Advertisement

1-10ನೇ ತರಗತಿವರೆಗೆ ಉಚಿತ ಶಿಕ್ಷ ಣ

07:46 PM Jun 29, 2021 | Girisha |

ಮುದ್ದೇಬಿಹಾಳ: ಮಕ್ಕಳ ಶೈಕ್ಷಣಿಕ ಪ್ರಗತಿಯೇ ನಮ್ಮ ಧ್ಯೇಯ ಎನ್ನುವ ಘೋಷವಾಕ್ಯದೊಂದಿಗೆ ಮುದ್ದೇಬಿಹಾಳ ತಾಲೂಕಿನ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ನಿರ್ಮಿಸಲು ಅಹಿಲ್ಯಾದೇವಿ ಹೋಳ್ಕರ್‌ ಶಿಕ್ಷಣ ಸಂಸ್ಥೆ ಸಜ್ಜಾಗಿದೆ. 2021-22ನೇ ಸಾಲಿಗೆ ಸರ್ವರಿಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿ ಕೋವಿಡ್‌-19ನ ಆರ್ಥಿಕ ಸಂಕಷ್ಟಕ್ಕೆ ಸ್ಪಂ ದಿಸುವ ಮಾದರಿ ಕಾರ್ಯಕ್ಕೆ ಅಣಿಯಾಗಿದೆ. ತಾಲೂಕು ಕುರುಬರ ಸಂಘದ ಅಧ್ಯಕ್ಷರೂ ಆಗಿರುವ ಡಿಪ್ಲೋಮಾ ಇನ್‌ ಸಿವಿಲ್‌ ಎಂಜಿನಿಯರಿಂಗ್‌ ಪದವೀಧರ ಮಲ್ಲಿಕಾರ್ಜುನ ಮದರಿಯವರು ಈ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ.

Advertisement

ತಾವು ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಅನುಭವಿಸಿದ ಕಷ್ಟ ಇಂದಿನ ಮಕ್ಕಳಿಗೆ ಬರಬಾರದೆನ್ನುವ ಸದುದ್ದೇಶದಿಂದ 25-30 ಕೋಟಿ ರೂ. ಖರ್ಚು ಮಾಡಿ ಪಟ್ಟಣ, 2 ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳೊಂದಿಗೆ ಶೈಕ್ಷಣಿಕ ಅಭಿಯಾನ ಆರಂಭಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂಲತಃ ಮುದ್ದೇಬಿಹಾಳ ತಾಲೂಕಿನ ಕುಗ್ರಾಮ ಕಿಲಾರಹಟ್ಟಿಯವರಾಗಿರುವ ಮದರಿಯವರು ಬಾಲ್ಯದಲ್ಲಿ ಸೈಕಲ್‌ ಮೇಲೆ, ಕಾಲ್ನಡಿಗೆಯಲ್ಲಿ ಅಂದಾಜು 10-15 ಕಿ.ಮೀ. ದೂರದಲ್ಲಿರುವ ನಾಲತವಾಡಕ್ಕೆ ತೆರಳಿ ಶಾಲೆ ಕಲಿತವರು. ವಿದ್ಯಾರ್ಜನೆ ಮುಗಿದ ಮೇಲೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಲೇ ಬಂದ ಲಾಭದಲ್ಲಿ ಸಮಾಜಕ್ಕೆ ನೆರವಾಗುವ ಪರಿಪಾಠ ಬೆಳೆಸಿಕೊಂಡು ಸಮಾಜ ಸೇವಾ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ.

