Advertisement

ಗ್ರಾಮದೇವತೆ ಕಿತ್ತೂರಮ್ಮ ರಥೋತ್ಸವ ಸಂಪನ್ನ

12:26 PM Feb 26, 2018 | Team Udayavani |

ಕಿತ್ತೂರು: ಪಿರಿಯಾಪಟ್ಟಣ ತಾಲೂಕು ಕಿತ್ತೂರು ಗ್ರಾಮದೇವತೆ ದುರ್ಗಾಪರಮೇಶ್ವರಿ ಕಿತ್ತೂರಮ್ಮ 18 ಕೊಪ್ಪಲಿಗೆ ಹೆಸರಾದ ಗ್ರಾಮದೇವತೆ ಕಿತ್ತೂರಮ್ಮನ ರಥೋತ್ಸವ ಭಾನುವಾರ ದಶಮಿ ಲಗ್ನದಲ್ಲಿ ಅದ್ಧೂರಿಯಾಗಿ ಜರುಗಿತು.

Advertisement

ಕಿತ್ತೂರು ಹಾಗೂ ಸುತ್ತಮುತ್ತಲಿನ 18 ಕೊಪ್ಪಲಿನ ವಿವಿಧ ಕೋಮುಗಳ ಮುಖಂಡರ ಮುಂದಾಳತ್ವದಲ್ಲಿ ದೇವರನ್ನು ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಗ್ರಾಮದ ತೇರಿನ ಮನೆಯ ಹತ್ತಿರ ತಂದು ಪೂಜಿಸಿ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ರಥವನ್ನು ಎಳೆಯಲಾಯಿತು.

ಶಾಸಕ ಕೆ.ವೆಂಕಟೇಶ್‌ ಅಭಿಮಾನಿ ಸಂಘದ ವತಿಯಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜನರಿಗೆ ಮಜ್ಜಿಗೆ ಹಾಗೂ ಪಾನಕ ವಿತರಿಸಿದರು.

ರಥೋತ್ಸವದ ಸಂದರ್ಭದಲ್ಲಿ ಶಾಸಕ ಕೆ.ವೆಂಕಟೇಶ್‌, ಜಿಪಂ ಸದಸ್ಯರಾದ ಕೆ.ಎಸ್‌ ಮಂಜುನಾಥ್‌, ಮುಖಂಡರಾದ ಎಸ್‌.ಮಂಜುನಾಥ್‌, ತಾಪಂ ಸದಸ್ಯರಾದ ಕೆ.ಕೀರ್ತಿ, ಗ್ರಾಮದ ಮುಖಂಡರಾದ ಪಟೇಲ ಕೀರ್ತಿ ಹಾಗೂ ತಾಲೂಕಿನ ಎಲ್ಲ ಪಕ್ಷದ ಮುಖಂಡರುಗಳು ಆಗಮಿಸಿದ್ದರು, ಅರ್ಚಕ ರಾಜಶೇಖರ್‌, ಗ್ರಾಪಂ ಅಧ್ಯಕ್ಷ ಜವರೇಗೌಡ, ಗ್ರಾಪಂ ಸದಸ್ಯರಾದ ಜಿ.ಸಿ.ಮಹದೇವಶೆಟ್ಟಿ ಹಾಗೂ ಇನ್ನು ಹಲವು ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next