Advertisement
ಕಳೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲಾ ಪಂಚಾಯಿತಿಯಲ್ಲಿ 34 ಸ್ಥಾನಗಳು ಇದ್ದವು. ಈ ಸಾರಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಿ 38ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಸದ್ಯ ಚುನಾವಣಾ ಆಯೋಗ ಹೊರಡಿಸಿರುವ ವರ್ಗವಾರು ಮೀಸಲಾತಿ ಕೋಷ್ಠಕದನ್ವಯ ಒಟ್ಟು 38ಕ್ಷೇತ್ರಗಳ ಪೈಕಿ 19 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿಗೆ 6ಸ್ಥಾನಗಳಿದ್ದು, ಅದರಲ್ಲಿ 3ಮಹಿಳೆಯರಿಗೆ, ಅನುಸೂಚಿತ ಪಂಗಡದಲ್ಲಿ ಮೀಸಲಿರುವ 4ಸ್ಥಾನಗಳ ಪೈಕಿ 2 ಮಹಿಳೆಯರಿಗೆ, ಹಿಂದುಳಿದ ಅ ವರ್ಗಕ್ಕೆ ಮೀಸಲಿಟ್ಟಿರುವ 7ಸ್ಥಾನಗಳಲ್ಲಿ 4 ಮಹಿಳೆಯರಿಗೆ ಮೀಸಲಾಗಿವೆ.
Related Articles
Advertisement
ಮತದಾರರ ಪಟ್ಟಿ ಪ್ರಕಟವೂ ವಿಳಂಬ:
ಜಿಪಂ, ತಾಪಂ ಚುನಾವಣೆಗೆ ಸಂಬಂಧಿ ಸಿದ ಮತದಾರರ ಪಟ್ಟಿಯನ್ನು ಏ.30ರಂದು ಪ್ರಕಟಿಸಲು ಚುನಾವಣಾ ಆಯೋಗ ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೆ, ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆಯಾಗಿರುವುದರಿಂದ ಮತದಾರರ ಪಟ್ಟಿಯ ಮುದ್ರಣಕ್ಕೆ, ಇತರೆ ಸರಬರಾಜಿಗೆ ಹಾಗೂ ಇತರೆ ಕಾರ್ಯಗಳಿಗೆ ಅಡ್ಡಿಯಾಗಿದೆ. ಇದರಿಂದ ಏ.30ರಂದು ಪ್ರಕಟಿಸಬೇಕಿದ್ದ ಅಂತಿಮ ಮತದಾರರ ಪಟ್ಟಿಯನ್ನು ಮೇ 15ಕ್ಕೆ ಮುಂದೂಡಲಾಗಿದೆ ಎಂದು ಆಯೋಗದ ಅ ಧೀನ ಕಾರ್ಯದರ್ಶಿಗಳು ಜಿಲ್ಲಾ ಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ಚುನಾವಣೆ ಅನುಮಾನ:
ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಚುನಾವಣೆ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲ್ಲ. ಆದರಿಂದ ಮೇ-ಜೂನ್‌ನಲ್ಲಿ ನಡೆಯಬೇಕಿದ್ದ ಜಿಪಂ-ತಾಪಂ ಚುನಾವಣೆಯನ್ನು ಮುಂದೂಡುವ ಅನಿವಾರ್ಯತೆ ಇದೆ. ಹೀಗಾಗಿ, ಮುಂದಿನ 6ತಿಂಗಳ ಅವಧಿ ಗೆ ಮುಂದೂಡುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಸದ್ಯ ಚುನಾವಣೆ ನಡೆಯುವುದು ಅನುಮಾನ.