Advertisement

ಪದವೀಧರನಿಗೆ ಮಣೆ ಹಾಕಿದ ಮತದಾರ

07:16 PM Jan 01, 2021 | Suhan S |

ನಾಲತವಾಡ: ನಾಗಬೇನಾಳ ಗ್ರಾಪಂವ್ಯಾಪ್ತಿಯ ನಾಗಬೇನಾಳ ತಾಂಡಾದಲ್ಲಿಮತದಾರರು ಪ್ರಥಮ ಬಾರಿ ಮತ ಚಲಾಯಿಸಿದ್ದಾರೆ.

Advertisement

ನಾಗಬೇನಾಳ ತಾಂಡಾದಲ್ಲಿ ಹಿಂದಿನಿಂದಲೂ ದೇಶಮುಖ ಕುಟುಂಬದವರು ತಾಂಡಾದ ಸೂಕ್ತ ವ್ಯಕ್ತಿಯನ್ನು ಆರಿಸಿಅವಿರೋಧ ಆಯ್ಕೆ ಮಾಡಿಕೊಂಡುಬರುತ್ತಿದ್ದರು. ಆದರೆ ಈ ಬಾರಿ ಮಾತ್ರಅವಿರೋಧ ಆಯ್ಕೆ ನಡೆಯದೇ ಚುನಾವಣೆಯಲ್ಲಿ ಸ್ಪರ್ಧೆ ಏರ್ಪಟ್ಟಿತ್ತು.

ಪ್ರಥಮ ಚುನಾವಣೆ ಮಾಡುತ್ತಿರುವ ತಾಂಡಾ ನಿವಾಸಿಗಳು ಪದವೀಧರನನ್ನುಆಯ್ಕೆ ಮಾಡಿ ಗಮನ ಸೆಳೆದಿದ್ದಾರೆ. ಚುನಾವಣೆಯಲ್ಲಿ ಜಯಭೇರಿಬಾರಿಸಿದ 22 ವರ್ಷದ ರಘು ಸೋಮಪ್ಪ ಪವಾರ ಪ್ರಸ್ತುತ ವರ್ಷದಲ್ಲಿ ಬಿಎ ಪದವಿಮುಗಿಸಿದ್ದು, ಒಟ್ಟು 332 ಮತ ಪಡೆದು 61 ಮತಗಳಿಂದ ಪ್ರತಿ ಸ್ಪರ್ಧಿ ವಿರುದ್ಧ ಜಯ ಗಳಿಸಿದ್ದಾರೆ.

ಈ ವೇಳೆ ವೆಂಕಟೇಶ ನಾಯಕ್‌, ಕೃಷ್ಣಪ್ಪ ನಾಯಕ, ಚಂದಪ್ಪ ನಾಯಕ, ಮೋತಿಲಾಲ್‌ ಪೂಜಾರಿ, ಟೋಪಣ್ಣಕಾರಬಾರಿ, ಪುಟ್ಟು ರಾಥೋಡ್‌, ಜಗ್ಗುನಾಯಕ್‌, ಲಕ್ಷ್ಮಣ ನಾಯಕ, ಯಮನಪ್ಪ ಪವಾರ ಇತರರು ಇದ್ದರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next