ವಿಜಯಪುರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಸಾರ್ವತ್ರಿಕ ಚುನಾವಣೆಗೆ ವಿವಿಧ ಗ್ರಾಮಪಂಚಾಯತ್‌ಗಳಲ್ಲಿ ಡಿ. 11ರಂದು ಒಂದೇ ದಿನ 4501 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿ ಕಾರಿಗಳಾದ ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ವಿಜಯಪುರ, ಬಬಲೇಶ್ವರ, ತಿಕೋಟಾ, ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕಿನಗ್ರಾಪಂಗಳಿಗೆ ಚುನಾವಣೆ ಜರುಗಲಿದೆ. ವಿಜಯಪುರ ತಾಲೂಕಿನ ಗ್ರಾಪಂಗಳಿಗೆ 713, ಬಬಲೇಶ್ವರ ತಾಲೂಕಿನ ಗ್ರಾಪಂಗಳಿಗೆ831, ತಿಕೋಟಾ ತಾಲೂಕಿನ ಗ್ರಾಪಂಗಳಿಗೆ669, ಬಸವನಬಾಗೇವಾಡಿ ತಾಲೂಕಿನಗ್ರಾಪಂಗಳಿಗೆ 720, ನಿಡಗುಂದಿ ತಾಲೂಕಿನಗ್ರಾಪಂಗಳಿಗೆ 308, ಕೊಲ್ಹಾರ ತಾಲೂಕಿನ ಗ್ರಾಪಂಗಳಿಗೆ 301, ಮುದ್ದೇಬಿಹಾಳ ತಾಲೂಕಿನಗ್ರಾಪಂಗಳಿಗೆ 483, ತಾಳಿಕೋಟೆ ತಾಲೂಕಿನ ಗ್ರಾಪಂಗಳಿಗೆ 476 ಹೀಗೆ ಒಟ್ಟು 4501 ಗ್ರಾಮ ಪಂಚಾಯತ್‌ಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ 7,533 ನಾಮಪತ್ರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದಡಿ. 7ರಿಂದ 11ರವರೆಗೆ ವಿವಿಧ ಗ್ರಾಪಂಗಳಿಗೆ 7533 ನಾಮಪತ್ರಗಳು ಸಲ್ಲಿಕೆಯಾಗಿವೆ. ವಿಜಯಪುರ ತಾಲೂಕಿನ ಗ್ರಾಪಂಗಳಿಗೆ 1358, ಬಬಲೇಶ್ವರ ತಾಲೂಕಿನ ಗ್ರಾಪಂಗಳಿಗೆ 1070, ತಿಕೋಟಾ ತಾಲೂಕಿನ ಗ್ರಾಮ ಪಂಚಾಯತ್ ಗಳಿಗೆ 974, ಬಸವನಬಾಗೇವಾಡಿ ತಾಲೂಕಿನ ಗ್ರಾಪಂಗಳಿಗೆ 1005, ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ 478, ಕೊಲ್ಹಾರ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ 479, ಮುದ್ದೇಬಿಹಾಳ ತಾಲೂಕಿನಗ್ರಾಪಂಗಳಿಗೆ 1158, ತಾಳಿಕೋಟೆ ತಾಲೂಕಿನ ಗ್ರಾಪಂಗಳಿಗೆ 1011 ಸೇರಿ 7533 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
2ನೇ ಹಂತದ ಚುನಾವಣೆ:
ಮೊದಲ ದಿನ 295 ನಾಮಪತ್ರ ಜಿಲ್ಲೆಯಲ್ಲಿ 2ನೇ ಹಂತದ ಚುನಾವಣೆ ನಡೆಯಲಿರುವ ಗ್ರಾಪಂಗಳಿಗೆ ಡಿ. 11ರಂದು 295 ನಾಮಪತ್ರ ಸಲ್ಲಿಕೆಯಾಗಿವೆ. ಇಂಡಿ ತಾಲೂಕಿನ ಗ್ರಾಪಂಗಳಿಗೆ 144, ಚಡಚಣ ತಾಲೂಕಿನ ಗ್ರಾಪಂಗಳಿಗೆ 48, ಸಿಂದಗಿ ತಾಲೂಕಿನ ಗ್ರಾಪಂಗಳಿಗೆ 90, ದೇವರಹಿಪ್ಪರಗಿ ತಾಲೂಕಿನ 13 ಗ್ರಾಪಂಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ವಿವರಿಸಿದ್ದಾರೆ.