ಕೊಪ್ಪ: ಮಂಗಳವಾರ ನಡೆದ ತಾಲೂಕಿನ 21 ಗ್ರಾಪಂಗಳ ಚುನಾವಣೆಯಲ್ಲಿ 74 ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 189 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆಯಲ್ಲಿ ಭದ್ರವಾಗಿದೆ. ಡಿ.30ರಂದು ಮತ ಎಣಿಕೆ ನಡೆಯಲಿದೆ.
ಒಟ್ಟು 108 ಮತಗಟ್ಟೆಗಳಲ್ಲಿ ಮತದಾನವಾಗಿದ್ದು ಎಲ್ಲಾ ಮತಪೆಟ್ಟಿಗೆಗಳನ್ನು ಬಾಳಗಡಿಯ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಗೆ ಬಿಗು ಪೊಲೀಸ್ ಪಹರೆ ಜೊತೆಗೆ ಸಿಸಿ ಕ್ಯಾಮೆರದ ಕಣ್ಗಾವಲು ಇಡಲಾಗಿದೆ. 1ಪಿಎಸ್‌ಐ, 1 ಎಎಸ್‌ಐ, 1 ಎಚ್‌ಸಿ, 1 ಪಿಸಿ, 6 ಮಂದಿ ಮೀಸಲು ಪೊಲೀಸ್ ಸಿಬ್ಬಂ ದಿ, 1ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿದಂತೆ 11ಮಂದಿಯ ಎರಡು ತಂಡವನ್ನು ದಿನದ ಎರಡು ಪಾಳಿಯಲ್ಲಿ ಪಹರೆ ಹಾಕಲಾಗಿದೆ.
ತಾಲೂಕಿನಲ್ಲಿ 30,192 ಪುರುಷರು, 31,228 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ ಒಟ್ಟು 61,421ಮತದಾರರ ಪೈಕಿ 23,664 ಪುರುಷರು,24,229 ಮಹಿಳೆಯರು ಸೇರಿದಂತೆ ಒಟ್ಟು47,893 ಮಂದಿ ಮತ ಚಲಾಯಿಸಿದ್ದು ಶೇ.77.975 ಮತದಾನವಾಗಿದೆ.
ಶ್ಯಾನುವಳ್ಳಿ ಪಂಚಾಯತ್‌ನಲ್ಲಿ ಅತೀ ಹೆಚ್ಚು ಶೇ.88.6183 ಮತದಾನವಾಗಿದ್ದರೆ, ಕೊಪ್ಪ ಗ್ರಾಮಾಂತರ ಪಂಚಾಯತ್‌ನಲ್ಲಿ ಅತೀ ಕಡಿಮೆ ಶೇ.71.9547 ಮತದಾನವಾಗಿದೆ.ಕೊಪ್ಪ ಗ್ರಾಮಾಂತರ ಪಂಚಾಯತ್‌ನಲ್ಲಿ ಅತೀಹೆಚ್ಚು 4942 ಮಂದಿ ಮತದಾರರಿದ್ದರೆ, ಕೆಸವೆ ಪಂಚಾಯತ್‌ನಲ್ಲಿ ಅತೀ ಕಡಿಮೆ 1704 ಮತದಾರರಿದ್ದರು. ಕೊಪ್ಪ ಗ್ರಾಪಂನಲ್ಲಿ ಅತೀ ಹೆಚ್ಚು 3556 ಮಂದಿ ಮತ ಚಲಾಯಿಸಿದ್ದರೇ, ಕೆಸವೆ ಪಂಚಾಯತ್‌ನಲ್ಲಿ ಅತೀ ಕಡಿಮೆ 1414 ಮಂದಿ ಮತ ಚಲಾಯಿಸಿದ್ದಾರೆ. ಈ ಬಾರಿಯ ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರೇ ಹೆಚ್ಚು 31228 ಇದ್ದು ಮತದಾನದಲ್ಲೂ ಮಹಿಳೆಯರೇ 24,229 ಮುಂದೆ ಇದ್ದಾರೆ. ತಾಲೂಕಿನಲ್ಲಿ ಒಟ್ಟು 22 ಗ್ರಾಪಂಗಳಿದ್ದು ಹೇರೂರು ಗ್ರಾಪಂನ ಅವಧಿ ಮುಗಿಯದಿರುವಕಾರಣ ಚುನಾವಣೆ ನಡೆಯಲಿಲ್ಲ. ಉಳಿದ21 ಗ್ರಾಪಂಗಳ 193 ಸ್ಥಾನಗಳ ಪೈಕಿ 189ಸ್ಥಾ ನಕ್ಕೆ ಚುನಾವಣೆ ನಡೆಯಿತು. ಅತ್ತಿಕೊಡಿಗೆಗ್ರಾಪಂನ ಬೆತ್ತದಕೊಳಲು ಕ್ಷೇತ್ರದ ಎರಡು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ 5 ಮಂದಿ ನಾಮಪತ್ರ ವಾಪಸ್ ಪಡೆದ ಕಾರಣ ಅಲ್ಲಿಯಚು ನಾವಣೆಯನ್ನು ಮುಂದೂಡಲಾಗಿತ್ತು.
ಭಂಡಿಗಡಿ ಪಂಚಾಯತ್‌ನಲ್ಲಿ ಹೊಸೂರುಕ್ಷೇತ್ರದ ಎಸ್‌ಸಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರು ಹಾಗೂ ಕೆಸವೆ ಪಂಚಾಯತ್‌ನಕೆಸವೆ ಕ್ಷೇತ್ರದ ಎಸ್‌ಟಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಸುನೀತಾ ಅವಿರೋಧವಾಗಿ ಆಯ್ಕೆಯಾಗಿದ್ದರು.