Advertisement

ನರೇಗಾದಡಿ ಅರ್ಜಿ ಸಲ್ಲಿಸಲು ಅವಕಾಶ

04:08 PM Nov 11, 2020 | Suhan S |

ಯಳಂದೂರು: ಉದ್ಯೋಗ ಖಾತ್ರಿ ಯೋಜನೆಯಡಿ 26 ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಗ್ರಾಮೀಣರು ಈ ಸೌಲಭ್ಯಪಡೆದುಕೊಳ್ಳಬೇಕು ಎಂದು ಗೌಡಹಳ್ಳಿ ಗ್ರಾಪಂ ಪಿಡಿಒ ಶಿವಕುಮಾರ್‌ ಮನವಿ ಮಾಡಿದರು.

Advertisement

ತಾಲೂಕಿನ ಗೌಡಹಳ್ಳಿ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತ ನಾಡಿದ ಅವರು, ಈ ಯೋಜನೆಯಡಿ ಒಬ್ಬ ಫ‌ಲಾನುಭವಿಗೆ 2.50 ಲಕ್ಷ ರೂ. ತನಕ ಉಪಯೋಗಪಡೆದುಕೊಳ್ಳ ಬಹುದು. ದನದ ಕೊಟ್ಟಿಗೆ ನಿರ್ಮಾಣಕ್ಕೆ ಪರಿಶಿಷ್ಟ ವರ್ಗಕ್ಕೆ 43 ಸಾವಿರ ರೂ., ಸಾಮಾನ್ಯ ವರ್ಗಕ್ಕೆ 16,500 ರೂ.,ಕೊಳವೆ ಬಾವಿ ಮರುಪೂರಣಕ್ಕೆ20 ಸಾವಿರ ರೂ., ಹಂದಿ ಸಾಕಾಣಿಕೆ ಶೆಡ್‌ ನಿರ್ಮಾಣಕ್ಕೆ 88 ಸಾವಿರ ರೂ., ಕೋಳಿ ಸಾಕಾಣಿಕೆಗೆ 45 ಸಾವಿರ ರೂ., ಭೂಮಿ ಅಭಿವೃದ್ಧಿಗೆ 10 ಸಾವಿರ ರೂ., ಕೃಷಿ ಹಾಗೂ ಮೀನು ಹೊಂಡ ನಿರ್ಮಾಣಕ್ಕೆ ಅಳತೆಯ ಆಧಾರದ ಮೇಲೆ 20 ಸಾವಿರ ರೂ., ಎರೆಹುಳು ಗೊಬ್ಬರ ತೊಟ್ಟಿಗೆ 24,750 ರೂ., ಸೋಕ್‌ಪಿಟ್‌ ನಿರ್ಮಾಣಕ್ಕೆ 14 ಸಾವಿರ ರೂ., ಜಮೀನಿನಲ್ಲಿ ಸಸಿ ನೆಡಲು 41,200 ರೂ.,ಹಣ್ಣು ಗಿಡಗಳನ್ನು ನೆಡಲು 1250 ರೂ., ಜೈವಿಕ ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ 16,500 ರೂ., ರೇಷ್ಮೆ ತೋಟ ನಿರ್ಮಾಣಕ್ಕೆ ಹೆಕ್ಟೇರ್‌ ಗೆ 70,870 ರೂ. ಸೇರಿದಂತೆ ಒಟ್ಟು 26 ಕಾಮಗಾರಿ ಗಳ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಸಭೆಯಲ್ಲಿ ನೋಡಲ್‌ ಅಧಿಕಾರಿ ನಿಂಗರಾಜು,ಜೆಇ ದಿಲೀಪ್‌ಕುಮಾರ್‌, ಕಾರ್ಯದರ್ಶಿ ನಾಗೇಶ್‌, ಗ್ರಾಮಪಂಚಾಯತಿಮಾಜಿಅಧ್ಯಕ್ಷ ರವಿಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಮಾಣಪತ್ರದಲ್ಲಿ ಲಿಂಗಾಯತ ಎಂದು ನಮೂದಿಸಲು ಮನವಿ :

