Advertisement

ಗ್ರಾಪಂ ವಾರ್ಡ್‌ ಬದಲಾವಣೆಯಲ್ಲಿ ಲೋಪವಾಗಿದ್ದು ಖಚಿತ: ಎಸಿ

05:33 PM Jan 23, 2021 | Team Udayavani |

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಪಂನ 1 ಮತ್ತು 3ನೇ ವಾರ್ಡ್‌ ಕ್ರಮ ಸಂಖ್ಯೆ ಬದಲಾವಣೆ ಕುರಿತು ಆ ವಾರ್ಡ್‌ಗಳ ಜನರು ಸಲ್ಲಿಸಿದ್ದ ಮನವಿ ಕುರಿತು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಲೋಪ ಆಗಿರುವುದು ಖಚಿತಪಟ್ಟಿದೆ ಎಂದು ವಿಜಯಪುರ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ತಿಳಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚನೆ ಮೇರೆಗೆ ಗ್ರಾಮಕ್ಕೆ ತೆರಳಿ ಎರಡೂ ವಾಡ್‌ ìಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿಗಳನ್ನೂ
ಪರಿಶೀಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಬಿಎಲ್‌ಒ, ಮುದ್ದೇಬಿಹಾಳ ತಹಶೀಲ್ದಾರ್‌ ಕಚೇರಿಯ ಚುನಾವಣಾ ಶಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಇರುವುದು ಗೊತ್ತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದ್ದು ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

2015ರ ಗ್ರಾಪಂ ಚುನಾವಣೆಯಲ್ಲಿ ಇದ್ದ ಒಂದನೇ ವಾರ್ಡ್‌ನ್ನು 2020ರ ಗ್ರಾಪಂ ಚುನಾವಣೆಯಲ್ಲಿ 3ನೇ ವಾರ್ಡ್‌ ಎಂದು, ಆಗಿನ 3ನೇ ವಾರ್ಡ್‌ನ್ನು 1ನೇ ವಾರ್ಡ್‌ ಎಂದು ಬದಲಾಯಿಸಿ 2015ರಲ್ಲಿ ಬಂದಿದ್ದ ಮೀಸಲಾತಿಗಳೇ ಪುನರಾವರ್ತನೆಯಾಗುವಂತೆ ಮಾಡಿದ್ದಾರೆ. ಇದರಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ, ಕರ್ತವ್ಯಲೋಪ ಸಾಬೀತಾಗಿದೆ ಎಂದರು.

ತಪ್ಪಾಗಿದ್ದರೆ ಕ್ರಮ-ಡಿಸಿ: ಬಿದರಕುಂದಿ ಗ್ರಾಮದ 1, 3ನೇ ವಾರ್ಡ್‌ ಸಮಸ್ಯೆ ಕುರಿತು ಶುಕ್ರವಾರ ಇಲ್ಲಿನ ಅಂಬೇಡ್ಕರ್‌ ಭವನಕ್ಕೆ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಈ ಬಗ್ಗೆ ತಿಳಿಸುತ್ತ, ಆ ವಾರ್ಡ್‌ನವರು ಕೊಟ್ಟ ಅರ್ಜಿಯನ್ನು ಪರಿಶೀಲಿಸಿದ್ದೇನೆ. 2015ರ ಗ್ರಾಪಂ ಚುನಾವಣೆಯಲ್ಲಿದ್ದ 1 ಮತ್ತು 3ನೇ ವಾರ್ಡ್‌ ಕ್ರಮ ಸಂಖ್ಯೆಗಳನ್ನು 2020ನೇ ಗ್ರಾಪಂ
ಚುನಾವಣೆಯಲ್ಲಿ 3 ಮತ್ತು 1 ಎಂದು ಅಂತರ್‌ ಬದಲಾವಣೆ ಮಾಡಿ ಮೋಸ ಮಾಡಲಾಗಿದೆ.

2015ರಲ್ಲಿ ಬಂದಿರುವ ವಾರ್ಡ್‌ವಾರು ಮೀಸಲಾತಿಗಳನ್ನೇ 2020ರಲ್ಲೂ ಪುನರಾವರ್ತನೆಯಾಗುವಂತೆ ನೋಡಿಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿ ಅವುಗಳಿಗೆ ನಡೆಸಿದ ಚುನಾವಣೆ ರದ್ದುಪಡಿಸಿ ಮರು  ಚುನಾವಣೆಗೆ ಆಗ್ರಹಿಸಿದ್ದಾರೆ.

Advertisement

ಇದನ್ನು ಸ್ಥಳ ತನಿಖೆ ನಡೆಸಿ, ಆಯಾ ವಾರ್ಡ್‌ಗಳ ಜನರೊಂದಿಗೆ ಅಹವಾಲು ಆಲಿಸಲು ಉಪ ವಿಭಾಗಾಧಿಕಾರಿಗೆ ಸೂಚಿಸಿದ್ದೆ. ಅದರಂತೆ ಅವರು ವಿಚಾರಣೆ
ನಡೆಸಿದ್ದಾರೆ. ಅವರು ಲಭ್ಯ ದಾಖಲೆ ಮತ್ತು ವಾರ್ಡ್‌ ಜನರ ಹೇಳಿಕೆ ಪಡೆದುಕೊಂಡು ವರದಿ ಸಲ್ಲಿಸುತ್ತಾರೆ. ವರದಿ ಬಂದ ಮೇಲೆ ಅದರಲ್ಲಿನ ಅಂಶಗಳನ್ನು ಆಧರಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎಸಿ ಭೇಟಿ-ವಿಚಾರಣೆ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶುಕ್ರವಾರ ಮೀಸಲಾತಿ ನಿಗದಿ ಸಭೆಯಲ್ಲಿ  ಪಾಲ್ಗೊಳ್ಳಬೇಕಿದ್ದ ಉಪ ವಿಭಾಗಾಧಿಕಾರಿಯವರು
ಅರ್ಜಿದಾರರೊಂದಿಗೆ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದರು. ಅರ್ಜಿದಾರರ ಬಳಿ ಇದ್ದ ದಾಖಲೆ ಪರಿಶೀಲಿಸಿದರು. ಅರ್ಜಿದಾರರಾದ ಲಕ್ಷ್ಮಣ ವಡ್ಡರ, ಗಿರೀಶ ಬಿಜೂjರ ವಕೀಲರು, ಕೆ.ಕೆ. ಬನ್ನೆಟ್ಟಿ, ಚನಮಲ್ಲಪ್ಪ ಕಡೂರ, ಪಿಡಿಒ, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next