Advertisement
2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಅ. 1ರಿಂದ ಆರಂಭವಾಗಲಿವೆ ಎಂದು ರಾಜ್ಯ ಸರಕಾರ ಈ ಹಿಂದೆ ಘೋಷಿಸಿತ್ತು. ವಿಶ್ವವಿದ್ಯಾನಿಲಯಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ನೀಡಲಾಗಿತ್ತು. ಕೊರೊನಾ ಮತ್ತು ಇತರ ಕಾರಣ ಗಳಿಂದ ಪದವಿಯ ವಿವಿಧ ಪರೀಕ್ಷೆಗಳು ವಿಳಂಬವಾಗಿದ್ದವು. ಜತೆಗೆ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಅ. 15ರ ವರೆಗೆ ನಡೆಸಲು ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಹೀಗಾಗಿ ತರಗತಿಗಳು ಸ್ವಲ್ಪ ವಿಳಂಬವಾಗಿ ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ದಾಖಲಾತಿ ನಡೆಯುತ್ತಿದೆ:
ಸರಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ನಡೆಯುತ್ತಿದೆ. 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಯಾಗಿರುವುದರಿಂದ ದಾಖಲಾತಿ ಹೆಚ್ಚಾಗಿದೆ. ಸುಮಾರು 2 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಪದವಿಗೆ ಸೇರಲಿದ್ದಾರೆ. ಹೀಗಾಗಿ ತರಗತಿ ಆರಂಭ ವಿಳಂಬವಾಗುತ್ತಿದೆ. ಉಳಿದ ಸೆಮಿಸ್ಟರ್‌ಗಳಿಗೆ ನಿರ್ದಿಷ್ಟ ವೇಳಾಪಟ್ಟಿಯಂತೆ ತರಗತಿ ನಡೆಯಲಿದೆ ಎಂದು ಕುಲಪತಿಯೊಬ್ಬರು ವಿವರಿಸಿದರು.
ಹೌಸ್‌ಫುಲ್ ಪ್ರದರ್ಶನ:
ಕೋವಿಡ್ 2ನೇ ಅಲೆಯಿಂದಾಗಿ ಎಪ್ರಿಲ್ ನಿಂದ ಬಾಗಿಲು ಮುಚ್ಚಿದ್ದ ರಾಜ್ಯದ ಬಹುತೇಕ ಚಿತ್ರಮಂದಿರಗಳು ಶುಕ್ರವಾರದಿಂದ ಹೌಸ್‌ಫುಲ್ ಪ್ರದರ್ಶನದೊಂದಿಗೆ ತೆರೆದುಕೊಳ್ಳಲಿವೆ. ಸರಕಾರ ಅ. 1ರಿಂದ ಇದಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಹೊಸ ಸಿನೆಮಾಗಳು ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳು ಅವುಗಳನ್ನು ಸ್ವಾಗತಿಸಲು ಸಿಂಗಾರಗೊಂಡಿವೆ.
ದಾಖಲಾತಿ ಪ್ರಕ್ರಿಯೆ ನಡೆಯುತ್ತಿ ರುವುದರಿಂದ ಅಕ್ಟೋಬರ್ ಮೊದಲ ಅಥವಾ 2ನೇ ವಾರದಲ್ಲಿ ತರಗತಿ ಆರಂಭವಾಗಲಿದೆ. ಆಡಳಿತಾತ್ಮಕ ಸೂಚನೆಗಳನ್ನು ನೀಡುತ್ತಿರುತ್ತೇವೆ. –ಪಿ. ಪ್ರದೀಪ್, ಆಯುಕ್ತ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