ಮುದ್ದೇಬಿಹಾಳದಲ್ಲಿ ಅಭ್ಯುದಯ ಪಿಯು ಸೈನ್ಸ್‌ ಕಾಲೇಜು ಆರಂಭಿಸುವ ಮೂಲಕ 4-5 ವರ್ಷಗಳ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಮದರಿಯವರು ಹಲವಾರು ಪ್ರಯೋಗಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡತೊಡಗಿದ್ದಾರೆ. 1-10ನೇ ತರಗತಿವರೆಗಿನ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸತೊಡಗಿದ್ದಾರೆ. ಇದೀಗ ಕೊರೊನಾ ಆರ್ಭಟಕ್ಕೆ ಕಡಿವಾಣ ಬಿದ್ದು ಶೈಕ್ಷಣಿಕ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿರುವುದನ್ನು ಮನಗಂಡು ಆಯಾ ಶಾಲೆಗಳಲ್ಲಿ ಕಲಿಕಾ ಚಟುವಟಿಕೆಗೆ ಅವಕಾಶ ಕಲ್ಪಿಸತೊಡಗಿದ್ದಾರೆ. ಇವರ ಶಿಕ್ಷಣ ದಾಸೋಹಕ್ಕೆ ತಂದೆ, ಸಂಸ್ಥೆ ಅಧ್ಯಕ್ಷ ಎನ್‌.ಎಸ್‌. ಪೂಜಾರಿ ಮತ್ತು ಸಹೋದರರು ಬೆನ್ನೆಲುಬಾಗಿ ನಿಂತಿದ್ದಾರೆ.

ಎಲ್ಲೆಲ್ಲಿವೆ ಶಾಲಾ ಕಟ್ಟಡಗಳು?: ಮುದ್ದೇಬಿಹಾಳ ಪಟ್ಟಣದಲ್ಲಿ 4 ವರ್ಷಗಳ ಹಿಂದೆ ಅಂದಾಜು 15-20 ಕೋಟಿ ರೂ. ವೆಚ್ಚದಲ್ಲಿ ಸೈನ್ಸ್‌ ಪಿಯು ಕಾಲೇಜು, ಹೊಸದಾಗಿ ಹಾಸ್ಟೇಲ್‌, ಪ್ರಾಥಮಿಕ, ಪ್ರೌಢ ಶಾಲೆಗಳ 4 ಅಂತಸ್ತಿನ ಸಂಕೀರ್ಣ; ಅಂದಾಜು 10 ಕೊಟಿ ರೂ. ವೆಚ್ಚದಲ್ಲಿ ಅಡವಿಹುಲಗಬಾಳ, ಕೋಳೂರು-ಯರಗಲ್ಲ ಭಾಗದಲ್ಲಿ 3 ಅಂತಸ್ತಿನ ಸಂಕೀರ್ಣಗಳನ್ನು ಕಟ್ಟಿಸಿದ್ದಾರೆ. ಮುದ್ದೇಬಿಹಾಳ, ಕೋಳೂರು-ಯರಗಲ್ಲ ಭಾಗದ ಅಭ್ಯುದಯ ಇಂಟರ್‌ನ್ಯಾಷನಲ್‌ ಶಾಲೆಗಳು ಲೋಕಾರ್ಪಣೆಗೊಂಡಿವೆ. ಅಡವಿಹುಲಗಬಾಳ ಶಾಲೆ ಲೋಕಾರ್ಪಣೆಗೆ ಸಜ್ಜಾಗಿದೆ.

ಸುಸಜ್ಜಿತ-ನುರಿತ ಶಿಕ್ಷಕರ ತಂಡ: ಎಲ್ಲ ಕಡೆಯೂ ಸುಸಜ್ಜಿತ ಕಟ್ಟಡಗಳನ್ನು ಹೊಂದಿರುವ ಶಾಲೆಗಳಲ್ಲಿ ಕೇರಳ, ಕರ್ನಾಟಕದ ಶಿರಸಿ, ಕಾರವಾರ, ಮಂಗಳೂರು ಭಾಗದ ಸಂದರ್ಶನದ ಮೂಲಕ ಆಯ್ಕೆಗೊಂಡಿರುವ ನುರಿತ ಶಿಕ್ಷಕರ ತಂಡ ಬೋಧನೆಗೆ ಸಜ್ಜಾಗಿದೆ. ತೃಪ್ತಿಕರ ಸಂಬಳದ ಜೊತೆಗೆ ಸೌಲಭ್ಯಗಳು ಸಿಗುತ್ತಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿ  ಸಲು ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗಿದೆ. ಸರ್ಕಾರದ ಅಂತಿಮ ತೀರ್ಮಾನದ ನಂತರ ಇವರು 2021-22ನೇ ಸಾಲಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅಣಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next