Advertisement

ಕಳಗಿ ಕೊಲೆ: ಸಿಐಡಿಗೆ ವಹಿಸಲು ಗೌಡ ಸಮಾಜ ಆಗ್ರಹ

02:31 AM Apr 09, 2019 | mahesh |

ಸುಳ್ಯ: ಕೊಡಗು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷರು, ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ, ಯುವ ನಾಯಕರಾಗಿ, ಗೌಡ ಸಮಾಜದ ಮುಂದಾಳು ಕಳಗಿ ಬಾಲಚಂದ್ರರ ಅವರ ಕೊಲೆ ಪ್ರಕರಣದ ಬಗೆಗಿನ ಷಡ್ಯಂತ್ರ ಹೊರಗೆಳೆಯುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟ ಮತ್ತು ಸುಳ್ಯ ಗೌಡರ ಯುವ ಸೇವಾ ಸಂಘ ಆಗ್ರಹಿಸಿದರು.

Advertisement

ಬಂಧಿತ ಕೆಲ ಆರೋಪಿಗಳು ಆರ್ಥಿಕವಾಗಿ ಬಲಾಡ್ಯರಾಗಿದ್ದು, ಕೇಸಿನ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕೆ ಕೆಲವು ಪೊಲೀಸ್‌ ಅಧಿಕಾರಿಗಳ ಸಹಕಾರವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದುದರಿಂದ ವಿಶೇಷ ತನಿಖಾಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸುಳ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಪೂರ್ವಾಧ್ಯಕ್ಷ‌ ದಿನೇಶ್‌ ಮಡಪ್ಪಾಡಿ, ಕೋಶಾಧಿಕಾರಿ ತೇಜಪ್ರಸಾದ್‌ ಅಮಚೂರು, ಕಾರ್ಯದರ್ಶಿ ಸಂತೋಷ್‌ ಮಡ್ತಿಲ, ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಿಲ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೆರಿಯಾನ ಜಯಾನಂದ, ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಮೆ ಸೀತಾರಾಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next