Advertisement

ಊರು ಬಿಟ್ಟವರತ್ತ ಗ್ರಾಪಂ ಅಭ್ಯರ್ಥಿಗಳ ಚಿತ್ತ

03:39 PM Dec 24, 2020 | Suhan S |

ಜೇವರ್ಗಿ: ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

Advertisement

ಏತನ್ಮಧ್ಯೆ ಊರು ಬಿಟ್ಟು ಕೆಲಸ ಅರಸಿ ಬೇರೆಡೆ ವಲಸೆ ಹೋಗಿರುವವರು, ಜಿಲ್ಲೆ ಹಾಗೂ ತಾಲೂಕುಕೇಂದ್ರಗಳಲ್ಲಿದ್ದು ಊರಲ್ಲಿಯೇ ಮತದಾನಉಳಿಸಿಕೊಂಡವವರತ್ತ ಗ್ರಾಮ ಪಂಚಾಯಿತಿಅಭ್ಯರ್ಥಿಗಳು ಚಿತ್ತ ಹರಿದಿದೆ. ಊರಿಂದ ದೂರಉಳಿದವರನ್ನು ಚುನಾವಣೆ ದಿನದಂದು ಕರೆಸಿಕೊಳ್ಳಲುಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಅಖಾಡಶುರುವಾಗುತ್ತಿದ್ದಂತೆಯೇ ವಾರ್ಡ್‌ವಾರು ಮತದಾರರಪಟ್ಟಿ ಸಿದ್ಧ ಮಾಡಿಕೊಂಡಿರುವ ಅಭ್ಯರ್ಥಿಗಳುಗ್ರಾಮದಲ್ಲಿ ಇರುವವರು ಯಾರು? ವಲಸೆ ಹೋದವರು ಯಾರು? ಜಿಲ್ಲೆ ಹಾಗೂ ತಾಲೂಕುಕೇಂದ್ರಗಳಲ್ಲಿ ವಾಸ ಮಾಡುತ್ತಿರುವವರು ಯಾರು? ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಊರು ಬಿಟ್ಟ ಜನರ ಸಂಪರ್ಕ ಸಾಧಿಸುತ್ತಿದ್ದಾರೆ.

ಪಂಚಾಯಿತಿ ಚುನಾವಣೆಯಲ್ಲಿ ಒಂದೊಂದು ಮತವೂ ಸೋಲು-ಗೆಲುವಿಗೆ ನಿರ್ಣಯ ಆಗುವುದರಿಂದ ಅಭ್ಯರ್ಥಿಗಳಿಗೆ ಪ್ರತಿಯೊಂದು ಮತವೂ ಮಹತ್ವದ್ದಾಗಿದೆ. ಹೀಗಾಗಿ ಊರಲ್ಲಿನಮತದಾರರ ಜತೆಗೆ ಹೊರಗಡೆ ಇರುವವರತ್ತಲೂಗಮನ ಕೇಂದ್ರೀಕರಿಸಿ, ಚುನಾವಣೆ ದಿನ ಕರೆಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಲೂಕಿನಿಂದ ಮುಂಬೈ, ಪುಣೆ, ಬೆಂಗಳೂರು, ಹೈದ್ರಾಬಾದ, ಕರಡ್‌, ಮುಲ್ಕಿ (ಉಡುಪಿ) ಸೇರಿದಂತೆ ಬೇರೆ-ಬೇರೆ ನಗರಗಳಿಗೆ ದುಡಿಯಲು ಹೋದವರೇ ಹೆಚ್ಚು ಜನರಿದ್ದಾರೆ. ಅವರೆಲ್ಲರ ದೂರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕ ಸಾ ಧಿಸಿದ್ದಾರೆ. ಮತದಾನದ ದಿನದಂದು ರೈಲ್ವೆ, ಬಸ್‌ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಮಾಡುವ ಮೂಲಕ ಕರೆಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಪ್ರಮುಖವಾಗಿ ಸಾವಿರಾರು ಕೂಲಿ ಕಾರ್ಮಿಕರೆ ಕೆಲಸ ಅರಸಿ ಬೇರೆ ಊರುಗಳಿಗೆ ಹೋಗಿದ್ದಾರೆ. ಇವರಿಗೆ ವಾಹನದ ವ್ಯವಸ್ಥೆ ಜತೆ ಜತೆಗೆ ಗುಂಡು, ತುಂಡಿನ ಆಮೀಷ ಒಡ್ಡಲಾಗುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next