Advertisement

ಪವನ್‌ ಹನ್ಸ್‌ ಯಾರ ತೆಕ್ಕೆಗೆ?: ಇಂದು ನಿರ್ಧಾರ

12:45 AM Apr 23, 2022 | Team Udayavani |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಹೆಲಿಕಾಪ್ಟರ್‌ ಸೇವಾದಾರ ಸಂಸ್ಥೆ ಪವನ್‌ ಹನ್ಸ್‌ ಲಿಮಿಟೆಡ್‌ನ‌ ಮಾರಾಟವನ್ನು ಶನಿವಾರವೇ ಕೇಂದ್ರ ಸರಕಾರ ಅಂತಿಮಗೊಳಿಸಲಿದೆ.

Advertisement

ಜೆಎಸ್‌ಡಬ್ಲ್ಯು ಸ್ಟೀಲ್‌ ಲಿ., ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌ ಲಿ. ಸೇರಿದಂತೆ ಹಲವು ಕಂಪೆನಿಗಳು ಬಿಡ್‌ ಸಲ್ಲಿಸಿದ್ದು, ಬಿಡ್‌ ಗೆದ್ದವರು ಯಾರು ಎಂಬುದನ್ನು ಶನಿವಾರ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ಅಧಿಕಾರಿಗಳ ಸಮಿತಿಯು ನಿರ್ಧರಿಸಲಿದೆ.

ಸಚಿವರ ಸಮಿತಿಯ ಒಪ್ಪಿಗೆ ದೊರೆತ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. 2023ರ ಮಾರ್ಚ್‌ ನೊಳಗಾಗಿ ಕೆಲವು ಕಂಪೆನಿಗಳಲ್ಲಿರುವ ಅಲ್ಪ­ಪ್ರಮಾಣದ ಷೇರುಗಳ ಮಾರಾಟ ಸೇರಿದಂತೆ ಒಟ್ಟಾರೆ ಬಂಡವಾಳ ವಾಪಸಾತಿ ಪ್ರಕ್ರಿಯೆ ಮೂಲಕ 650 ಶತಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next