Advertisement

ಗ್ರಾ.ಪಂ. ಸರಕಾರದ ಮಟ್ಟಕ್ಕೆ ಬೆಳೆಯಲಿ

10:49 PM Jun 06, 2019 | mahesh |

ಬೆಳ್ಳಾರೆ: ಸಮಾಜದ ಬದಲಾವಣೆಯಾಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಮತ್ತು ಅವಕಾಶ ಸಿಗುವಂತೆ ಮಾಡುವ ಗ್ರಾ.ಪಂ.ಗಳು ಅಭಿವೃದ್ಧಿಯಾಗಬೇಕು. ಜನರ ಆಶಯ ಗಳನ್ನು ಈಡೇರಿಸುವ ಗ್ರಾ.ಪಂ.ಗಳು ಸ್ಥಳೀಯ ಸರಕಾರದ ಮಟ್ಟಕ್ಕೆ ಬೆಳೆ ದಾಗ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಆರ್‌.ಜಿ.ಎಸ್‌.ವೈ. ಅನುದಾನದಿಂದ. ನಿರ್ಮಾಣಗೊಂಡಿರುವ. ಬಾಳಿಲ ಗ್ರಾಮ ಪಂಚಾಯತ್‌ನ ನೂತನ ಮಿನಿ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾ.ಪಂ. ಸದಸ್ಯನ ಮೇಲೆ ಯಾವುದೇ ಸುಳ್ಳು ಆರೋಪದ ಪ್ರಕರಣಗಳು ದಾಖ ಲಾಗುವ ಮೊದಲು ಎಸ್‌ಪಿ ಮಟ್ಟದ ತನಿಖೆಯಾಗಬೇಕು. ಸದಸ್ಯರಿಗೆ ಉಚಿತ ಬಸ್‌ ಪಾಸ್‌ ಸಹಿತ ಗ್ರಾ.ಪಂ. ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೋಟ ಹೇಳಿದರು.

ಮನೆಬಾಗಿಲಿಗೆ ಯೋಜನೆ
ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾ ಟಿಸಿ, ನರೇಂದ್ರ ಮೋದಿ ಸರಕಾರ ಬಂದ ಬಳಿಕ ಕೇಂದ್ರ ಸರಕಾರದ ಯೋಜನೆಗಳು ಗ್ರಾ.ಪಂ.ಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿವೆ. ಗ್ರಾಮ ಸ್ವಾಯತ್ತತೆಗೆ ಮೋದಿ ಸರಕಾರ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಉದ್ಯೋಗ ಖಾತರಿ ಯೋಜನೆಯ ಮೊತ್ತವನ್ನು ನೇರವಾಗಿ ಗ್ರಾ.ಪಂ. ಖಾತೆಗೆ ಜಮೆ ಮಾಡುವ ಯೋಜನೆಯನ್ನು ಸರಕಾರ ಮಾಡಿದೆ ಎಂದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನದಿಂದ ನಿರ್ಮಾಣಗೊಂಡಿರುವ ನೂತನ ಗ್ರಾ.ಪಂ. ಕಟ್ಟಡವನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿ, ಶುಭ ಹಾರೈಸಿದರು. ಸುಳ್ಯ ಶಾಸಕ ಎಸ್‌. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯರಾದ ಎಸ್‌.ಎನ್‌. ಮನ್ಮಥ, ಪುಷ್ಪಾವತಿ ಬಾಳಿಲ, ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ತಾ.ಪಂ. ಸದಸ್ಯೆ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮೂಲೆಮಜಲು,

ಉಪಾಧ್ಯಕ್ಷೆ ಹೇಮಲತಾ ಕಾಯರ, ಸುಳ್ಯ ಪಂಚಾಯತ್‌ರಾಜ್‌ ಉಪವಿಭಾಗದ ಸಹಾಯಕ ಅಭಿಯಂತರ ಮಣಿಕಂಠನ್‌, ಕಳಂಜ ಬಾಳಿಲ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಧಾಕರ ರೈ ಎ.ಎಂ., ಗುತ್ತಿಗೆದಾರ ಶಬೀರ್‌, ಪಿಜಿಎಸ್‌ಎನ್‌ ಪ್ರಸಾದ್‌, ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ ಕಟ್ಟಡದ ಸ್ಥಳ ದಾನಿ ಕೆದ್ಲ ನರಸಿಂಹ ಭಟ್‌ ಮತ್ತು ಸಾವಿತ್ರಿ ದಂಪತಿಯನ್ನು ಸಮ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ಯು. ರಾಧಾಕೃಷ್ಣ ರಾವ್‌ ಪ್ರಸ್ತಾವಿಸಿದರು. ರವೀಂದ್ರ ರೈ ಟಪ್ಪಾಲುಕಟ್ಟೆ ಸ್ವಾಗತಿಸಿದರು. ರಮೇಶ್‌ ರೈ ಅಗಲ್ಪಾಡಿ ವಂದಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಮತ್ತು ರಾಜೇಶ್‌ ಅಯ್ಯನಕಟ್ಟೆ ನಿರ್ವಹಿಸಿದರು.

Advertisement

ಒಂದು ಕೋಟಿ ರೂ. ಅನುದಾನ
ಗ್ರಾಮದ ಉತ್ಥಾನಕ್ಕೆ ಆಡಳಿತ ಮತ್ತು ವಿಪಕ್ಷಗಳು ಒಂದಾಗಬೇಕು. ಗ್ರಾಮದ ಅಭಿವೃದ್ಧಿಯಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯ. ಪ್ರತಿ ಗ್ರಾಮ ಪಂಚಾಯತ್‌ನ ಅಭಿವೃದ್ಧಿಗೆ ಕೇಂದ್ರ ಸರಕಾರ ಒಂದು ಕೋಟಿ ರೂ. ಅನುದಾನ ಒದಗಿಸಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next