Advertisement

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

11:56 PM Jul 31, 2021 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ಪ್ರಥಮ ಪದವಿ ತರಗತಿಗಳಿಗೆ ಆ. 4ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಆನ್‌ಲೈನ್‌ ಮೂಲಕ ಇದನ್ನು ನಡೆಸಲು ಏಕೀಕೃತ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ (ಯುಯುಸಿಎಂಎಸ್‌) ಜಾರಿಗೆ ತರಲಾಗಿದೆ.

Advertisement

ಪ್ರತೀ ವರ್ಷ ದ್ವಿತೀಯ ಪಿಯುಸಿ ಫ‌ಲಿತಾಂಶದ ಮರುದಿನವೇ ಪದವಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತಿತ್ತು. ಆದರೆ 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆ ಮೂಲಕ ನಡೆಸುವುದಕ್ಕಾಗಿ ಹೊಸ ತಂತ್ರಾಂಶ ರೂಪಿಸಿರು ವುದರಿಂದ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ. ಆ. 14ರಿಂದ ರಾಜ್ಯದ ಎಲ್ಲ ಅರ್ಹ ವಿದ್ಯಾರ್ಥಿಗಳು ಏಕೀಕೃತ ವ್ಯವಸ್ಥೆಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತೀ ಕಾಲೇಜಿನಲ್ಲೂ ಇದಕ್ಕಾಗಿ ಹೆಲ್ಪ್ ಡೆಸ್ಕ್ ರಚಿಸಿ, ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಇಲಾಖೆ ಸೂಚಿಸಿದೆ.

ದ್ವಿತೀಯ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳು ಆ. 4ರಿಂದ https://uucms.karnataka.gov.in/  ಮೂಲಕ ಅರ್ಜಿ ಸಲ್ಲಿಸಬಹುದು.

ಶುಲ್ಕ ಹೆಚ್ಚಳವಿಲ್ಲ :

2020-21ನೇ ಸಾಲಿನ ಶುಲ್ಕವನ್ನೇ ಮುಂದುವರಿ ಸಲು ಸರಕಾರ ನಿರ್ಧರಿಸಿದೆ. ಪದವಿ ಕೋರ್ಸ್‌ಗಳಿಗೆ ಅರ್ಜಿ ಶುಲ್ಕ ಇಲ್ಲ. ಪ್ರವೇಶ ಶುಲ್ಕ 80 ರೂ., ಬೋಧನ 940 ರೂ., ಲ್ಯಾಬ್‌ 260 ರೂ., ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ವಿದ್ಯಾಭ್ಯಾಸ ಪ್ರಮಾಣ ಪತ್ರ, ವಾಚನಾಲಯ 140 ರೂ., ಕ್ರೀಡಾ, ಗ್ರಂಥಾಲಯ ಶುಲ್ಕ ತಲಾ 100 ರೂ., ಕಾಲೇಜು ಅಭಿವೃದ್ಧಿ 200 ರೂ., ಸ್ಕೌಟ್ಸ್‌, ರೆಡ್‌ಕ್ರಾಸ್‌ ತಲಾ 50 ರೂ., ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣನಿಧಿ ಶುಲ್ಕ ತಲಾ 25 ರೂ., ಎನ್‌ಎಸ್‌ಎಸ್‌ ಶುಲ್ಕ 90 ರೂ. ಇರಲಿದೆ.

Advertisement

ಸ್ನಾತಕೋತ್ತರಕ್ಕೆ ಶುಲ್ಕ  :

ಸ್ನಾತಕೋತ್ತರ ಕೋರ್ಸ್‌ (ಎಂಬಿಎ ವಿನಾ)ಗಳಿಗೆ ಅರ್ಜಿ ಶುಲ್ಕ 50 ರೂ., ಪ್ರವೇಶ 100 ರೂ., ಪಾಠ 1,000 ರೂ., ಪ್ರಯೋಗಾಲಯ 300 ರೂ., ವೈದ್ಯಕೀಯ ತಪಾಸಣೆ, ವರ್ಗಾವಣೆ ಮತ್ತು ವಿದ್ಯಾಭ್ಯಾಸ ಪ್ರಮಾಣ ಪತ್ರ 100 ರೂ., ವಾಚನಾಲಯ  100 ರೂ., ಕ್ರೀಡಾ, ಗ್ರಂಥಾಲಯ ಹಾಗೂ ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ ತಲಾ 100 ರೂ. ಇದರ ಜತೆಗೆ ಪ್ರವೇಶ ಶುಲ್ಕ, ನೋಂದಣಿ, ಪರೀಕ್ಷಾ ಮತ್ತು ಇನ್ನಿತರ ಶುಲ್ಕಗಳನ್ನು ಆಯಾ ವಿ.ವಿ. ವಿಧಿಸಲಿದೆ. ಎಂಬಿಎ ಸಾಮಾನ್ಯ ವಿದ್ಯಾರ್ಥಿಗಳಿಗೆ 20 ಸಾವಿರ ರೂ. ಶುಲ್ಕ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next