Advertisement
ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, ಸರಕಾರವು ನಿಯಮಕ್ಕೆ ಅನುಗುಣವಾಗಿಯೇ ನ್ಯಾ|ಜೋಸೆಫ್ ಹೆಸರನ್ನು ಮರು ಪರಿಶೀಲಿಸುವಂತೆ ಕೋರಿದೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ವಿವಾದ ಇತ್ಯರ್ಥ ಆಗುವವರೆಗೆ ನ್ಯಾ| ಇಂದು ಮಲ್ಹೋತ್ರಾ ನೇಮಕಕ್ಕೆ ತಡೆ ತರಬೇಕು ಎಂಬ ಕೆಲವರ ಕೋರಿಕೆಯನ್ನು ಒಪ್ಪಲಾಗದು ಎಂದೂ ಸಿಜೆಐ ಹೇಳಿದ್ದಾರೆ.
ಪುಟಗಳ ಪತ್ರ ಬರೆದಿದ್ದಾರೆ. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳು ಇರುವಾಗ ಕೊಲೀಜಿಯಂ ಶಿಫಾರಸು ಸಮಂಜಸ ವಲ್ಲ. ಈ ಬಗ್ಗೆ ಕಾರಣ ಕೊಡಬೇಕು ಎಂದಿದೆ. ಕಾಂಗ್ರೆಸ್ ಆಕ್ಷೇಪ
ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ, ನ್ಯಾಯಾಂಗದ ಸ್ವಾತಂತ್ರ್ಯವೇ ಅಪಾಯದಲ್ಲಿದೆ ಎಂದು ಟೀಕಿಸಿದ್ದಾರೆ. ನಮ್ಮ ನ್ಯಾಯಾಂಗ ಒಟ್ಟಾಗಿ ನಿಲ್ಲದೇ ಇದ್ದರೆ ಪ್ರಜಾ ಪ್ರಭುತ್ವಕ್ಕೇ ಅಪಾಯ ಬಂದೀತು ಎಂದಿದ್ದಾರೆ.