Advertisement

ಜಿ.ಆರ್‌. ವಿಶ್ವನಾಥ್‌ ಬಿಡುಗಡೆ ಮಾಡುತ್ತಾರೆ “ಟಗರು’ಟೀಸರ್‌

01:25 PM Nov 04, 2017 | |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವನ್ನು ಅವರ ಅಭಿಮಾನಿ ಸಂಘಗಳೇ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಚಿತ್ರದ ಟೀಸರ್‌ ಯಾರು ಬಿಡುಗಡೆ ಮಾಡುತ್ತಾರೆ ಎಂಬ ವಿಷಯ ಆಗ ಬಹಿರಂಗವಾಗಿರಲಿಲ್ಲ.

Advertisement

ಈಗ ಕೊನೆಗೂ ಬಯಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟಿಗ ಜಿ.ಆರ್‌. ವಿಶ್ವನಾಥ್‌, “ಟಗರು’ ಚಿತ್ರದ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಹೌದು, ಶಿವರಾಜಕುಮಾರ್‌ ಅವರ ಅಭಿಮಾನಿ ಸಂಘಗಳಾದ ಶಿವು ಅಡ್ಡ ಮತ್ತು ರಾಜ್‌ ಡೈನಾಸ್ಟಿ, ಮುಂದಿನ ತಿಂಗಳು ಅಂದರೆ ನವೆಂಬರ್‌ 7ರ ಸಂಜೆ ಟೌನ್‌ ಹಾಲ್‌ನಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ರಕ್ಷಿತ್‌ ಶೆಟ್ಟಿ, ಸಚಿವ ಡಿ.ಕೆ. ಶಿವಕುಮಾರ್‌, ನಿರ್ದೇಶಕ ಸೂರಿ, ಧನಂಜಯ್‌, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್‌ ಸೇರಿದಂತೆ ಹಲವರು ಭಾಗವಹಿಸಿಲಿದ್ದಾರೆ.

ಅಂದು ಟೀಸರ್‌ ಬಿಡುಗಡೆಯ ಜೊತೆಗೆ, ಶಿವರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ಅವರ ಹಾಡುಗಳಿಗೆ ನೃತ್ಯ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ. ಇನ್ನು “ಟಗರು’ ಚಿತ್ರವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಶ್ರೀಕಾಂತ್‌ ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಚರಣ್‌ರಾಜ್‌ ಸಂಯೋಜಿಸಿರುವ ಹಾಡುಗಳು ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದುರ್ಗ ಅಥವಾ ಹೊಸಪೇಟೆಯಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. “ಟಗರು’ ಚಿತ್ರವನ್ನು “ದುನಿಯಾ’ ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಅವರದ್ದೇ. ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಚರಣ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next