Advertisement

ಜೆಎನ್‌ಯು ಘರ್ಷಣೆ: ಕೇಂದ್ರಕ್ಕೆ ತಿವಿದ ಸೇನೆ

09:36 AM Nov 22, 2019 | Team Udayavani |

ಮುಂಬಯಿ: ಜೆಎನ್‌ಯು ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರ ಅಮಾನವೀಯ ಲಾಠಿಚಾರ್ಜ್ ಅನ್ನು ಶಿವಸೇನೆ ಖಂಡಿಸಿದೆ. ಈ ಘಟನೆಗೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಹೇಳಿದೆ.

Advertisement

ಹೊಸದಿಲ್ಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇಂದ್ರದ ಮೇಲಿದೆ. ಶುಲ್ಕ ಹೆಚ್ಚಳವನ್ನು ವಿರೋಧಿಸಿ ಸಂಸತ್ತಿನತ್ತ ಮೆರವಣಿಗೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿದೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಇಂತಹ ಘಟನೆ ನಡೆದಿದ್ದರೆ ಬಿಜೆಪಿ ಸಂಸತ್ತಿನಲ್ಲಿ ರಾದ್ಧಾಂತ ಮಾಡುತ್ತಿತ್ತು. ಮಾತ್ರವಲ್ಲದೇ ಎಬಿವಿಪಿಯಂತಹ ಸಂಸ್ಥೆಗಳು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡುತ್ತಿದ್ದವು ಎಂದು ಸೇನೆಯ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದೆ.

ವಿವಿಗಳಲ್ಲಿ ಎಡಪಂಥ ಮತ್ತು ಬಲಪಂಥ ಎಂದು ವಿಂಗಡಿಸುವುದು ಸರಿಯಲ್ಲ. ವಿಶ್ವವಿದ್ಯಾನಿಲಯವು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ, ಕೆಲವು ಉನ್ನತ ರಾಜಕಾರಣಿಗಳು ಮತ್ತು ತಜ್ಞರನ್ನು ದೇಶ ಮತ್ತು ವಿಶ್ವಕ್ಕೆ ನೀಡಿದೆ. ಅಂತಹ ವಿದ್ಯಾ ಕೇಂದ್ರಗಳು ಘರ್ಷಣೆಯ ಕೇಂದ್ರಗಳಾಗಿ ಬದಲಾಗಬಾರದು ಸೇನೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next