Advertisement

ಗ್ರಾಪಂ ಚುನಾವಣೆ ಸರ್ಕಾರ ಅಂತ್ಯಕ್ಕೆ ದಿಕ್ಸೂಚಿ

07:22 PM Dec 13, 2020 | Suhan S |

ಬಂಗಾರಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ಅಂತ್ಯ ಹಾಡಲು ಗ್ರಾಪಂ ಚುನಾವಣೆ ದಿಕ್ಸೂಚಿಯಾಗಿದ್ದು,ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಗ್ರಾಪಂಗಳು ಕಾಂಗ್ರೆಸ್‌ ವಶವಾಗುವುದು ಖಚಿತಎಂದು ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ನಾಗರಾಜ್‌ ಭವಿಷ್ಯ ನುಡಿದರು.

Advertisement

ತಾಲೂಕಿನ ಬೂದಿಕೋಟೆ ಬ್ಲಾಕ್‌ ವ್ಯಾಪ್ತಿಗೆ ಬರುವ 16 ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರನ್ನು ಕಣಕ್ಕಿಳಿಸಿ ಬಳಿಕ ಮಾತನಾಡಿದ ಅವರು,ಬಿಜೆಪಿ ಸರ್ಕಾರದ ಮೇಲೆ ಯುವಕರು ಹೆಚ್ಚಿನ ಒಲವನ್ನಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಅವರ ಕೈಗೆ ನೀಡಿದರು. ಆದರೆ ಜನರ ನಿರೀಕ್ಷೆಯಂತೆ ಕೆಲಸ ಮಾಡದೆ ಬದಲಿಗೆ ಜನವಿರೋಧಿ ಸರ್ಕಾರಗಳೆಂದು ಗುರುತಿಸಿಕೊಂಡಿದೆ ಎಂದು ದೂರಿದರು.

ಇತ್ತೀಚಿಗೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರಿಂದ ಹಾಗೂ ಜನರಿಂದ ಮತ್ತಷ್ಟು ದೂರಉಳಿಯುವಂತಾಗಿದೆ. ಇದರಿಂದ  ಯುವಕರು ಬಿಜೆಪಿ ಮೇಲಿನ ನಂಬಿಕೆ ಕಳೆದುಕೊಂಡಿದೆ. ಕ್ಷೇತ್ರದಲ್ಲಿ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಜಿಲ್ಲೆಯಲ್ಲೇ ಮಾದರಿಯಾಗುವಂತಹ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಗಮನ ಸಳೆದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ವರವಾಗಿದೆ ಎಂದರು.

ತಾಲೂಕಿನ ಬೂದಿಕೋಟೆ ಬ್ಲಾಕ್‌ ವ್ಯಾಪ್ತಿಯ16ಗ್ರಾಪಂಗಳಲ್ಲಿ16ರಲ್ಲಿಯೂ ಕಾಂಗ್ರೆಸ್‌ ಬೆಂಬಲಿಗರೇ ಆಯ್ಕೆಯಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆಂದರು.ಕೆ.ವಿ.ನಾಗರಾಜ್‌ತಮ್ಮ ಬೆಂಬಲಿಗರೊಂದಿಗೆ ಬಂದುನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಮಂಜುನಾಥ, ಆರ್‌. ಚಲಪತಿ,ಎಪಿಎಂಸಿ ನಿರ್ದೇಶಕಕೊಂಡಪ್ಪ ನಾಯಕ, ವೆಂಕಟೇಶಪ್ಪ, ಬಡ್ಡೇಗೌಡ, ಕೃಷ್ಣೇಗೌಡ, ಉಜಾಲ ಶಂಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next