Advertisement

ಗ್ರಾಪಂ ಚುನಾವಣೆ: ಶಾಂತಿಯುತ ಮತದಾನ

07:14 PM Dec 23, 2020 | Suhan S |

ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕಿನ ಗ್ರಾಪಂಗಳಿಗೆ ಮಂಗಳವಾರ ಮೊದಲಹಂತದ ಚುನಾವಣಾ ಮತದಾನವು ಶಾಂತಿಯುತವಾಗಿ ನಡೆಯಿತು.

Advertisement

ಶಹಾಪುರ ತಾಲೂಕಿನ 22 , ಸುರಪುರ ತಾಲೂಕಿನ 20 ಹಾಗೂ ಹುಣಸಗಿ 17 ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆದಮತದಾನದಲ್ಲಿ ಗ್ರಾಮಸ್ಥರು ತಮ್ಮ ಹಕ್ಕುನ್ನು ಚಲಾಯಿಸಿದರು. ಸುಮಾರು 73.85 ರಷ್ಟು ಮತದಾನವಾಗಿದೆ. ಕೋವಿಡ್‌ ಹಿನ್ನೆಲೆ ಮತದಾರರಿಗೆ ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್, ಸ್ಯಾಮಿಟೈಸರ್‌ ಬಳಸಿ ಸಾಮಾಜಿಕ ಅಂತರದೊಂದಿಗೆ ಮತದಾನ ನಡೆಯಿತು.

ಬೆಳಗ್ಗೆ ಮಂದಗತಿಯಲ್ಲಿ ಸಾಗಿತ ಮತದಾನ ಸಮಯ ಏರುತ್ತಲೇ ಶೇಕಡಾವಾರು ಮತದಾನವೂ ಹೆಚ್ಚಾಳವಾಗುತ್ತಿರುವುದು ಕಂಡು ಬಂತು. ಬೆಳಗ್ಗೆ 7ರಿಂದ 9ರವರೆಗೆ ಸುರಪುರ ತಾಲೂಕು-ಶೇ.10.1, ಶಹಾಪುರತಾಲೂಕು-ಶೇ.8.92 ಹಾಗೂ ಹುಣಸಗಿ ತಾಲೂಕಿನಲ್ಲಿ ಶೇ.9.6 ದಾಖಲಾಗಿತ್ತು.

ಬೆಳಗ್ಗೆ 11 ಗಂಟೆಯ ವೇಳೆಗೆ ಸುರಪುರ-ಶೇ.29.35, ಶಹಾಪುರ-ಶೇ.27.3 ಹಾಗೂ ಹುಣಸಗಿ ತಾಲೂಕು ವ್ಯಾಪ್ತಿಯಲ್ಲಿ ಶೇ.23.06 ಹಕ್ಕು ಚಲಾವಣೆಗೊಂಡು ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 26.57 ಮತದಾನವಾಗಿತ್ತು.

ಇನ್ನು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸುರಪುರ-ಶೇ.49.87, ಶಹಾಪುರ-ಶೇ.47.08 ಹಾಗೂಹುಣಸಗಿ ತಾಲೂಕಿನಲ್ಲಿ ಶೇ.28.28 ಸೇರಿದಂತೆ ಒಟ್ಟಾರೆ ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 41.75 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುರಪುರ ಶೇ.58.91, ಶಹಾಪುರ ಶೇ.44.19 ಹಾಗೂಹುಣಸಗಿ ತಾಲೂಕು – ಶೇ.61.37 ಒಟ್ಟಾರೆ ಮೂರುತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ 54.83 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 1 ಸಾವಿರ ಸ್ಥಾನಗಳಿಗೆ 2444 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.

Advertisement

ಮತಗಟ್ಟೆ ಕೇಂದ್ರಕ್ಕೆ ಡಿಸಿ ಭೇಟಿ: ಶಹಾಪುರ ತಾಲೂಕಿನ ಮದ್ದರಕಿ, ಮೂಡಬುಳ ಗ್ರಾಪಂಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಡಿಸಿ ಡಾ.ರಾಗಪ್ರಿಯ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಪರಿಶೀಲಿಸಿದರು. ಶಹಾಪುರ ತಹಶೀಲ್ದಾರ ಮಹಿಬೂಬಿ, ನೋಡಲ್‌ ಅಧಿಕಾರಿ ರಾಜು ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next