Advertisement

6 ವರ್ಷಗಳ ಹಿಂದೆ ಆಂಜನೇಯ, ಈಗ ಅಶೋಕ! ಸಚಿವರ ಗ್ರಾಮ ವಾಸ್ತವ್ಯದ ದಾಖಲೆ

11:45 AM Feb 19, 2022 | Team Udayavani |

ಬ್ರಹ್ಮಾವರ : ಸಚಿವರ ಗ್ರಾಮ ವಾಸ್ತವ್ಯ ಉಡುಪಿ ಜಿಲ್ಲೆಯಲ್ಲಿ ನಡೆದು ಆರು ವರ್ಷಗಳಾಗಿವೆ. ಈಗ ಮತ್ತೆ ಆ ಘಟನೆ ನಡೆಯುತ್ತಿದೆ.

Advertisement

2016ರ ಡಿ. 31- 2017ರ ಜ. 1ರಂದು ಕುಂದಾಪುರ ತಾಲೂಕಿನ ಕಾಲ್ತೊಡಿನ ಮೂರೂರು ಕೊರಗರ ಕಾಲನಿಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಆಂಜನೇಯ ಅವರು ವಾಸ್ತವ್ಯ ಹೂಡಿದ್ದರು. ಬಳಿಕ ಈಗ ಅಂತಹುದೇ ಕಾರ್ಯಕ್ರಮ ಕಂದಾಯ ಸಚಿವ ಆರ್‌. ಅಶೋಕ್‌ರಿಂದ ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ಫೆ. 19ರಂದು ನಡೆಯುತ್ತಿದೆ. ಜತೆಗೆ ಕೊಕ್ಕರ್ಣೆಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಒಳಬೈಲು ಕುಡುಬಿ ಸಮುದಾಯದ ಕಾಲನಿಗೆ ಭೇಟಿ ನೀಡುವರು.

ಸಚಿವರು ಮುಖ್ಯವಾಗಿ ಡೀಮ್ಡ್ ಫಾರೆಸ್ಟ್‌ ನಿಯಮ ದಿಂದ ಅಕ್ರಮ ಸಕ್ರಮ ನಿವೇಶನದ ಫ‌ಲಾನುಭವಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವರು. ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಸಜ್ಜಾಗಿದೆ.

ಸಚಿವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಅವರು ಶುಕ್ರವಾರ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಪೂರ್ವ ತಯಾರಿಯ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.

Advertisement

ಇದನ್ನೂ ಓದಿ :ನರೇಗಾ ಯೋಜನೆ ಗುರಿ: ಗ್ರಾಮ ಪಂಚಾಯತ್ ಗಳಿಗೆ ಸಾಧನೆ ಗರಿ 

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ., ಸಹಾಯಕ ಆಯುಕ್ತ ರಾಜು ಕೆ., ಅಪರ ಜಿಲ್ಲಾ ಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌, ಬ್ರಹ್ಮಾವರ ತಹಶೀಲ್ದಾರ್‌ ರಾಜಶೇಖರ್‌ ಮೂರ್ತಿ, ಪೊಲೀಸ್‌ ಉಪ ನಿರೀಕ್ಷಕ ಗುರುನಾಥ್‌ ಹಾದಿಮನೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಗ್ರಾ.ಪಂ. ಅಧ್ಯಕ್ಷರಾದ ಕೊಕ್ಕರ್ಣೆಯ ಲಕ್ಷ್ಮೀ, ಕಳೂ¤ರಿನ ಸುಕನ್ಯಾ ಶೆಟ್ಟಿ, ಆರೂರಿನ ಮಮತಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪ್ರತಾಪ್‌ ಹೆಗ್ಡೆ ಮಾರಾಳಿ, ಕೊಕ್ಕರ್ಣೆ, ಕಳ್ತೂರು, ಚೇರ್ಕಾಡಿ, ಆರೂರು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next