Advertisement

2 ಹೊಸ ಗರ್ಭನಿರೋಧಕಗಳ ಬಿಡುಗಡೆ: ಕರ್ನಾಟಕದಲ್ಲೂ ಲಭ್ಯ

11:55 AM Sep 06, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಎರಡು ಹೊಸ ಬಗೆಯ ಗರ್ಭನಿರೋಧಕಗಳನ್ನು ಪರಿಚಯಿಸಿದ್ದು,  ಇವು ದೇಶಾದ್ಯಂತ ವೈದ್ಯಕೀಯ ಕಾಲೇಜುಗಳು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಲಿದೆ. 

Advertisement

ಕುಟುಂಬ ಯೋಜನೆಗೆ ಒತ್ತು ನೀಡುವ ನಿಟ್ಟಿನಲ್ಲಿ “ಮಿಷನ್‌ ಪರಿವಾರ್‌ ವಿಕಾಸ್‌’ ಯೋಜನೆಯಡಿ ಚುಚ್ಚುಮದ್ದಿನ ರೂಪದ ಮತ್ತು ಗುಳಿಗೆ ರೂಪದ ಎರಡು ಗರ್ಭನಿರೋಧಕಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಪಶ್ಚಿಮ ಬಂಗಾಳ, ಒಡಿಶಾ, ದೆಹಲಿ ಮತ್ತು ಗೋವಾದಲ್ಲಿ ಇವುಗಳನ್ನು ಪರಿಚಯಿಸಲಾಗಿದೆ. ಚುಚ್ಚುಮದ್ದಿನ ರೂಪದಲ್ಲಿರುವ “ಅಂತರ’ ಗರ್ಭನಿರೋಧಕವು 3 ತಿಂಗಳು ಹಾಗೂ “ಚಾಯಾ’ ಗುಳಿಗೆ ಒಂದು ವಾರಗಳ ಕಾಲ ಪರಿಣಾಮಕಾರಿಯಾಗಿರುತ್ತದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next