Advertisement

ತುರ್ತು ಸ್ಥಿತಿಯಲ್ಲಿ ಟೆಲಿಕಾಂ ಕಂಪೆನಿ ವಶಕ್ಕೆ ಪಡೆಯಲು ಸರಕಾರಕ್ಕೆ ಅವಕಾಶ: ಮಸೂದೆ‌ ಮಂಡನೆ

12:54 AM Dec 19, 2023 | Team Udayavani |

ಹೊಸದಿಲ್ಲಿ: ಅತ್ಯಂತ ತುರ್ತು ಸಂದರ್ಭಗಳಲ್ಲಿ ದೂರಸಂಪರ್ಕ ಕಂಪೆನಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯುವ ಅಧಿಕಾರವನ್ನು ಸರಕಾರಕ್ಕೆ ನೀಡುವಂತಹ “ದೂರಸಂಪರ್ಕ ಮಸೂದೆ 2023′ ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.

Advertisement

ಪ್ರಾಕೃತಿಕ ವಿಪತ್ತಿನ ನಿರ್ವಹಣೆ ಸೇರಿ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗಾಗಿ ಕೇಂದ್ರ ಅಥವಾ ರಾಜ್ಯ ಸರಕಾರದ ವತಿಯಿಂದ ನಿಗದಿಗೊಳಿಸಿದ ಅಧಿಕಾರಿ ದೂರಸಂಪರ್ಕ ಕಂಪೆನಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಬಹುದು. ದೂರಸಂಪರ್ಕ ಜಾಲವನ್ನು ಕೂಡ ಸ್ಥಗಿತಗೊಳಿಸಬಹುದು. ಅಂತರಿಕ್ಷದಿಂದ ನೇರ ಇಂಟರ್‌ನೆಟ್‌ ಸೇವಾ ಸಂಸ್ಥೆಗಳಿಗೆ ಹರಾಜು ಇಲ್ಲದೆ ಸ್ಪೆಕ್ಟ್ರಂ ನೀಡಬಹುದು ಎಂಬ ಅಂಶಗಳು ಈ ಮಸೂದೆಯಲ್ಲಿವೆ. ಮಾನ್ಯತೆ ಪಡೆದಿರುವ ಮಾಧ್ಯಮ ಸಂಸ್ಥೆಗಳಿಗೆ ಕೊಂಚ ವಿನಾಯಿತಿ ಪ್ರಕಟಿಸಲಾಗಿದೆ. ರಾಷ್ಟ್ರೀಯ ಭದ್ರತಾ ನಿಯಮಗಳ ವ್ಯಾಪ್ತಿಯಲ್ಲಿ ನಿಷೇಧಕ್ಕೆ ಒಳಗಾ ಗದೇ ಇದ್ದರೆ, ನಿಗದಿತ ಸಂಸ್ಥೆ ಮತ್ತು ಸಿಬಂದಿಗೆ ಸಿಗುವ ಮಾಹಿತಿಯ ಪ್ರಸಾರಕ್ಕೆ ನಿಷೇಧ ಹೇರಲಾಗದು ಎಂದು ನಮೂದಿಸಲಾಗಿದೆ.

ಮಸೂದೆ ಅಂಗೀಕಾರ: ಭಾರತೀಯ ಅಂಚೆಯನ್ನು ನಾಗರಿಕ ಕೇಂದ್ರಿತ ಸೇವಾ ಜಾಲವಾಗಿ ಪರಿವರ್ತಿಸುವ ಉದ್ದೇಶವಿರುವ ಅಂಚೆ ಕಚೇರಿ ಕಾಯ್ದೆ ಸಂಸತ್‌ನಲ್ಲಿ ಅಂಗೀಕಾರಗೊಂಡಿದೆ. ಜತೆಗೆ ಪುದುಚೇರಿ, ಜಮ್ಮು – ಕಾಶ್ಮೀರದಲ್ಲಿ ಮಹಿಳಾ ಮೀಸಲಾತಿ ಕಾನೂನು ಅನ್ವಯಗೊಳ್ಳುವಂತೆ ಮಾಡುವ ಕೇಂದ್ರಾಡಳಿತ ಪ್ರದೇಶಗಳ ಸರಕಾರ ಮಸೂದೆ ಮತ್ತು ಜಮ್ಮು-ಕಾಶ್ಮೀರ ಮರುಸಂಘಟನೆ ಮಸೂದೆವೂ ಪಾಸ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next