Advertisement

821 ಸ್ಥಾನಕ್ಕೆ 1987 ಅಭ್ಯರ್ಥಿಗಳು ಸ್ಪರ್ಧೆ

03:13 PM Dec 16, 2020 | Suhan S |

ರಾಮನಗರ: ಡಿ.22ರಂದು ನಡೆಯುವ ರಾಮನಗರ ಮತ್ತು ಕನಕಪುರ ತಾಲೂಕುಗಳ ಒಟ್ಟು 56 ಗ್ರಾಮಪಂಚಾಯ್ತಿಗಳ 971 ಸ್ಥಾನಗಳ ಪೈಕಿ 147 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿವೆ.3 ಸ್ಥಾನಗಳಿಗೆ ನಾಮಪ ತ್ರಗಳು ಸಲ್ಲಿಕೆಯಾಗಿಲ್ಲ. ಹೀಗಾಗಿ ಉಳಿದ 821 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Advertisement

56 ಗ್ರಾಮ ಪಂಚಾಯ್ತಿಗಳಿಗೆ ಸ್ಪರ್ಧೆ ಬಯಸಿ ಒಟ್ಟು 3575 ನಾಮಪತ್ರಗಳು ಸಲ್ಲಿಕೆಯಾಗಿದ್ದವು.ಪರಿಶೀಲನೆ ವೇಳೆ 53 ನಾಮಪತ್ರಗಳು (ರಾಮನಗರ 2, ಕನಕಪುರ 53) ತಿರಸ್ಕೃತವಾಗಿದ್ದವು. ನಾಮಪತ್ರಗಳು ಹಿಂಪಡೆಯುವ ಅವಕಾಶದಲ್ಲಿಅಂತಿಮವಾಗಿ 1987 (ರಾಮನಗರದಲ್ಲಿ 1157 ಮತ್ತು ಕನಕಪುರದಲ್ಲಿ 830) ಉಮೇದುವಾರರು ಕಣದಲ್ಲಿ ಉಳಿದುಕೊಂಡಿದ್ದಾರೆ.

ಅವಿರೋಧವಾಗಿ ಆಯ್ಕೆಯಾಗಿದ್ದೆಲ್ಲಿ?: ರಾಮನಗರ ತಾಲೂಕಿನ 20 ಗ್ರಾಮ ಪಂಚಾಯ್ತಿಗಳ 359 ಸ್ಥಾನಗಳ ಪೈಕಿ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 2 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿ ಕೆಯಾಗಿಲ್ಲ. ಉಳಿದ 331 ಸ್ಥಾನಗಳಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳ ಸ್ಥಾನಗಳ ಮಾಹಿತಿ ಇಲ್ಲಿದೆ. ಗ್ರಾಮ ಪಂಚಾಯ್ತಿಯ ಹೆಸರಿನ ಮುಂದೆ ಅವಿರೋಧವಾಗಿ ಆಯ್ಕೆಯಾದ ಸಂಖ್ಯೆ ಇದೆ. ಒಟ್ಟು ಸ್ಥಾನಗಳ ಸಂಖ್ಯೆಯನ್ನು ಆವರಣದಲ್ಲಿ ಕೊಟ್ಟಿದೆ. ಕಂಚುಗಾರನಹಳ್ಳಿ 2 (17), ಗೋಪಹಳ್ಳಿ 3 (26), ಮಂಚನಾಯ್ಕನಹಳ್ಳಿ 3 (34), ಬಿಳಗುಂಬ 2 (18), ಸುಗ್ಗನಹಳ್ಳಿ2 (20),ಕೂಟಗಲ್‌2 (19), ದೊಡ್ಡಗಂಗವಾಡಿ 1 (9), ಹುಲಿಕೆರೆಗುನ್ನೂರು 1 (17), ಲಕ್ಷ್ಮೀಪುರ 1 (18), ಕೈಲಾಂಚ 5(15), ಹುಣಸನಹಳ್ಳಿ1 (21), ವಿಭೂತಿಕೆರೆ2 (19),ಶ್ಯಾನುಭೋಗನಹಳ್ಳಿ1 (16).

