗ್ರಾಪಂ ಫೈಟ್‌ಗೆ ಅಖಾಡ ಸಿದ್ಧ
ಆಡಳಿತ ಹೈ ಅಲರ್ಟ್: ಗ್ರಾ.ಪಂ ಚುನಾವಣೆ ಯಶಸ್ವಿಯಾಗಿ ನಡೆಸುವ ಛಲ ಹೊಂದಿರುವ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿ ಸಿದ ಕಾರ್ಯ ಚಟುವಟಿಕೆಗಳಿಗೆ ಒತ್ತುನೀಡಿ ಸಿಬ್ಬಂದಿಗೆ ಹೈ ಅಲರ್ಟ್ ಆಗುವಂತೆ ಸೂಚಿಸಿದ್ದಾರೆ.
ಚುನಾವಣೆ ಶಿರಸ್ತೇದಾರ ಮನೋಜ ಲಾಡೆ ಮತಗಟ್ಟೆ ಅಧಿಕಾರಿಗಳಿಗೆ, ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ್ತು ಪೊಲೀಂಗ್ ಏಜ್ ಂಟರಿಗೆ ರವಾನಿಸುವ ದಾಖಲೆಗಳನ್ನು ಆಯಾ ಗ್ರಾಪಂಗಳಿಗೆ ನೀಡುವ ಕೆಲಸವನ್ನು ಸಿಬ್ಬಂದಿ ಮೂಲಕ ಸಿದ್ಧಪಡಿಸುವ ಕಾರ್ಯ ಕೈಗೊಂಡಿದ್ದಾರೆ. ಶಿರಸ್ತೇದಾರ ರಾಕೇಶ ಶೀಲವಂತ, ಚುನಾವಣೆ ಕಾರ್ಯದ ಕಚೇರಿಯ ಪ್ರಮುಖ ಎಫ್‌ಡಿಎ ವೀಣಾಶ್ರೀ, ಮಲ್ಲಿನಾಥ ಬೋಧನ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮಹಾದೇವ, ನಾಗವೇಣಿ, ರಂಜಿತಾ, ಸುಜಾತ ಪಾಟೀಲ, ಅನರಕಲಾ, ವಿಜಯಕುಮಾರ, ಸುನಿತಾ, ನಿಂಗಮ್ಮ, ಸ್ವಪ್ನಾ ಮತ್ತಿತರ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದಾರೆ.