Advertisement

ಭಾರತ್‌ದಾಲ್‌ ಬ್ರ್ಯಾಂಡ್‌ನ‌ಡಿ ಸಬ್ಸಿಡಿ ದರದಲ್ಲಿ ಕಡಲೆಬೇಳೆ

10:16 PM Jul 17, 2023 | Team Udayavani |

ನವದೆಹಲಿ: ದೇಶದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಬೇಳೆಕಾಳುಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿ “ಭಾರತ್‌ ದಾಲ್‌’ ಬ್ರ್ಯಾಂಡ್‌ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕೆ.ಜಿ.ಗೆ 60 ರೂ.ಗಳಂತೆ ಸಬ್ಸಿಡಿ ದರದಲ್ಲಿ ಕಡಲೆಬೇಳೆಯನ್ನು ಒದಗಿಸಲು ಮುಂದಾಗಿದೆ.

Advertisement

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌, ಭಾರತ್‌ ದಾಲ್‌ ಮಾರಾಟಕ್ಕೆ ಚಾಲನೆ ನೀಡಿದ್ದಾರೆ.

ಈಗಾಗಲೇ ದೆಹಲಿ ಎನ್‌ಸಿಆರ್‌ನಾದ್ಯಂತ ಭಾರತ್‌ ದಾಲ್‌ ಮಾರಾಟ ಮಾಡಲಾಗುತ್ತಿದ್ದು, ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (ನಫೇಡ್‌) ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ ಎನ್‌ಸಿಸಿಎಫ್, ಕೇಂದ್ರಿಯ ಭಂಡಾರ್‌ ಹಾಗೂ ಮದರ್‌ ಡೈರಿ ಸಫ‌ಲ್‌ನಲ್ಲಿಯೂ ಭಾರತ್‌ ದಾಲ್‌ ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ.

ರಾಜ್ಯ ಸರ್ಕಾರಗಳು ಕೂಡ ತಮ್ಮ ಕಲ್ಯಾಣ ಯೋಜನೆಗಳ ಅನ್ವಯ ಕಡಲೆಬೇಳೆ ನೀಡಲು, ಅವುಗಳ ಖರೀದಿಗೆ ಅವಕಾಶ ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next