Advertisement

ಲೈಂಗಿಕ ದಮನಿತರ ಕುರಿತು ವರದಿ ಸಲ್ಲಿ ಕೆ

07:12 AM Feb 14, 2017 | |

ಬೆಂಗಳೂರು: ಲೈಂಗಿಕ ದಮನಿತರ ಬದುಕಿನ ಸ್ಥಿತಿಗತಿ ಕುರಿತಂತೆ ದೇಶದಲ್ಲೇ ಪ್ರಥಮ ಬಾರಿಗೆ ಅಧ್ಯಯನ ನಡೆಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಈ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು.

Advertisement

ಲೈಂಗಿಕ ಕಾರ್ಯ ಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್‌ ಸದಸ್ಯೆ ಡಾ.ಜಯಮಾಲಾ
ಅವರು ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಲ್ಲಿಸಿದ ಸಮಿತಿ ವರದಿ ಸ್ವೀಕರಿಸಿ ಅವರು ಮಾತನಾಡಿದರು.
ಇದಕ್ಕೂ ಮೊದಲು ಜಯಮಾಲಾ ಮಾತನಾಡಿ, ಬುದ್ದದೇವ್‌ ಕರ್ಮಾಸ್ಕರ್‌ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ನಡುವಿನ ಪ್ರಕರಣ ಆಧರಿಸಿ ಸುಪ್ರೀಂಕೋರ್ಟ್‌ ಆದೇಶದಂತೆ ಲೈಂಗಿಕ ದಮನಿತರ ಬದುಕಿನ ಸ್ಥಿತಿಗತಿ ಕುರಿತಂತೆ ಅಧ್ಯಯನ ನಡೆಸಿದ ಮೊದಲ
ರಾಜ್ಯ ಕರ್ನಾಟಕವಾಗಿದೆ. ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಿಗೂ ಭೇಟಿ ನೀಡಿ ಲೈಂಗಿಕ ಕಾರ್ಯಕರ್ತೆಯರನ್ನು
ಭೇಟಿ ಮಾಡಿ ಮಾಹಿತಿ ಪಡೆದು ಅಧ್ಯಯನ ನಡೆಸಿ ವಸ್ತುನಿಷ್ಠ ವರದಿ ಸಿದ್ಧಪಡಿಸಲಾಗಿದೆ. ಎಲ್ಲ ಜಿಲ್ಲೆಗಳಿಗೆ 17,600
ಪ್ರಶ್ನಾವಳಿಗಳನ್ನು ಕಳು ಹಿಸಿ 11,300 ಉತ್ತರ ಪಡೆಯಲಾಗಿದೆ. 3000 ದಮನಿತರಿಂದ ನೇರವಾಗಿ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಪ್ರಮುಖ ಶಿಫಾರಸು: ರಾಜ್ಯದಲ್ಲಿ 8000 ಎಚ್‌ಐವಿ ಸೋಂಕಿತರು ಪೌಷ್ಠಿಕ ಆಹಾರ ಪಡೆಯಲು ಅನುಕೂಲವಾಗುವಂತೆ
ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ಏಕ ಗವಾಕ್ಷಿ ಪದ್ಧತಿಯಡಿ ಲೈಂಗಿಕ ದಮನಿತರಿಗೆ ಪುನರ್ವಸತಿ ಯೋಜನೆ ಕಲ್ಪಿಸಿ ಉದ್ಯೋಗಕ್ಕೆ ಆರ್ಥಿಕ ನೆರವು ನೀಡಬೇಕು. ಮಾನವ ಕಳ್ಳ ಸಾಗಣೆ ತಡೆಯಲು ಕಾನೂನು ಜಾರಿಗೊಳಿ ಸಬೇಕು ಎಂದು ಮನವಿ ಮಾಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next