Advertisement

ಮೊದಲ ಹಂತದ ಚುನಾವಣೆ 5,686 ನಾಮ ಪತ್ರ ಕ್ರಮಬದ್ಧ

06:02 PM Dec 14, 2020 | Suhan S |

ಕೋಲಾರ: ಜಿಲ್ಲೆಯ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಒಟ್ಟು 5,701 ನಾಮಪತ್ರ ಸಲ್ಲಿಕೆಯಾಗಿದ್ದು, ಪರಿಶೀಲನೆ ನಂತರ 35ತಿರಸ್ಕೃತಗೊಂಡಿದ್ದು,5,686ಕ್ರಮಬದ್ಧವಾಗಿವೆ. ಕೋಲಾರ ತಾಲೂಕಿನಲ್ಲಿ 22 ತಿರಸ್ಕೃತ,2143ಕ್ರಮಬದ್ಧ, ಮಾಲೂರು ತಾ.5 ತಿರಸ್ಕೃತ ,1900 ಕ್ರಮಬದ್ಧ. ಶ್ರೀನಿವಾಸಪುರ ತಾ. 8 ತಿರಸ್ಕೃತ,1643 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

Advertisement

85 ಗ್ರಾಪಂ, 1520 ಸ್ಥಾನ, 5701 ನಾಮಪತ್ರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕುಗಳ ಗ್ರಾಪಂ ಚುನಾವಣೆಯ 85 ಪಂಚಾಯ್ತಿಗಳ 1520ಸ್ಥಾನಗಳಿಗೆ 5701 ಮಂದಿ ನಾಮಪತ್ರ ಗಳನ್ನು ಸಲ್ಲಿಸಿದ್ದಾರೆ. ಕೋಲಾರ ತಾಲೂಕಿನ 32 ಪಂಚಾಯ್ತಿಗಳ569 ಸ್ಥಾನಗಳಿಗೆ2149 ನಾಮ ಪತ್ರಗಳು, ಮಾಲೂರು ತಾ.28 ಗ್ರಾಪಂಗೆ 505ಸ್ಥಾನಗಳಿಗೆ 1906, ಶ್ರೀನಿವಾಸಪುರ ತಾ.25 ಗ್ರಾಪಂ 446 ಸ್ಥಾನಗಳಿಗೆ 1646 ನಾಮಪತ್ರ ಸಲ್ಲಿಕೆಯಾಗಿವೆ. ಪರಿಶಿಷ್ಟ ಜಾತಿಯಿಂದ 822 ಪುರುಷರು, 839 ಮಹಿಳೆಯರು ಸೇರಿದಂತೆಒಟ್ಟು 1661 ಮಂದಿ, ಪ.ಪಂಗಡದಿಂದ 161  ಪುರುಷರು, 301 ಮಹಿಳೆಯರು ಸೇರಿದಂತೆಒಟ್ಟು 432, ಹಿಂದುಳಿದ ಅ ವರ್ಗದಿಂದ 121 ಪುರುಷರು, 249 ಮಹಿಳೆಯರುಸೇರಿದಂತೆ ಒಟ್ಟು 370, ಹಿಂದುಳಿದ ಬ ವರ್ಗದಿಂದ 87 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು97 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗದಿಂದ1,930 ಪುರುಷರು, 1,181 ಮಹಿಳೆಯರು ಸೇರಿದಂತೆ ಒಟ್ಟು 3,111 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸದೆ ಖಾಲಿ ಬಿಟ್ಟಿರುವ ಯಾವ ಸ್ಥಾನವೂ ಇಲ್ಲವೆಂದು ಜಿಲ್ಲಾ ಚುನಾವಣಾ ತಹಶೀಲ್ದಾರ್‌ ನಾಗವೇಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next