Advertisement

ಕಮೋವ್‌ ಕಾಪ್ಟರ್‌ಖರೀದಿಗೆ ಒಪ್ಪಂದ

07:02 AM Jun 04, 2018 | |

ಹೊಸದಿಲ್ಲಿ: ರಷ್ಯಾದಿಂದ 200 ಕಮೋವ್‌ ಹೆಲಿಕಾಪ್ಟರ್‌ ಖರೀದಿಸುವ ಒಪ್ಪಂದಕ್ಕೆ ಕೇಂದ್ರ ಸರಕಾರ ಶೀಘ್ರದಲ್ಲೇ ಸಹಿ ಹಾಕಲಿದೆ. ಹಿಂದೂಸ್ತಾನ ಏರೋನಾಟಿಕ್ಸ್‌ ಲಿ. ಹಾಗೂ ರಷ್ಯನ್‌ ಹೆಲಿಕಾಪ್ಟರ್ಸ್‌ ಮಧ್ಯೆ ಈ ಒಪ್ಪಂದ ನಡೆಯಲಿದ್ದು, ಈಗಾಗಲೇ ಕರ್ನಾಟಕದ ತುಮಕೂರಿನಲ್ಲಿ ಉತ್ಪಾದನೆ ಘಟಕ ಸ್ಥಾಪನೆಗೆ ಸ್ಥಳ ನಿಗದಿಗೊಳಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಕಮೋವ್‌ ಕೆಎ 226 ಟಿ ಕಾಪ್ಟರ್‌ಗಳ ಖರೀದಿ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ 60 ಕಾಪ್ಟರ್‌ಗಳನ್ನು ಸಿದ್ಧ ಸ್ಥಿತಿಯಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ನಂತರದ 140 ಕಾಪ್ಟರ್‌ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next