ಬೀದರ: ಬಸವಕಲ್ಯಾಣ ಉಪಚುನಾವಣೆ ಘೋಷಣೆಗೂ ಮುನ್ನವೇ ಬಿರುಸುಗೊಂಡಿದ್ದ ರಾಜಕೀಯ ಚಟುವಟಿಕೆಗಳು ತಣ್ಣಗಾಗಿದ್ದರೆ ಇತ್ತ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಹಿನ್ನಲೆ “ಹಳ್ಳಿ ಕದನ’ ರಂಗೇರುತ್ತಿದೆ. ಮಿನಿ ಸಮರಕ್ಕೆ ಚುನಾವಣಾ ಆಕಾಂಕ್ಷಿತರು ತೆರೆ ಮೆರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ.
ಗಡಿ ಜಿಲ್ಲೆ ಬೀದರನಲ್ಲಿ ಒಟ್ಟು 185 ಗ್ರಾಮ ಪಂಚಾಯತಗಳಿದ್ದು, ಈ ಪೈಕಿ 7 ಪಂಚಾಯತಿ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಕಳೆದ ಬಾರಿಯಂತೆ ಈ ಚುನಾವಣೆಯಲ್ಲೂ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಲಾಗುತ್ತಿದ್ದು, ಬೀದರ ರಾಜ್ಯದಲ್ಲೇ ಇವಿಎಂ ಬಳಸುತ್ತಿರುವ ಏಕೈಕ ಜಿಲ್ಲೆ ಆಗಿರುವುದು ವಿಶೇಷ.
ಹುಮ್ಮಸ್ಸು ಹೆಚ್ಚಿಸಿದ ಪಕ್ಷಗಳು: ಗ್ರಾಪಂ ಪಕ್ಷ ರಹಿತ ಚುನಾವಣೆ ಆಗಿದ್ದರೂ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಬೆಂಬಲಿಗ ರಾಗಿರುವುದರಿಂದ ವಿವಿಧ ಪಕ್ಷಗಳು ಈಗಾಗಲೇ ಚುನಾವಣೆಗೆ ಕಹಳೆ ಊದಿದಿದ್ದಾರೆ. ಮುಂಬರುವ ವಿಧಾನಸಭೆ ಸಾರ್ವಜನಿಕ ಚುನಾವಣೆಗೆ ಪಕ್ಷವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ವಿವಿಧ ಪಕ್ಷಗಳು ಈ ಸ್ಥಳೀಯ ಸಂಸ್ಥೆ ಕುಸ್ತಿಯನ್ನು ಸಹ ಪ್ರತಿಷ್ಠೆಯಾಗಿ ಪಡೆದಿವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ ಬಸವಕಲ್ಯಾಣ ಉಪ ಕದನದ ಜತೆಗೆ ಗ್ರಾಪಂ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದರೆ ಇನ್ನೊಂದು ಬಿಜೆಪಿ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಹಳ್ಳಿ ಪಾಲಿಟಿಕ್ಸ್‌ಗಾಗಿ ಕಾರ್ಯಕರ್ತರಲ್ಲಿ ಹುಮಸ್ಸು ಹೆಚ್ಚಿಸಿದ್ದಾರೆ. ಆದರೆ, ಜೆಡಿಎಸ್ ಪಕ್ಷ ಮಾತ್ರ ಇನ್ನೂ ಅಖಾಡಕ್ಕೆ ಇಳಿಯಬೇಕಿದೆ.
ಇದನ್ನೂ ಓದಿ : ಊಟ ಕೊಡಿಸುವುದಾಗಿ ಕರೆದೊಯ್ದು ಆಸ್ಪತ್ರೆ ವಾರ್ಡ್ ಬಾಯ್ ಮತ್ತುಸ್ನೇಹಿತರಿಂದ ಬಾಲಕಿಯ ಅತ್ಯಾಚಾರ
ಅಧಿಕಾರ ವಿಕೇಂದ್ರೀಕರಣ ಬಳಿಕ ಪಂಚಾಯತಗಳಿಗೆ ಅನುದಾನ ಹರಿದುಬರುತ್ತಿರುವ ಕಾರಣ ಗ್ರಾಪಂಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಜತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ನಿಗದಿಪಡಿಸಿರುವುದು ಹಾಗೂ ಸ್ಥಳೀಯವಾಗಿ ಜನರ ಕೆಲಸ ಮಾಡಿಕೊಟ್ಟು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬಹುದೆಂಬ ಆಸೆ ಸಣ್ಣಪುಟ್ಟ ನಾಯಕರಲ್ಲಿ ಬೆಳೆಯುತ್ತಿರುವುದು ಸ್ಪರ್ಧಾಗಳುಗಳಲ್ಲಿ ಯುವ ಸಮೂಹದ ಸಂಖ್ಯೆ ಅಧಿಕವಾಗುತ್ತಿದ್ದು, ಜಿದ್ದಾ ಜಿದ್ದಿನ ಪೈಪೋಟಿಗೆ ವೇದಿಕೆ ಸಿದ್ಧವಾಗುತ್ತಿದೆ. ಪ್ರತಿ ಗ್ರಾಮ, ಓಣಿಗಳಲ್ಲಿ ಚುನಾವಣೆಯದ್ದೇ ಸದ್ದು. ಪಂಚಾಯತಿಕಟ್ಟೆ, ಹೊಟೇಲ್‌ಗಳು, ಸಭೆ-ಸಮಾರಂಭಗಳಲ್ಲಿ ಕದನದ ಚರ್ಚೆ ನಡೆಯುತ್ತಿದೆ. ವಾರ್ಡ್‌ವಾರು ಮೀಸಲಾತಿ, ಗೆಲುವಿಗೆ ಜಾತಿ ಲೆಕ್ಕಾಚಾರದ ಮಾತುಗಳು ಕೇಳಿ ಬರಲಾರಂಭಿಸಿವೆ. ಸ್ಪರ್ಧೆಗೆ ಮನವರಿಕೆ,
ಬಾಡೂಟ ವ್ಯವಸ್ಥೆ: ಇನ್ನೂ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ತಂತ್ರಗಾರಿಕೆ ಆರಂಭಿಸಿದ್ದಾರೆ. ಮತದಾರ ಪ್ರಭುಗಳನ್ನು ಭೇಟಿ ಮಾಡಿ ತಮ್ಮ ಸ್ಪರ್ಧೆ ಬಗ್ಗೆ ಮನವರಿಕೆ ಮಾಡಿಕೊಡಲಾರಂಭಿಸಿದ್ದಾರೆ. ವಿಶೇಷವಾಗಿ ಎಂದಿಗೂ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳದವರು ಸಹ ಇದೇ ನೆಪದಲ್ಲಿ ಭರ್ಜರಿ ಬಾಡೂಟ ಮಾಡಿಸುವುದು, ಸಾರ್ವಜನಿಕ ಕಾರ್ಯಕ್ಕೆ ಹಣ ಖರ್ಚು ಮಾಡಿ ಓಲೈಕೆಗೆ ಮುಂದಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಂತೆ ಗ್ರಾಪಂ ಚುನಾವಣೆಯೂ ಸಹ ಬಿರುಸುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರವ ಚಳಿಯ ನಡುವೆಯೂ “ಹಳ್ಳಿ ಫೈಟ್’ನ ಅಖಾಡದ ಕಾವು ಏರಿಸುವಂತೆ ಮಾಡಿದೆ.
-ಶಶಿಕಾಂತ ಬಂಬುಳಗೆ