Advertisement
ನೋಯ್ಡಾದಲ್ಲಿ ಮಾರುತಿ ಸುಜುಕಿ ಮತ್ತು ಟೊಯೋಟಾ ತುಷೋ ಜಂಟಿ ಸಹಭಾಗಿತ್ವದಲ್ಲಿ ಹಳೆಯ ಕಾರು ವಿಲೇವಾರಿ ಕೇಂದ್ರ ಉದ್ಘಾಟನೆಯ ಸಂದರ್ಭದಲ್ಲಿ ಗಡ್ಕರಿ ಮಾತ ನಾಡಿದರು. ಎರಡೂ ಸಂಸ್ಥೆಗಳು ಜತೆಯಾಗಿ ಸಿದ್ಧಗೊಳಿಸಿದ ಮತ್ತು ಕೇಂದ್ರ ಸರಕಾರದಿಂದ ಅನುಮೋದನೆ ಪಡೆದ ಮೊದಲ ವಾಹನ ಗುಜರಿ ಕೇಂದ್ರ ಇದಾಗಿದೆ.
Related Articles
Advertisement
ಇದನ್ನೂ ಓದಿ:“ಆಯುಷ್ಮಾನ್’ಗೆ ಖಾಸಗಿ ಆಸ್ಪತ್ರೆಗಳನ್ನು ಆಕರ್ಷಿಸಲು ಕ್ರಮ
ಹೊಸ ಕೇಂದ್ರದ ವಿಶೇಷ?ಮಾರುತಿ ಸುಜುಕಿ ಇಂಡಿಯಾ ಮತ್ತು ಟೊಯೋಟಾ ತುಷೋ ನೋಯ್ಡಾದಲ್ಲಿ ಈ ಘಟಕವನ್ನು ಸ್ಥಾಪಿಸಿದೆ. ರಾಷ್ಟ್ರೀಯ ವಾಹನ ಗುಜರಿ ನೀತಿ ಪ್ರಕಟಿಸಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಬೆಂಗಳೂರು ಸೇರಿ ದೇಶದ 26 ನಗರಗಳಲ್ಲಿ ಸ್ಕ್ರಾಪಿಂಗ್ ಘಟಕ ಆರಂಭಿಸಲು ಅನುಮತಿ ನೀಡಲಾಗಿತ್ತು. ನಿಮಗೇನು ಲಾಭ?
ಸ್ಕ್ರಾಪ್ ಮಾಡಿಸಿದ ಬಳಿಕ ನಿಮಗೆ ಸಂಸ್ಥೆ ಒಂದಿಷ್ಟು ಹಣವನ್ನು ನೀಡಲಿದೆ. ಹಾಗೆಯೇ ಅದರ ಜತೆಯಲ್ಲಿ ಗಾಡಿಯ “ವಿನಾಶ ಪ್ರಮಾಣ ಪತ್ರ’ ನೀಡಲಾಗುವುದು. ಸ್ವಯಂ ಪ್ರೇರಿತವಾಗಿ ಹಳೆ ವಾಹನಗಳನ್ನು ಸ್ಕ್ರಾಪ್ ಮಾಡಿಸುವವರಿಗೆ ಸರಕಾರ ವಿವಿಧ ಸೌಲಭ್ಯ ನೀಡಲಿದೆ. ಹೊಸ ವಾಹನ ಖರೀದಿಸುವಾಗ ರಸ್ತೆ ತೆರಿಗೆಯಲ್ಲಿ ಶೇ. 25 ರಿಯಾಯಿತಿ, ಉಚಿತ ನೋಂದಣಿ ನೀಡಲಾಗುವುದು. ಹಾಗೆಯೇ ಹಳೆ ವಾಹನ ಸ್ಕ್ರಾಪ್ ಮಾಡಿ ಹೊಸ ವಾಹನ ಖರೀದಿಸುವವರಿಗೆ ಶೇ. 5 ರಿಯಾಯಿತಿ ನೀಡಲು ವಾಹನ ಉತ್ಪಾದಕ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ. ಸ್ಕ್ರಾಪಿಂಗ್ ಹೇಗೆ?
-ಮೊದಲು ವಾಹನದ ಕೀಲೆಣ್ಣೆ, ಇಂಧನ, ಕೂಲರ್‌ಗಳನ್ನು ತೆಗೆಯಲಾಗುವುದು.
– ಎರಡನೇ ಹಂತದಲ್ಲಿ ಕಾರಿನ ಬಾಗಿಲು, ಬಾನೆಟ್, ಸೀಟು, ಡ್ಯಾಶ್‌ಬೋರ್ಡ್‌ಗಳನ್ನು ತೆಗೆದು ಹಾಕಲಾಗುವುದು.
-ಮುಖ್ಯ ಮೆಕಾನಿಕಲ್ ಭಾಗಗಳಾದ ಎಂಜಿನ್, ಸಸ್ಪೆನ್ಶನ್ ತೆಗೆದು, ಚಾಸಿಸ್ ನಂಬರ್ ತೆಗೆಯಲಾಗುತ್ತದೆ.
-ಕೊನೆಯದಾಗಿ ಉಳಿಯುವ ಬಾಡಿಯನ್ನು ಕುಗ್ಗಿಸಿ, ಕಬ್ಬಿಣ ಕರಗಿಸುವವರಿಗೆ ಮಾರಾಟ ಮಾಡಲಾಗುವುದು.