Advertisement

ಗ್ರಾಪಂ ಚುನಾವಣೆ: ಬಿಜೆಪಿಯಿಂದ 15 ಪ್ರಮುಖರ ವಿಶೇಷ ಸಮಿತಿ

06:18 PM Dec 08, 2020 | Suhan S |

ಸೊರಬ: ತಾಲೂಕು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲದೆ ಗ್ರಾಪಂಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಸಿದ್ಧರಾಗಿದ್ದು, ಈನಿಟ್ಟಿನಲ್ಲಿ 15 ಜನ ಪ್ರಮುಖರವಿಶೇಷ ಸಮಿತಿ ರಚಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಮುಖಂಡರಲ್ಲಿ ಉಂಟಾಗಿರುವಭಿನ್ನಾಭಿಪ್ರಾಯಗಳು ಶಮನವಾಗಿದ್ದು,ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲುಸಮಿತಿ ರಚಿಸಲಾಗಿದೆ. ಈ ಸಮಿತಿಯುಗ್ರಾಪಂ ಚುನಾವಣೆಗೆ ಸೀಮಿತವಾಗಿದೆ.ಮುಖಂಡರಲ್ಲಿ ಉಂಟಾಗಿದ್ದಭಿನ್ನಾಭಿಪ್ರಾಯವನ್ನು ಜಿಲ್ಲಾ ಸಮಿತಿಗಂಭೀರವಾಗಿ ಪರಿಗಣಿಸಿ ಸಮಿತಿ ರಚಿಸಿದೆ. ಗ್ರಾಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖಂಡರಲ್ಲಿರುವ ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿ ಒಂದಾಗಿಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದ್ದು, ಶಕ್ತಿ ಕೇಂದ್ರ, ಯುವ ಮೋರ್ಚಾಗಳ ಅಧ್ಯಕ್ಷರುಹಾಗೂ ಪದಾಧಿಕಾರಿಗಳು ಈಗಾಗಲೇ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿವೆ. ಕ್ಷೇತ್ರದಲ್ಲಿ ಚುನಾವಣೆ ನಡೆಯಲಿರುವ 35 ಗ್ರಾಪಂನಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಆಗುವುದು ಖಚಿತ ಎಂದು ತಿಳಿಸಿದರು.

ರಾಜ್ಯಪ್ರಕೋಷ್ಟದ ಸಹ ಸಂಚಾಲಕ ಆರ್‌.ಕೆ. ಸಿದ್ರಾಮಣ್ಣ, ರಾಷ್ಟ್ರೀಯ ಪರಿಷತ್‌ ಸದಸ್ಯಪಾಣಿ ರಾಜಪ್ಪ, ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ, ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ, ಗುರುಪ್ರಸನ್ನ ಗೌಡ,ಕೊಟ್ರೇಶಗೌಡ, ಎ.ಎಲ್‌. ಅರವಿಂದ್‌,ಗಜಾನನ ರಾವ್‌, ದಿವಾಕರ ಭಾವೆ,ಈಶ್ವರ ಚನ್ನಪಟ್ಟಣ, ಎಂ.ಕೆ. ಯೋಗೇಶ್‌,ಲಲಿತಾ ನಾರಾಯಣಪ್ಪ, ಮಧುಕೇಶ್ವರ, ಶಿವಕುಮಾರ್‌ ಕಡಸೂರು, ದೇವೇಂದ್ರಪ್ಪ ಚನ್ನಾಪುರ, ಮಲ್ಲಿಕಾರ್ಜುನ ವೃತ್ತಿಕೊಪ್ಪ,ಅವರನ್ನು ಗ್ರಾಪಂ ಚುನಾವಣೆಗಾಗಿ ಉಸ್ತುವಾರಿಯಾಗಿ ನೇಮಕಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಶಾಸಕ ಕುಮಾರ್‌ ಬಂಗಾರಪ್ಪ, ವಿಧಾನ ಪರಿಷತ್‌ ಸದಸ್ಯ ಮಾಜಿ ಸಿದ್ದರಾಮಣ್ಣ,ಎಚ್‌.ಎಸ್‌. ಮಂಜಪ್ಪ, ಪಪಂ ಅಧ್ಯಕ್ಷ ಎಂ.ಡಿ.ಉಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next