Advertisement

ಮೋದಿಗೆ ಅಧಿಕಾರದ ಹಪಾಹಪಿ ಪ್ರಧಾನಿ ವಿರುದ್ಧ ಗೌಡರ ಕಿಡಿ 

01:28 AM Mar 18, 2019 | |

ಶಿವಮೊಗ್ಗ: ರಾಜ್ಯದ ಹೈವೋಲ್ಟೆàಜ್‌ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ರಣಕಹಳೆ ಮೊಳಗಿಸಿದೆ. ಎಲ್ಲ ಪಕ್ಷಗಳಿಗಿಂತ ಮೊದಲು ಈ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿ ಘೋಷಿಸಿದ್ದ ಜೆಡಿಎಸ್‌, ಭಾನುವಾರ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಅಧಿಕೃತ ಪ್ರಚಾರ ಆರಂಭಿಸಿದೆ.

Advertisement

ಸಮಾರಂಭದಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದಟಛಿ ವಾಗ್ಧಾಳಿ ನಡೆಸಿದರು. ಸಮಾವೇಶಕ್ಕೆ ಚಾಲನೆ ನೀಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮೋದಿಗೆ ಅಧಿಕಾರದ ಹಪಾಹಪಿ ಹೆಚ್ಚಿದೆ. ಮತ್ತೂಮ್ಮೆ ಅಧಿಕಾರ ಹಿಡಿಯಲು ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಮೋದಿಯವರು ಎಐಎಡಿಎಂಕೆ ಹಾಗೂ ಶಿವಸೇನಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಹಿಂದೆ 282 ಸ್ಥಾನ ಗೆದ್ದ ಬಿಜೆಪಿಗೆ ಇಂಥ ಸನ್ನಿವೇಶ ಯಾಕೆ ಬಂತು ಎಂಬುದರ ಬಗ್ಗೆ ಜನ ಯೋಚಿಸಬೇಕಿದೆ ಎಂದು ಹೇಳಿದರು.

ಮೋದಿಯವರು 5 ವರ್ಷ ಮೋಡಿ ಮಾಡಲಿಲ್ಲ. ರಾಡಿ ಮಾಡಿದರು. ಈ ಬಾರಿಯೂ ಜನ ಎಚ್ಚರ ತಪ್ಪಿದರೆ ಮುಂದೆ ಘೋರ ಅಪಾಯ ಕಾದಿದೆ. ಸಂವಿಧಾನ ಬದಲಾವಣೆಗೆ ಹೊರಟವರಿಗೆ ನಾವು ಬುದ್ಧಿ  ಕಲಿಸಬೇಕಿದೆ. ಇಂದಿರಾಗಾಂಧಿ  ಅವರ ತುರ್ತು ಪರಿಸ್ಥಿತಿಗಿಂತ ಕಷ್ಟದ ದಿನಗಳು ಬರಲಿವೆ.
● ವೈಎಸ್‌ವಿ ದತ್ತಾ ಜೆಡಿಎಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ.

ಏ.3ಕ್ಕೆ ನಾಮಪತ್ರ ಸಲ್ಲಿಕೆ
ಮಧು ಬಂಗಾರಪ್ಪ ಮಾತನಾಡಿ, “ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ನನ್ನ ಎರಡು ಕಣ್ಣುಗಳಿದ್ದಂತೆ. ಕುಮಾರಸ್ವಾಮಿ ಅವರು ನನ್ನ ಅಣ್ಣನಿದ್ದಂತೆ. ಡಿ.ಕೆ.ಶಿವಕುಮಾರ್‌ ಅವರು ನನ್ನ ತಂದೆ ಬಂಗಾರಪ್ಪ ಅವರ ಶಿಷ್ಯ,ಜೊತೆಗೆ ನನ್ನ ಹಿತೈಷಿ. ನಾನು ಏ.3ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಅಂದು ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಆಗಮಿಸಲಿದ್ದಾರೆ. ಹಿಂದಿನ ಉಪಚುನಾವಣೆ ಪ್ರಿಪ್ರಟರಿ ಪರೀಕ್ಷೆಯಾಗಿತ್ತು. ಅಂದು ಯಾವ ತಪ್ಪುಗಳಾಗಿದ್ದವೋ ಅವುಗಳನ್ನು ಇಂದು ಸರಿಪಡಿಸಿಕೊಂಡಿದ್ದೇವೆ.ಗ್ರಾಪಂ ಮಟ್ಟಕ್ಕೆ ಹೋಗಿ ಈ ಬಾರಿ ಪ್ರಚಾರ ಮಾಡುತ್ತೇವೆ. ಈ ಬಾರಿ ಗೆಲುವು ಸಾ ಧಿಸಿಯೇ ತೀರುತ್ತೇವೆ’ ಎಂದರು.

ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಎಂಟೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಹಾಕಲಾಗುವುದು. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಬಿಎಸ್‌ಪಿಗೆ ಹೋಗಿರುವ ಡ್ಯಾನಿಶ್‌ ಅಲಿಗೆ ಒಳ್ಳೆಯದಾಗಲಿದೆ. ● ಎಚ್‌.ಡಿ.ದೇವೇಗೌಡ,ಮಾಜಿ ಪ್ರಧಾನಿ.

Advertisement

ಶಿವಣ್ಣ- ಗೀತಾ ನನ್ನ ತಂದೆ- ತಾಯಿ ಇದ್ದಂತೆ
ಶಿವಮೊಗ್ಗ: “ಶಿವಣ್ಣ ಹಾಗೂ ಗೀತಾ ಶಿವರಾಜ್‌ ಕುಮಾರ್‌ ನನ್ನ ತಂದೆ ತಾಯಿ ಇದ್ದ ಹಾಗೆ. ಗೀತಾ ಶಿವರಾಜ್‌ಕುಮಾರ್‌ ಅವರು ಈ ಬಾರಿಯೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, “ಶಿವಮೊಗ್ಗ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಎಂದು ಎಲ್ಲರೂ ಒಪ್ಪಿ ಹೆಸರು ಘೋಷಿಸಿದ್ದಾರೆ. ನಾನು ಏ.17ರಿಂದ ಅ ಧಿಕೃತವಾಗಿ ಅಖಾಡಕ್ಕೆ ಇಳಿದಿದ್ದೇನೆ. ಒಂದು ವಾರದಲ್ಲಿ ಶಿಕಾರಿಪುರದಲ್ಲಿ ಸಭೆ ನಡೆಸಿ, ನಮ್ಮ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ. ಕಾಂಗ್ರೆಸ್‌- ಜೆಡಿಎಸ್‌ ಎನ್ನದೇ, ಎಲ್ಲರೂ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ. ನನ್ನ ಅಣ್ಣನ ಸ್ಥಾನದಲ್ಲಿ ನಿಂತು, ಡಿ.ಕೆ.ಶಿವಕುಮಾರ್‌ ಅವರು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next