ದೇವನಹಳ್ಳಿ: ರಾಜ್ಯ ಸರ್ಕಾರ ಕೋವಿಡ್ ಹೆಸರಿ ನಲ್ಲಿ ಹೆಣದ ಮೇಲೆ ಹಣ ಮಾಡುತ್ತಿದೆ ಎಂದು ಶಾಸಕ ಕೃಷ್ಣಬೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕಿನ ಆಲೂರು ದುದ್ದನ ಹಳ್ಳಿ ಗ್ರಾಮದಲ್ಲಿ ಗ್ರಾಪಂ ಚುನಾವಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಸ್ಕ್ ಸೇರಿದಂತೆ ಎಲ್ಲಾ ಪರಿಕರಗಳ ಮೇಲೂ ದುಡ್ಡು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಬಿಜೆಪಿಗೆ ಹತ್ತಿರದಲ್ಲಿ ಇದ್ದರೂ, ಅವರಿಗೆ ಮಾತ್ರ ಈ ಸರ್ಕಾರ ಮೀಸಲಾದೆ. ಇದು ದೇಶದ ಹೀನಪರಿಸ್ಥಿತಿ ಕೋವಿಡ್ ಸೋಂಕಿನಿಂದ ರಾಜ್ಯದಲ್ಲಿ ಜನ ಸಾಯುತ್ತಿದ್ದು, ಆಸ್ಪತ್ರೆಗೆ ಹಣ ಕಟ್ಟಲು ಮೀಟರ್ ಬಡ್ಡಿಯಲ್ಲಿ ಸಾಲ ಮಾಡುವಂತಾಗಿದೆ ಎಂದರು. ರೈತರಪರ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇದೀಗ ದೇಶದ ಆರ್ಥಿಕ ವ್ಯವಸ್ಥೆ ಉದ್ಧಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜಿಡಿಪಿಯನ್ನು ಪಾತಾಳಕ್ಕೆ ತಳ್ಳಿದ್ದಾರೆ. ಮುಂದಿನ ದಿನದಲ್ಲಿ ದೇಶವನ್ನು ಮುನ್ನಡೆಸಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದರು.
ಗ್ರಾಪಂ ಚುನಾವಣೆಗೆ ಪೂರ್ವಸಿದ್ಧತೆ: ವಿವಿಧ ಚುನಾವಣೆಗೂ ಮುನ್ನಾ ತಳಮಟ್ಟದ ಗ್ರಾಪಂ ಚುನಾವಣೆಯಲ್ಲಿಕಾಂಗ್ರೆಸ್ ಚುಕ್ಕಾಣಿ ಹಿಡಿಯಬೇಕಾಗಿದೆ. ಯಾರೇ ಅಭ್ಯರ್ಥಿಯಾಗಲೀ, ವೈರತ್ವ, ದ್ವೇಷ ಬದಿಗಿಟ್ಟು ಪಕ್ಷದ ಬಾವುಟ ಹಾರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಮುಂದಾಗಬೇಕುಕರೆ ನೀದರು.ಈ ವೇಳೆ ಗ್ರಾಮದ ಹಲವಾರು ವಿವಿಧ ಪಕ್ಷ ಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಮಾಜಿ ಶಾಸಕ ಮುನಿನರಸಿಂಹಯ್ಯ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಜಗನ್ನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್,ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜಿಪಂ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜು ನಾಥ್, ಜಿಪಂ ಸದಸ್ಯರಾದ ಅನಂತಕುಮಾರಿ, ರಾಧಮ್ಮ, ಕೆಪಿಸಿಸಿ ಸದಸ್ಯ ಪಟಾಲಪ್ಪ, ಚೇತನ್ ಗೌಡ, ದೇವನಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಉಪಾಧ್ಯಕ್ಷ ವಿ.ಶಾಂತ ಕುಮಾರ್, ಎಸ್.ಪಿ.ಮುನಿರಾಜ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಎಸ್.ಆರ್.ರವಿಕುಮಾರ್, ಜಿಲ್ಲಾ ಎಸ್‌ಟಿ ಘಟಕ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ತಾಲೂಕುಅಧ್ಯಕ್ಷ ಆರ್.ಸುಮಂತ್ ಸೇರಿದಂತೆ ಕಾರ್ಯಕರ್ತರು ಹಾಜರಾಗಿದ್ದರು.