121 ಸ್ಥಾನಗಳಿಗೆ ಅವಿರೋಧ ಆಯ್ಕೆ: ಕನಕಪುರದ 36 ಗ್ರಾಮ ಪಂಚಾಯ್ತಿಗಳ 612 ಸ್ಥಾನಗಳ ಪೈಕಿ 121ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 1 ಸ್ಥಾನಕ್ಕೆನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದ 490 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯ್ತಿಯ ಹೆಸರಿನ ಮುಂದೆ ಅವಿರೋಧವಾಗಿ ಆಯ್ಕೆಯಾದ ಸಂಖ್ಯೆ ಇದೆ. ಒಟ್ಟು ಸ್ಥಾನಗಳ ಸಂಖ್ಯೆಯನ್ನು ಆವರಣದಲ್ಲಿ ಕೊಟ್ಟಿದೆ. ಯಲಚವಾಡಿ 2 (18), ಚೀಲೂರು3 (31), ದೊಡ್ಡಮರಳವಾಡಿ 5 (19), ತೋಕಸಂದ್ರ 1(18), ಚಿಕ್ಕಮುದವಾಡಿ 2 (18), ಅಳ್ಳಿಮಾರನಹಳ್ಳಿ5 (14), ಸೋಮದ್ಯಾಪನಹಳ್ಳಿ 2 (15), ಕಲ್ಲಹಳ್ಳಿ 5 (17), ಚಾಕನಹಳ್ಳಿ 6 (22), ಟಿ.ಬೇಕುಪ್ಪೆ 5 (19), ಶಿವನಹಳ್ಳಿ 4 (20), ಅಚ್ಚಲು 3 (20), ಚೂಡಹಳ್ಳಿ 3 (16), ಅರೆಕಟ್ಟೆದೊಡ್ಡಿ 1 (15), ಕಾಡಹಳ್ಳಿ 3 (17), ಸಾತನೂರು 9 (20), ಮರಳೇಬೇಕುಪ್ಪೆ 7 (15),ದೊಡ್ಡಾಲಹಳ್ಳಿ 2 (16), ಐ ಗೊಲ್ಲಹಳ್ಳಿ 5 (19), ಮುಳ್ಳಹಳ್ಳಿ 4 (14), ಹೂಕುಂದ 2 (14), ಕೋಡಿ ಹಳ್ಳಿ23(24), ಅರಕೆರೆ7 (15), ಹೇರಂದ್ಯಾಪನಹಳ್ಳಿ 3 (17),ಕೊಳಗೊಂಡನಹಳ್ಳಿ5 (22), ಹೊಸದುರ್ಗ 2 (19), ಬನ್ನಿಮಕೋಡ್ಲು2 (16).

ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ವಿಶೇಷ: ಕನಕಪುರ ತಾಲೂಕು ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಕ್ಷೇತ್ರಜಿಲ್ಲೆಯ ಗಮನ ಸೆಳೆದಿದೆ. ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯ 24 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಈ ಪೈಕಿ 23 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1 ಸ್ಥಾನಕ್ಕೆ ಮಾತ್ರಚುನಾವಣೆ ನಡೆಯಬೇಕಿದೆ. ಕೋಡಿಹಳ್ಳಿ ಪಂಚಯ್ತಿ ವ್ಯಾಪ್ತಿಯ ಹೊಸದಡ್ಡಿ ಗ್ರಾಮದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಮಾತ್ರ ಚುನಾವಣೆಯಾಗಬೇಕಾಗಿದೆ. ಕಾಂಗ್ರೆಸ್‌ ಬೆಂಬಲಿತ ಪಿ.ಜಗದೀಶ್‌ ಮತ್ತು ಬಿಜೆಪಿ ಬೆಂಬಲಿ ಎಂ. ಆರ್‌.ರಮೇಶ್‌ ನಡುವೆ ಹಣಾಹಣಿ ನಡೆಯಲಿದೆ. ಈ ಕ್ಷೇತ್ರದ800 ಮತದಾರರು ತಮ್ಮ ಇಚ್ಚೆಯ ಪ್ರತಿನಿಧಿಯನ್ನು ಆಯ್ಕೆಮಾಡಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next