Advertisement

ಡಿಕೆಶಿ ಬಗ್ಗೆ ಗೌಡರ ಮೃದು ಮಾತು: ರಾಜಕೀಯ ವಲಯದಲ್ಲಿ ಕುತೂಹಲ

11:09 AM Sep 04, 2017 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಮಾರಂಭವೊಂದರಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಬಗ್ಗೆ ಮೃಧು ಧೋರಣೆಯ ಮಾತುಗಳಾಡಿರುವ ಬಗ್ಗೆ ಜೆಡಿಎಸ್‌ನಲ್ಲಿ ಅಚ್ಚರಿ ಮೂಡಿಸಿದೆ.

Advertisement

ಮೊದಲಿನಿಂದಲೇ ರಾಜಕೀಯವಾಗಿ ಎಣ್ಣೆ-ಸೀಗೇ ಕಾಯಿಯಂತಿದ್ದ ದೇವೇಗೌಡ ಹಾಗೂ ಡಿ.ಕೆ. ಶಿವಕುಮಾರ್‌ ಇತ್ತೀಚಿನ ದಿನಗಳಲ್ಲಿ ಹತ್ತಿರವಾಗುತ್ತಿರುವುದು, ಸಮುದಾಯದ ವಿಚಾರದಲ್ಲಿ ಮತ್ತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಕುತೂಹಲಕ್ಕೂ ಕಾರಣವಾಗಿದೆ. ಶಿವಕುಮಾರ್‌ ವಿರುದ್ಧ ಸದಾ ಆಕ್ರೋಶ  ವ್ಯಕ್ತಪಡಿಸಿ ರಾಮ ನಗರ ಜಿಲ್ಲೆಯ ಘಟನೆಗಳ ಬಗ್ಗೆ ಟೀಕಿಸುತ್ತಿದ್ದ ದೇವೇಗೌಡರು ಮೈತ್ತ ಗಾಗಿ ಶಿವಕುಮಾರ್‌ ಅವರಿಗೂ ಮುಖ್ಯ ಮಂತ್ರಿಯಾಗುವ ಶಕ್ತಿ ಇದೆ. ಆದರೆ, ಅಷ್ಟು ಸುಲಭಕ್ಕೆ ಅವರ ಪಕ್ಷದಲ್ಲೇ ಬಿಡುವುದಿಲ್ಲ ಎಂಬರ್ಥದ ಮಾತುಗಳಾಡುತ್ತಿರುವುದು ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಒಕ್ಕಲಿಗರ ಸಂಘದಲ್ಲಿ ಬಿರುಕು ಉಂಟಾಗಿದ್ದಾಗಲೂ ಡಿ.ಕೆ.ಶಿವಕುಮಾರ್‌ ಅವರು ಖುದ್ದಾಗಿ ದೆಹಲಿಯಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದರು. ನಂತರ ವಿಧಾನ ಸೌಧ ಬ್ಯಾಂಕ್ವೆಂಟ್‌ ಸಭಾಂಗಣದಲ್ಲಿ ನಡೆದ ಕೆಂಪೇ ಗೌಡ ಜಯಂತಿ ಕಾರ್ಯ ಕ್ರಮದಲ್ಲೂ ಗೌಡರ ಕಾಲಿಗೆ ನಮಸ್ಕರಿಸಿದ್ದರು. ಇದೀಗ ಐಟಿ ದಾಳಿ ನಂತರ ಮೊದಲ ಬಾರಿಗೆ ಶನಿವಾರ ನಡೆದ ಕೃಷಿಕ್‌ ಸರ್ವೋದಯ ಫೌಂಡೇಷನ್‌ನ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಶನಿವಾರ ಡಿ.ಕೆ. ಶಿವಕುಮಾರ್‌ ಮತ್ತು ದೇವೇ ಗೌಡರು ಆಸೀನರಾಗಿದ್ದರು.

ದೇವೇಗೌಡರು ಡಿ.ಕೆ.ಶಿವಕುಮಾರ್‌ ಅವರಿಗೂ ಮುಖ್ಯಮಂತ್ರಿಯಾಗೋ ಶ ಯಿದೆ ಎಂದು ಹೇಳಿದರು. ಇದಕ್ಕೆ ಶಿವಕುಮಾರ್‌ ಅವರು ಮುಗುಳ್ನಕ್ಕು ಕೈ ಮುಗಿದರು. ನಂತರ ದೇವೇಗೌಡರಿಗೆ ಸನ್ಮಾನ ಮಾಡುವ ಸಂದರ್ಭದಲ್ಲೂ ಕಾಲಿಗೆ ನಮಸ್ಕರಿಸಿದರು. ತಮ್ಮ ಭಾಷಣದ ವೇಳೆ, ಗೌಡರ ಗುಣ ಗಾನ ಮಾಡಿದರು. ಇದು ರಾಜ ಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next