ಪುಂಜಾಲಕಟ್ಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮ ಪಂಚಾಯತ್‌ಗೆ ಮಾವಿನಕಟ್ಟೆಯಲ್ಲಿ 16.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸ ಲಾದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಸೋಮವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದೇಶದಲ್ಲಿ ಸ್ಥಳೀಯಾಡಳಿತಕ್ಕೆ ಬಲ ನೀಡುವ ನಿಟ್ಟಿನಲ್ಲಿ ಪಂಚಾಯತ್‌ರಾಜ್ ಆಸ್ತಿತ್ವಗೊಂಡಿದೆ. ಸಾಮಾ ಜಿಕ ಬದಲಾವಣೆಯಿಂದಾಗಿ ಮಹಿಳೆ ಯರು, ಶೋಷಿತರು ಪಂಚಾಯತ್ ಅಧ್ಯಕ್ಷರಾಗುವ ಅವಕಾಶ ಬಂದಿದೆ. ಇಚ್ಛಾ ಶಕ್ತಿ ಇದ್ದರೆ ಗ್ರಾ.ಪಂ. ಸದಸ್ಯರೂ ಅದ್ಭುತ ಕಾರ್ಯ ಮಾಡುವ ಸಾಮರ್ಥ್ಯ ಮಾಡಬಲ್ಲರು. ತಾವೇ ಸ್ಥಳ ಖರೀದಿಸಿ ಕಟ್ಟಡ ನಿರ್ಮಿಸಿರುವ ಮಣಿನಾಲ್ಕೂರು ಪಂಚಾಯತ್ ಸದಸ್ಯರೇ ಇದಕ್ಕೆ ಸಾಕ್ಷಿ ಎಂದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಒಂದಾಗಿ ಯೋಜನೆ ರೂಪಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ರಾಜಕೀಯ ದ್ವೇಷ-ಅಸೂಯೆಗಳು ಗ್ರಾಮದ ಅಭಿವೃದ್ಧಿಗೆ ತೊಡಕಾಗುತ್ತವೆ. ಉತ್ತಮ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸದಸ್ಯರಾದ ಸಪ್ನಾ ವಿಶ್ವನಾಥ್, ಬೇಬಿ ಕೃಷ್ಣಪ್ಪ, ಪಿಡಿಒ ವಸಂತಿ, ತಾ.ಪಂ. ಸಹಾಯಕ ನಿರ್ದೆಶಕ ಪ್ರಶಾಂತ್ ಜೈನ್ ಬಳಂಜ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್‌ಗುತ್ತು. ಮಾವಿನಕಟ್ಟೆ ಫಕ್ರುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಜಬ್ಟಾರ್ ಸಅದಿ, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್, ಮಾವಿನಕಟ್ಟೆ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಕಸ್ತೂರಿ, ಗ್ರಾ.ಪಂ. ಸದಸ್ಯರಾದ ಶಿವಪ್ಪ ಪೂಜಾರಿ ಹಟದಡ್ಕ, ಗೀತಾ, ಜಯಲಕ್ಷ್ಮಿಜಗದೀಶ ನಾಯ್ಕ, ಯಶೋದಾ, ವಸಂತಿ, ಪದ್ಮಾವತಿ, ಸುಜಾತಾ, ವೇದಿಕೆಯಲ್ಲಿದ್ದರು.
ಗ್ರಾ.ಪಂ. ಸದಸ್ಯ ಡೆನೀಸ್ ಮೊರಾಸ್ ಸ್ವಾಗತಿಸಿದರು. ಆದಂ ಕುಂಞಿ ಪ್ರಸ್ತಾವನೆಗೈದರು. ಜಿ.ಎಂ. ಮಹಮ್ಮದ್ ಫಾರೂಕ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.