Advertisement

ನಿಮ್ಮಲ್ಲಿ ಐಫೋನ್‌,ಮ್ಯಾಕ್‌ಬುಕ್‌,ಆ್ಯಪಲ್‌ ವಾಚ್‌ಗಳಿದ್ದರೆ ಬೇಗನೆ ಅಪ್‌ಡೇಟ್‌ ಮಾಡಿಕೊಳ್ಳಿ

12:59 PM Dec 16, 2021 | Team Udayavani |

ನವದೆಹಲಿ: “ನಿಮ್ಮ ಐಫೋನ್‌, ಮ್ಯಾಕ್‌ಬುಕ್‌, ಆ್ಯಪಲ್‌ ವಾಚ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಿ’  - ಹೀಗೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ.

Advertisement

ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (ಸಿಇಆರ್‌ಟಿ-ಇನ್‌) ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಆ್ಯಪಲ್‌ ಉತ್ಪನ್ನಗಳನ್ನೇ ಗುರಿಯಾಗಿರಿಸಿ ದಾಳಿ ಮಾಡುವ ಮಾಲ್‌ವೇರ್‌ ಒಂದು ಶೀಘ್ರದಲ್ಲಿಯೇ ತೊಂದರೆ ಸೃಷ್ಟಿಸುವ ಸಾಧ್ಯತೆ ಇದೆ.

ಹೀಗಾಗಿ, ಐಫೋನ್‌, ಮ್ಯಾಕ್‌ಬುಕ್‌, ಆ್ಯಪಲ್‌ ವಾಚ್‌, ಆ್ಯಪಲ್‌ ಟಿವಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ:ಪಕ್ಷ ನಿಷ್ಠನ ಮೇಲ್ಮನೆ ಪ್ರವೇಶ ಕನಸು ನನಸು !

ಈ ಉತ್ಪನ್ನಗಳನ್ನು ಬಳಕೆ ಮಾಡುವವರು, ಮೆಮೊರಿ ವ್ಯವಸ್ಥೆ ನಿರ್ವಹಣೆ, ಇನ್‌ಪುಟ್‌ ವ್ಯಾಲಿಡೇಷನ್‌ ಸೇರಿ ಹಲವು ತಾಂತ್ರಿಕ ಅಂಶಗಳನ್ನು ಸೂಕ್ತವಾಗಿ ನಿರ್ವಹಿಸದೇ ಇದ್ದುದರಿಂದ ಮಾಲ್‌ವೇರ್‌ ದಾಳಿ ಮಾಡಲಿದೆ ಎಂದು ಹೇಳಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next