ಕೊಳ್ಳೇಗಾಲ: ಲಿಂಗಾಯತರಿಗೆ

Advertisement

ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕೊಡುವಾಗ ವೀರಶೈವ ಲಿಂಗಾಯತ ಎಂದು ನಮೂದಿಸಲಾಗುತ್ತಿದೆ. ಮೊದ ಲಿನಂತೆ ಲಿಂಗಾಯತ ಎಂದು ನಮೂ ದಿಸಬೇಕು ಎಂದು ತಾಲೂಕು ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ ಆಗ್ರಹಿಸಿದರು.

ಪಟ್ಟಣದಲ್ಲಿ ಉಪ ವಿಭಾಗಾಧಿಕಾರಿ ಡಾ| ಗಿರೀಶ್‌ ಅವರಿಗೆ ಮುಖಂಡ ರೊಂದಿಗೆ ಮನವಿಪತ್ರ ನೀಡಿ ಮಾತನಾಡಿದ ಅವರು, ಲಿಂಗಾಯತಸಮಾಜದವರಿಗೆ ಕಳೆದ 2002ರವರೆಗೆ ಕಂದಾಯ ಇಲಾಖೆಯು ಲಿಂಗಾಯತ ಎಂದು ಪ್ರಮಾಣ ಪತ್ರ ನೀಡುತ್ತಿತ್ತು. ನಂತರ ಬದಲಾವಣೆ ಮಾಡಿ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಇನ್ನುಳಿದ ಜಾತಿಗಳಿಗೆ ಅವರು ಕೇಳಿದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಲಿಂಗಾಯತ ಸಮಾಜಕ್ಕೆ ಮಾತ್ರ ಹೀಗೆ ಮಾಡುವುದು ಏಕೆ ಎಂದು ಪ್ರಶ್ನಿಸಿದರು.

ಸರ್ಕಾರದಿಂದಲೇ ಸುತ್ತೋಲೆ ಇದೆ ಎಂದು ಎಚ್ಚರಿಸಲಾಗುತ್ತಿದೆ. ಇದು ಸರಿಯಲ್ಲ. ತಕ್ಷಣವೇ ಸುತ್ತೋಲೆಯನ್ನು ಹಿಂಪಡೆದು ಲಿಂಗಾಯತರು ತಮ್ಮ ಅರ್ಜಿಯಲ್ಲಿ ನಮೂದಿಸುವ ಧರ್ಮದ ಹೆಸರಿನಲ್ಲಿ ಘೋಷಣೆ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಸಮಾಜವು ಕಾನೂನು ಕ್ರಮಕ್ಕೆ ಮೊರೆ ಹೋಗುವ ಮುನ್ನ ಅಥವಾ ಜನತೆ ಚಳವಳಿ ಆರಂಭಿಸುವ ಮುನ್ನವೇ ಎಚ್ಚರಿಕೆ ವಹಿಸಿ  ಜಾತಿ ಮತ್ತುಆದಾಯ ಪ್ರಮಾಣ ಪತ್ರದಲ್ಲಿ ಉಂಟಾಗಿರುವ ದೋಷವನ್ನು ಸರಿಪಡಿಸಬೇಕೆಂದರು. ಮನವಿ ಪತ್ರ ಸಲ್ಲಿಸುವ ವೇಳೆ ಗುಂಡೇಗಾಲ ತೋಟದ ಮಠದ ವೃಷ ಬೇಂದ್ರ ಸ್ವಾಮೀಜಿ, ಮುಖಂಡರಾದ ಶಿವಕುಮಾರಸ್ವಾಮಿ, ಬಸವಣ್ಣ, ನಾಗರಾಜಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next