Advertisement
ಹೊಸದಾಗಿ ನಿರ್ಮಾಣವಾಗಲಿರುವ “ನ್ಯೂ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯಾ’ದಲ್ಲಿ ಈ ವಿಶೇಷತೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ನವ ಸಂಸತ್ ಭವನ, ನೂತನ ಶಕ್ತಿಕೇಂದ್ರ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಗೆ ನೂತನ ನಿವಾಸ ನಿರ್ಮಾಣ ಸೇರಿದಂತೆ ಬಹುದ್ದೇಶದ “ಸೆಂಟ್ರಲ್ ವಿಸ್ತಾ ಯೋಜನೆ’ಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆ ರಾಷ್ಟ್ರಪತಿ ಭವನದಿಂದ ಜನಪಥ್‌ವರೆಗಿನ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವುದರಿಂದ ಜನಪಥ್‌ನಲ್ಲೇ ಇರುವ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಎಲ್ಲಿಗೆ ಸ್ಥಳಾಂತರ?:
ಯೋಜನೆಯ ನೀಲನಕ್ಷೆಯ ಅನುಸಾರ, ಈಗಿರುವ ಸಂಸತ್ ಭವನದ ನೌರ್ತ್ ಮತ್ತು ಸೌತ್ ಬ್ಲಾಕ್‌ಗಳ ನಡುವಿನ 5 ಲಕ್ಷ ಚದುರಡಿ ವಿಸ್ತೀರ್ಣದ ಜಾಗದಲ್ಲಿ ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
Related Articles
Advertisement
ಹೊಸ ಸಂಗ್ರಹಾಲಯದ ವಿಶೇಷತೆ– ಈಗಿರುವ 2 ಲಕ್ಷ ಚದುರಡಿ ವಿಸ್ತೀರ್ಣವಿರುವ ವಸ್ತುಸಂಗ್ರಹಾಲಯ ಮುಂದೆ 5 ಲಕ್ಷ ಚದುರಡಿ ವಿಸ್ತೀರ್ಣದ ಕಟ್ಟಡಕ್ಕೆ ಸ್ಥಳಾಂತರ.
– ಮುಂದಿನ ನೂರು ವರ್ಷಗಳಲ್ಲಿ ಸಂಗ್ರಹಿಸಲಾಗುವ ಪುರಾತನ ಅಥವಾ ಚಾರಿತ್ರಿಕವಾಗಿ ಮಹತ್ವವೆನಿಸುವ ವಸ್ತುಗಳಿಗೂ ಸ್ಥಳಾವಕಾಶ
– ಜರ್ಮನಿ, ಫ್ರಾನ್ಸ್, ನೆದರ್ಲೆಂಡ್ ಸೇರಿದಂತೆ ಹಲವು ಮುಂದುವರಿದ ದೇಶಗಳಲ್ಲಿರುವಂಥ ಕೇಂದ್ರೀಕೃತ ಸಂಗ್ರಹಾಗಾರ ತಂತ್ರಜ್ಞಾನ ಅಳವಡಿಕೆ
– ಹೊಸ ಸಂಗ್ರಹಾಲಯದಲ್ಲಿ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದ ಆರ್ಟ್ಸ್ ಹಾಗೂ ನ್ಯಾಷನಲ್ ಆಕೈವ್ಸ್‌ನಲ್ಲಿನ ವಸ್ತುಗಳು, ಪುಸ್ತಕಗಳೂ ಹೊಸ ಸಂಗ್ರಹಾಲಯಕ್ಕೆ ಸೇರುವ ಸಾಧ್ಯತೆ. 1.96 ಲಕ್ಷ – ಈಗಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರುವ ಪುರಾತನ ವಸ್ತುಗಳು
2 ಲಕ್ಷ ಚದರಡಿ – ಈಗಿರುವ ವಸ್ತುಸಂಗ್ರಹಾಲಯದ ವಿಸ್ತೀರ್ಣ
5 ಲಕ್ಷ ಚದರಡಿ – ಹೊಸ ವಸ್ತುಸಂಗ್ರಹಾಲಯದಲ್ಲಿ ಇರುವ ಸ್ಥಳಾವಕಾಶ