Advertisement

ಹಳ್ಳಿಫೈಟ್ ‌: ಮಹಿಳಾ ಮತದಾರರೇ ಹೆಚ್ಚು

07:49 PM Dec 18, 2020 | Suhan S |

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಮ   ಪಂಚಾಯಿತಿ ಚುನಾವಣೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದು, ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕಳೆದ ಬಾರಿಯ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಹಕ್ಕು ಚಲಾಯಿಸುವಮೂಲಕ ಸಂಸದೆ ಸುಮಲತಾ ಅಂಬರೀಶ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಂತೆ ಜಿಲ್ಲೆಯ 230 ಗ್ರಾಪಂಗಳಲ್ಲಿ ಚುನಾವಣೆಯ ನಡೆಯುತ್ತಿದ್ದು,ಮಹಿಳಾ ಮತದಾರರು ಹೆಚ್ಚಾಗಿದ್ದು,ನಾಲ್ಕು ತಾಲೂಕುಗಳಲ್ಲಿ ಪುರುಷ ಮತದಾರರಿಗಿಂತ ಹೆಚ್ಚಿದ್ದಾರೆ.

Advertisement

12.47 ಲಕ್ಷ ಮತದಾರರು: ಗ್ರಾಮೀಣ ಭಾಗಕ್ಕೆ ಸೀಮಿತವಾಗಿರುವ ಚುನಾವಣೆಯಲ್ಲಿ12,47,466 ಮತದಾರರಿದ್ದಾರೆ. ಇದರಲ್ಲಿಮಂಡ್ಯ, ಮದ್ದೂರು, ಪಾಂಡವಪುರ ಹಾಗೂಶ್ರೀರಂಗಪಟ್ಟಣ ತಾಲೂಕಿನಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.ಮಂಡ್ಯ ತಾಲೂಕಿನಲ್ಲಿ 1,16,990ಮಹಿಳೆಯರು, 1,16,001 ಪುರುಷರು,ಮದ್ದೂರಿನಲ್ಲಿ 1,15,699 ಮಹಿಳೆಯರು, 1,12,762 ಪುರುಷರು, ಪಾಂಡವಪುರದಲ್ಲಿ64,346 ಮಹಿಳೆಯರು, 54,252ಪುರುಷರು ಹಾಗೂ ಶ್ರೀರಂಗಪಟ್ಟಣದಲ್ಲಿ 63,660 ಪುರುಷರು, 62,620ಪುರುಷ ಮತದಾರರಿದ್ದಾರೆ. 94 ಮಂಗಳಮುಖೀ ಹಕ್ಕು ಹೊಂದಿದ್ದಾರೆ.

ಇನ್ನುಳಿದಂತೆ ಮಳವಳ್ಳಿ ತಾಲೂಕಿನಲ್ಲಿ 1,04,521 ಪುರುಷರು, 1,01,815 ಮಹಿಳೆಯರು, ಕೆ.ಆರ್‌.ಪೇಟೆತಾಲೂಕಿನಲ್ಲಿ 94,943 ಪುರುಷರು, 92,431 ಮಹಿಳೆಯರು ಹಾಗೂ ನಾಗಮಂಗಲತಾಲೂಕಿನಲ್ಲಿ 69,184 ಪುರುಷರು, 68,148 ಮಹಿಳಾ ಮತದಾರರಿದ್ದಾರೆ.

ಬಹುತೇಕ ಮಹಿಳಾ ಅಭ್ಯರ್ಥಿಗಳಿಗೆ ಗ್ಯಾಸ್‌ ಚಿಹ್ನೆ: ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಬಹುತೇಕ ಗ್ಯಾಸ್‌ ಸಿಲಿಂಡರ್‌, ಕುಕ್ಕರ್‌, ಹೊಲಿಗೆಯಂತ್ರ, ತುಂಬಿರುವ ಕೊಡಸೇರಿದಂತೆ ವಿವಿಧ ಚಿಹ್ನೆಗಳಿಗೆ ಒಲವುತೋರಿದ್ದಾರೆ. ಅದೇ ರೀತಿಯ ಚಿಹ್ನೆ ಪಡೆಯಲು ಮುಂದಾಗಿದ್ದಾರೆ. ಮೊದಲ ಹಂತದ ಚುನಾವಣೆ ನಡೆಯುವ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಗ್ರಾಪಂಗಳಲ್ಲಿ ಸ್ಪರ್ಧಿಸಿರುವ ಮಹಿಳಾ ಮತದಾರರು ಪಡೆದುಕೊಂಡಿದ್ದಾರೆ.

ಟ್ರ್ಯಾಕ್ಟರ್‌, ರೈತ ಚಿಹ್ನೆಗೆ ಪುರುಷ ಮತ ದಾರರ ಒಲವು: ಟ್ರ್ಯಾಕ್ಟರ್‌, ಆಟೋ, ಉಳು ಮೆಮಾಡುತ್ತಿರುವ ರೈತ,ಜೋಡಿಬಾಳೆಗೊನೆ, ತೆಂಗಿನ ತೋಟ ಚಿಹ್ನೆಗಳಿಗೆ ಪುರುಷಮತದಾರರು ಒಲವು ತೋರುತ್ತಿದ್ದಾರೆ. ಚುನಾವಣಾಕಾರಿಗಳಿಗೆ ಅದೇ ಚಿಹ್ನೆಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ಮೊದಲಹಂತದಲ್ಲಿ ನಡೆಯಲಿರುವ ಮಂಡ್ಯ,ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಗ್ರಾಪಂಗಳ ಅಭ್ಯರ್ಥಿಗಳು ಇಂಥ ಚಿಹ್ನೆಗಳನ್ನು ಪಡೆದುಕೊಂಡಿದ್ದಾರೆ.

Advertisement

ಯುವ ಪದವೀಧರ ಅಭ್ಯರ್ಥಿಗಳೇ ಅಧಿಕ :  ಜಿಲ್ಲೆಯಲ್ಲಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಯುವ ಪದವೀಧರ ಅಭ್ಯರ್ಥಿಗಳೇ ಹೆಚ್ಚಾಗಿ ಸ್ಪರ್ಧೆಯಲ್ಲಿದ್ದಾರೆ. ಮೊದಲ ಹಂತದ ಮಂಡ್ಯ, ಮದ್ದೂರು, ಮಳವಳ್ಳಿ ಹಾಗೂ ಎರಡನೇ ಹಂತದಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲೂಕುಗಳ ಗ್ರಾಪಂ ಚುನಾವಣೆಯಲ್ಲಿಯುವಅಭ್ಯರ್ಥಿಗಳುಹೆಚ್ಚು ಉತ್ಸುಕತೆಯಿಂದಚುನಾವಣೆಗೆ ಸ್ಪರ್ಧಿಸಿದ್ದಾರೆ.

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next