Advertisement

ಮೂರು ಕೃಷಿ ಕಾಯ್ದೆಗಳನ್ನು ಹೇಗೆ ರದ್ದುಪಡಿಸಲಾಗುತ್ತದೆ? ಇದರ ಕಾನೂನು ಪ್ರಕ್ರಿಯೆ ಹೇಗೆ

11:23 AM Nov 19, 2021 | Team Udayavani |

ನವದೆಹಲಿ:ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ನವೆಂಬರ್ 19) ಗುರು ನಾನಕ್ ಜಯಂತಿ ಅಂಗವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಘೋಷಿಸಿದ್ದು, ಮುಂಬರುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮೂರು ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದರು.

Advertisement

ಇದನ್ನೂ ಓದಿ:ಆಸೀಸ್ ಟೆಸ್ಟ್ ನಾಯಕತ್ವ ತ್ಯಜಿಸಿದ ಟಿಮ್ ಪೇನ್: ಮುಳುವಾಯಿತು 4 ಹಿಂದಿನ ‘ಮೆಸೇಜ್’

ನಾನು ಏನೇ ಮಾಡಲಿ ಅದು ರೈತರಿಗಾಗಿ. ನಾನೇನಾದರು ಮಾಡಿದ್ದರೆ ಅದು ದೇಶಕ್ಕಾಗಿ. ಮುಂಬರುವ ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಸಾಂವಿಧಾನಿಕ ಕ್ರಮಗಳ ಮೂಲಕ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ನವೆಂಬರ್ 29ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬರ್ 23ರಂದು ಅಧಿವೇಶನ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಹಾಗಾದರೆ ಭಾರತದಲ್ಲಿ ಕೃಷಿ ಕಾಯ್ದೆಯನ್ನು ಹೇಗೆ ರದ್ದುಗೊಳಿಸುವುದು ಹೇಗೆ ? ಎಂಬ ಬಗ್ಗೆ ಹಿರಿಯ ನ್ಯಾಯಶಾಸ್ತ್ರಜ್ಞ ಸುಭಾಶ್ ಕಷ್ಯಪ್ ಮಾಹಿತಿ ನೀಡಿದ್ದಾರೆ.

Advertisement

ಯಾವುದೇ ಕಾಯ್ದೆಯನ್ನು ಜಾರಿಗೆ ತರುವ ವಿಧಾನದಲ್ಲಿಯೇ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಬೇಕಾಗುತ್ತದೆ. ಮುಂಬರುವ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆಯನ್ನು ಮಂಡಿಸಬಹುದಾಗಿದೆ. ಈ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದ ನಂತರ ಚರ್ಚೆ ನಡೆಸಿ, ಮತಕ್ಕೆ ಹಾಕಬೇಕಾಗುತ್ತದೆ. ಇದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬುದು ರಾಜಕೀಯ ಪ್ರಕ್ರಿಯೆಯ ಮೇಲೆ ನಿಂತಿದೆ. ವಿಪಕ್ಷಗಳು ಸಂಸತ್ ಕಲಾಪವನ್ನು ಸುಗಮವಾಗಿ ನಡೆಸಲು ಬಿಡುತ್ತವೆಯೇ ಎಂಬುದು ಕೂಡಾ ಪ್ರಶ್ನೆಯಾಗಿದೆ ಎಂದು ಕಶ್ಯಪ್ ಹೇಳಿದರು.

ತಿದ್ದುಪಡಿ ಮಸೂದೆಯ ಪ್ರಸ್ತಾಪವನ್ನು ಸಂಬಂಧಿತ ಕಾನೂನು ಸಚಿವಾಲಯಕ್ಕೆ ಕಳುಹಿಸಬೇಕಾಗುತ್ತದೆ. ನಂತರ ಕಾನೂನು ಸಚಿವಾಲಯ ಅದನ್ನು ಕಾನೂನು ದೃಷ್ಟಿಕೋನದಲ್ಲಿ ಪರಿಶೀಲನೆ ನಡೆಸಲಿದೆ. ನಂತರ ಸಚಿವರು ಆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ಕಷ್ಯಪ್ ವಿವರ ನೀಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ರೈತರು 2020ರ ನವೆಂಬರ್ 28ರಿಂದ ದೆಹಲಿಯ ಹಲವು ಗಡಿಭಾಗಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next